ಬೆಂಗಳೂರು: ರಾಜ್ಯದ ಜನರಿಗೆ ಸರ್ಕಾರ ಶಾಕ್ ಮೇಲೆ ಶಾಕ್ ನೀಡಿದೆ. ಬಸ್ ದರ ಏರಿಕೆ, ಮೆಟ್ರೋ ದರ ಏರಿಕೆ, ಹಾಲಿನ ದರ ಏರಿಕೆ ಬಳಿಕ ಈಗ ವಿದ್ಯುತ್ ದರ ಏರಿಕೆ ಮಾಡಿ ರಾಜ್ಯ ಸರ್ಕಾರ ಜನರಿಗೆ ಶಾಕ್ ಕೊಟ್ಟಿದೆ.
ಕಳೆದ ಹಲವು ತಿಂಗಳಿನಿಂದ ವಿದ್ಯುತ್ ದರ ಏರಿಕೆ ಬಗ್ಗೆ ಚರ್ಚೆಗಳು ನಡೆಯುತ್ತಿತ್ತು. ಇದೀಗ ಕೊನೆಗೂ ಅಧಿಕೃತವಾಗಿ ದರ ಪರಿಷ್ಕರಣೆ ಘೋಷಣೆ ಆಗಿದೆ.
ಇದೀಗ ಪ್ರತಿ ಯೂನಿಟ್ಗೆ 36ಪೈಸೆ ಹೆಚ್ಚಳ ಮಾಡಿ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (KERS) ಗುರುವಾರ(ಮಾ.27) ಆದೇಶ ಹೊರಡಿಸಿದ್ದು, ಇನ್ನು ಈ ಪರಿಷ್ಕೃತ ವಿದ್ಯುತ್ ದರ ಏಪ್ರಿಲ್ 1ರಿಂದ ಜಾರಿಗೆ ಬರಲಿದ್ದು, ರಾಜ್ಯದ ಜನತೆಗೆ ವಿದ್ಯುತ್ ದರ ಬಿಸಿ ತಟ್ಟಲಿದೆ.


