Top Newsಕ್ರಿಕೆಟ್ಸುದ್ದಿ

ವಿಶ್ವ ಚೆಸ್ ಚಾಂಪಿಯನ್‌ಶಿಪ್​ ಗೆದ್ದ ಬಳಿಕ ಗುಕೇಶ್ ಬಾಲ್ಯದ ವಿಡಿಯೋ ವೈರಲ್

ಗುರುವಾರ ನಡೆದ ವಿಶ್ವ ಚೆಸ್ ಚಾಂಪಿಯನ್‌ಶಿಪ್‌ನ 14ನೇ ಮತ್ತು ಅಂತಿಮ ಸುತ್ತಿನ ಪಂದ್ಯದಲ್ಲಿ ಭಾರತದ ಗ್ರ್ಯಾಂಡ್‌ಮಾಸ್ಟರ್ ಡಿ.ಗುಕೇಶ್ ಅವರು ಚೀನಾದ ಡಿಂಗ್ ಲಿರೆನ್ ಅವರನ್ನು ಸೋಲಿಸುವ ಮೂಲಕ ಚೆಸ್ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ. ಇದರ ಜೊತೆಗೆ 18ನೇ ವಯಸ್ಸಿಗೆ ಚಾಂಪಿಯನ್ ಆಗುವ ಮೂಲಕ ಚೆಸ್ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಅತ್ಯಂತ ಕಿರಿಯ ಚೆಸ್ ಪಟು ಎಂಬ ದಾಖಲೆಯನ್ನು ಸೃಷ್ಟಿಸಿದ್ದಾರೆ.

18 ವರ್ಷದ ಗುಕೇಶ್ 7.5-6-5 ಅಂಕಗಳ ಅಂತರದಿಂದ ಲಿರೆನ್ ಅವರನ್ನು ಸೋಲಿಸುವ ಮೂಲಕ ವಿಶ್ವ ಪ್ರಶಸ್ತಿಯನ್ನು ಗೆದ್ದುಕೊಂಡರು. ಇದರೊಂದಿಗೆ ಬರೋಬ್ಬರಿ 12 ವರ್ಷಗಳ ಬಳಿಕ ಭಾರತೀಯ ಚೆಸ್ ಆಟಗಾರನೊಬ್ಬ ಈ ಪ್ರಶಸ್ತಿಯನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಈ ವಿಶ್ವ ಕಿರೀಟ ಗೆದ್ದಾಗ ಗುಕೇಶ್ ಅವರಿಗೆ ಕೇವಲ 18 ವರ್ಷ, 8 ತಿಂಗಳು ಮತ್ತು 14 ದಿನಗಳಷ್ಟೇ. ಇಷ್ಟು ಸಣ್ಣ ವಯಸ್ಸಲ್ಲಿ ವಿಶ್ವಚಾಂಪಿಯನ್ ಆದ ಮತ್ತೊಬ್ಬ ಚೆಸ್ ಪಟುವಿಲ್ಲ. ಈ ಹಿಂದೆ 1985ರಲ್ಲಿ ಚೆಸ್ ದಂತಕತೆ ರಷ್ಯಾದ ಗ್ಯಾರಿ ಕ್ಯಾಸ್ಪರೋವ್ ಅವರು ವಿಶ್ವ ಚಾಂಪಿಯನ್ ಶಿಪ್ ಗೆದ್ದಾಗ ಅವರಿಗೆ 22 ವರ್ಷ, 6 ತಿಂಗಳು ಮತ್ತು 27 ದಿನಗಳಾಗಿದ್ದವು.

ಖುಷಿಯಲ್ಲಿ ಅತ್ತೇ ಬಿಟ್ಟ ಗುಕೇಶ್

ಅಂದರೆ ಇನ್ನೂ ಹದಿಹರೆಯ ಮುಗಿಯುವ ಮುನ್ನವೇ ಚಿಗುರು ಮೀಸೆಯ ಈ ಯುವಕ ವಿಶ್ವ ಚೆಸ್ ದೊರೆಯಾಗಿ ಕುಳಿತಿದ್ದಾನೆ. ಖುಷಿಯಾಗದೆ ಇನ್ನೇನು? ಜೀವಮಾನದ ಕನಸು ಸಾಕಾರಗೊಂಡ ಕ್ಷಣವದು. ಅದೇ ಖುಷಿಯಲ್ಲಿ ಒಂದು ಕ್ಷಣ ಮೂಕನಾದ ತಾನು ಚೆಸ್ ಆಡಿದ ಕುರ್ಚಿಯಲ್ಲೇ ಒಂದು ಕ್ಷಣ ಕೂತು ಅಳು ತಡೆಯಲಾರದೆ ಅತ್ತೇ ಬಿಟ್ಟರು. ಪಂದ್ಯದಲ್ಲಿ ಸೋಲನುಭವಿಸಿದ ಚೀನಾದ ಯುವ ಟೆಸ್ ಆಟಗಾರ ಡಿಂಗ್ ಲಿರಿನ್ ಅವರು ಗುಕೇಶ್ ಗೆ ಶುಭಾಶಯ ತಿಳಿಸಿ ನಿರಾಸೆಯಿಂದ ತೆರಳಿದರು.


ಈ ಬಗ್ಗೆ ಪಂದ್ಯದ ಬಳಿಕ ಮಾತನಾಡಿದ ಗುಕೇಶ್, “ಈ ರಾತ್ರಿ ನಾನು ನಿದ್ರಿಸುವುದಿಲ್ಲ ಎಂಬುದು ನನಗೆ ತಿಳಿದಿದೆ. ನಾನು ನನ್ನ ಗೆಳೆಯರೊಂದಿಗೆ, ತಂಡದ ಜೊತೆ ಸಂತಸದಿಂದ ಸಮಯ ಕಳೆಯುತ್ತೇನೆ. ಬಳಿಕ ಮನೆಗೆ ಮರಳುತ್ತೇನೆ.’’ ಎಂದಿದ್ದಾರೆ.

ಈ ಗಳಿಗೆಗಾಗಿ ಕಳೆದ 10 ವರ್ಷದಿಂದ ಕನಸು ಕಾಣುತ್ತಿದ್ದೆ. ಕನಸು ನನಸಾಗಿದ್ದಕ್ಕೆ ಈಗ ಖುಷಿಯಾಗುತ್ತಿದೆ. ನಾನು ಸ್ವಲ್ಪ ಭಾವುನಾಗಿದ್ದು ನಿಜ. ಈ ಪಂದ್ಯದಲ್ಲಿ ಗೆಲ್ಲುತ್ತೇನೆಂದು ನಾನು ಅಂದುಕೊಂಡಿರಲಿಲ್ಸ. ಆದರೆ ನನಗೆ ಗೆಲುವಿನತ್ತ ಮುನ್ನುಗ್ಗಲು ಒಂದು ಅವಕಾಶ ಸಿಕ್ಕಿತು ಎಂದಿದ್ದಾರೆ.

2013ರಲ್ಲಿ ವಿಶಿ ಸರ್( ವಿಶ್ವನಾಥನ್ ಆನಂದ್ ಮತ್ತು ಮಾಗ್ನಸ್ ಪಂದ್ಯವನ್ನು ನೋಡಿದ ಬಳಿಕ ನಾನೂ ಒಂದು ದಿನ ಆ ಸ್ಥಳದಲ್ಲಿ ಕುಳಿತುಕೊಳ್ಳಬೇಕುಂದು ಇಚ್ಛಿಸಿದ್ದೆ. ಭಾರತದ ದ್ವಜದ ಮುಂದೆ ಕುಳಿತು ಆಡಿರುವುದೇ ನನ್ನ ಜೀವನದ ಅತ್ಯುತ್ತಮ ಗಳಿಗೆ” ಎಂದು ತಿಳಿಸಿದ್ದಾರೆ.

ಆರೇಳು ವರ್ಷದವನಿದ್ದಾಗಿಂದಲೇ ಈ ಕನಸನ್ನು ಹೊತ್ತು ಜೀವಿಸುತ್ತಿದ್ದೇನೆ. ಇದು ಪ್ರತಿಯೊಬ್ಬ ಚೆಸ್ ಆಟಗಾರನೂ ಈ ಗಳಿಗೆಯನ್ನು ಜೀವಿಸಲು ಬಯಸುತ್ತಾನೆ. ನಾನು ಈಗ ನನ್ನ ಕನಸನ್ನು ನನಸು ಮಾಡಿಕೊಂಡಿದ್ದೇನೆ” ಎಂದು ಸಂತಸ ವ್ಯಕ್ತಪಡಿಸಿದರು.

Comments (0)

Your email address will not be published. Required fields are marked *

Back to top button