ಸಂವಿಧಾನವನ್ನ ಪ್ರಮುಖವಾಗಿ ವಿದ್ಯಾರ್ಥಿಗಳಲ್ಲಿಅರಿವು ಮೂಡಿಸಲು ಹಲುವ ಕಾರ್ಯಕ್ರಮಗಳನ್ನ ರೂಪಿಸಲಾಗಿದೆ. ಅದ್ರಲ್ಲಿ ಪ್ರಮುಖವಾಗಿ ಸಾಂಸ್ಕೃತಿಕ ಪ್ರದರ್ಶನದ ಆಯೋಜನೆಗಳನ್ನ ವಿದ್ಯಾರ್ಥಿಗಳಿಗೆ ತಲುಪಿಸಲು ಕರ್ನಾಟಕ ವಸತಿ ಸಂಸ್ಥೆ ಸೊಸೈಟಿಯು ಏಕತಾ ಎಕ್ಸ್ಪೋ ಆಯೋಜನೆ ನೇತೃತ್ವ ವಹಿಸಿಕೊಂಡಿದೆ.
ಸಂಸ್ಥೆಯು 6 ರಿಂದ 12ನೇ ತರಗತಿಯ ಚಾಣಾಕ್ಷ ವಿದ್ಯಾರ್ಥಿಗಳಿಗೆ ವಾರ್ಷಿಕ ವಸ್ತು ಪ್ರದರ್ಶನಗಳನ್ನು ಆಯೋಜಿಸಿ ಅವರ ಯೋಚನಾ ಲಹರಿಯನ್ನ ಅಭಿವೃದ್ದಿಗೊಳಿಸಲಾಗುತ್ತಿದೆ. ವೈಜ್ಞಾನಿಕ ಮನೋಭಾವ, ಪ್ರಜಾಪ್ರಭುತ್ವದ ಹಾಗೂ ಮೌಲ್ಯಗಳ ಅಳವಡಿಕೆಯು ಕಾರ್ಯಕ್ರಮದ ಉದ್ದೇಶವಾಗಿದೆ.

ರಾಜ್ಯಾದ್ಯಂತ ಸಂಸ್ಥೆಗಳಲ್ಲಿ ಅಧ್ಯಯನ ಮಾಡುತ್ತಿರುವ ಸುಮಾರು 2 ಲಕ್ಷ ವಿದ್ಯಾರ್ಥಿಗಳನ್ನು ಈ ಕಾರ್ಯಕ್ರಮ ತಲುಪಲಿದೆ. ಪ್ರಸಕ್ತ ವರ್ಷದ ವಸ್ತು ಪ್ರದರ್ಶನವು ಸಂವಿಧಾನ, ಪ್ರಜಾಪ್ರಭುತ್ವದ ಆಶಯಗಳು ಸೇರಿ ರಾಜ್ಯಾದ್ಯಂತ ವಿದ್ಯಾರ್ಥಿಗಳಿಂದಲೇ 100ಕ್ಕೂ ಅಧಿಕ ವಿಷಯಗಳ ಮೇಲೆ ಸಿದ್ದವಾಗಿರುವ ಪ್ರಾಜೆಕ್ಟ್ ಗಳನ್ನು ಒಳಗೊಂಡಿದೆ.

ಈ ಕಾರ್ಯಕ್ರಮವು ವಿದ್ಯಾರ್ಥಿಗಳ ಹತ್ತಾರು ಪ್ರತಿಭೆಗಳಿಗೆ ವೇದಿಕೆಯಾಗುವ ಜೊತೆಗೆ ಅವರಲ್ಲಿ ಸಾಮಾಜಿಕ ಹಾಗೂ ಆರ್ಥಿಕ ನ್ಯಾಯದ ತತ್ವಗಳು, ದೃಢ ನಿಶ್ಚಯ, ಕಾರ್ಯಚಟುವಟಿಕೆಗಳು, ವಿವಿಧತೆಯಲ್ಲಿ ಏಕತೆ, ಸಮಾನತೆ, ಹಾಗೂ ಭಾತೃತ್ವದ ಮನೋಭಾವವನ್ನು ಜಾಗೃತಿಗೊಳಿಸಲಿದೆ. ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್, ಸ್ಮರಿಸುವುದು, ಕಾರ್ಯಕ್ರಮದ ಪ್ರಮುಖ ವಿಷಯವಾಗಿತ್ತು. ಹಾಗೆಯೇ ಅವರ ದೂರದೃಷ್ಟಿ ಹಾಗೂ ಸಮಾಜದ ಒಳಗೊಳ್ಳುವಿಕೆಯನ್ನ ಅರಿತುಕೊಳ್ಳಲು ನೆರವಾಗಿದೆ. ವಿವಿಧತೆಯಲ್ಲಿ ಏಕತೆ ಸಮಾನತೆ, ಹಾಗೂ ಭಾತೃತ್ವದ ಮೂಲಕ ಒಗ್ಗೂಡಿ ದೇಶ ನಿರ್ಮಿಸಲು ಪ್ರೇರೇಪಣೆ ನೀಡಲಾಗಿದೆ.

 

 

By admin

Leave a Reply

Your email address will not be published. Required fields are marked *

Verified by MonsterInsights