Tuesday, June 24, 2025
25.9 C
Bengaluru
Google search engine
LIVE
ಮನೆರಾಜ್ಯದೆಹಲಿ ನಂತರ ಕ್ರೈಂ ಸಿಟಿಯಾಗ್ತಿದೆಯಾ ಬೆಂಗಳೂರು?

ದೆಹಲಿ ನಂತರ ಕ್ರೈಂ ಸಿಟಿಯಾಗ್ತಿದೆಯಾ ಬೆಂಗಳೂರು?

ಬೆಂಗಳೂರು : ಸಿಲಿಕಾನ್ ಸಿಟಿ, ಗಾರ್ಡನ್‌ ಸಿಟಿ, ಐಟಿ ಸಿಟಿ ಎಂದೆಲ್ಲಾ ಹೆಸರುಗಳಿಂದ ಗುರುತಿಸಿಕೊಂಡಿರುವ ಬೆಂಗಳೂರು ನಗರ ಮಹಿಳೆಯರಿಗೆ ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ಕಾಡಲು ಶುರುವಾಗಿದೆ. ಕಾರಣ, ಬೆಂಗಳೂರು ನಗರದಲ್ಲಿ ಕಳೆದ 3 ವರ್ಷಗಳಲ್ಲಿ 444 ಅತ್ಯಾಚಾರ ಪ್ರಕರಣಗಳು ಹಾಗೂ 2439 ಮಾನಭಂಗ ಪ್ರಕರಣ ದಾಖಲಾಗಿವೆ. ಗೃಹ ಇಲಾಖೆ ನೀಡುವ ಅಂಕಿ – ಅಂಶಗಳು ನಿಜಕ್ಕೂ ಆತಂಕಕಾರಿಯಾಗಿವೆ.

2021 ರಲ್ಲಿ 116, 2022 ರಲ್ಲಿ 152 ಹಾಗೂ 2023 ರಲ್ಲಿ 176 ಐಪಿಸಿ 376 ಅಡಿಯಲ್ಲಿ ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಅಲ್ಲದೇ ರೀತಿ 2021 ರಲ್ಲಿ 573, 2022 ರಲ್ಲಿ 731 ಹಾಗೂ 2023 ರಲ್ಲಿ 1135 ಮಾನಭಂಗ ಪ್ರಕರಣಗಳನ್ನು ಐಪಿಸಿ 354 ಅಡಿಯಲ್ಲಿ ದಾಖಲು ಮಾಡಲಾಗಿದೆ. ವರ್ಷದಿಂದ ವರ್ಷಕ್ಕೆ ಪ್ರಕರಣಗಳ ಸಂಖ್ಯೆ ಏರಿಕೆ ಆಗುತ್ತಿರುವುದು ಆತಂಕಕಾರಿ.

ಅದಷ್ಟೇ ಅಲ್ಲದೆ ಮಹಿಳೆಯನ್ನು ಅವಮಾನಕಾರಿಯಾಗಿ ನಡೆಸಿಕೊಂಡ 109 ಪ್ರಕರಣಗಳು ನಗರದಲ್ಲಿ 3 ವರ್ಷಗಳಲ್ಲಿ ದಾಖಲಾದರೆ, ವರದಕ್ಷಿಣೆ ಸಾವು – 85, ಕೌಟುಂಬಿಕ ದೌರ್ಜನ್ಯ – 1698, ಅಕ್ರಮ ಸಾಗಾಟ- 445 ಹಾಗೂ ವರಕ್ಷಿಣೆ ಕಿರುಕುಳ – 2696 ಪ್ರಕರಣಗಳು ದಾಖಲಾಗಿವೆ.

ಮಹಿಳೆಯರ ಸುರಕ್ಷತೆಯ ದೃಷ್ಟಿಯಿಂದ ಸರ್ಕಾರ ಸೇಫ್ ಸಿಟಿ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆ ಅನ್ವಯ ಮಹಿಳೆಯರ ಸುರಕ್ಷತೆಗಾಗಿ ನಗರಾದ್ಯಂತ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಈ ಯೋಜನೆಯ ಫೇಸ್ 1 ಹಂತದ ಅನುಷ್ಠಾನ ಪೂರ್ಣಗೊಂಡಿದೆ. ಫೇಸ್ 2 ಹಾಗೂ ಫೇಸ್ 3 ಅನುಷ್ಠಾನ ಕಾರ್ಯ ಪ್ರಗತಿಯಲ್ಲಿದೆ.

ಅಲ್ಲದೆ ಮಹಿಳಾ ಪೊಲೀಸ್‌ ಸಿಬ್ಬಂದಿ 4 ತಂಡಗಳಿಗೆ ಸ್ವ ರಕ್ಷಣೆ ತರಬೇತಿ ನೀಡಲಾಗಿದೆ. ಹಾಗೂ ನಗರದ ಎಂಟು ಪ್ರಮುಖ ಆಸ್ಪತ್ರೆಗಳಲ್ಲಿ ಕ್ರಿಟಿಕಲ್ ಕೇರ್ ರೆನ್ಪಾನ್ಸ್ ಯೂನಿಟ್‌ ಗಳನ್ನು ತೆರೆದು ಶೋಷಣೆಗೊಳಗಾದ ಮಹಿಳೆಯರಿಗೆ ಉತ್ತಮ ರೀತಿಯಲ್ಲಿ ಸಮಾಲೋಚನೆ ಒದಗಿಸಲಾಗುತ್ತದೆ. ಇದಷ್ಟೇ ಅಲ್ಲದೆ ನಗರದಲ್ಲಿ 7500 ಕ್ಯಾಮೆರಾಗಳು, ಕಮಾಂಡ್‌ ಸೆಂಟರ್‌ಗಳು ಹಾಗೂ ನಗರದಾದ್ಯಂತ 50 ಸ್ಥಳಗಳಲ್ಲಿ ಸೇಫ್ಟಿ ಐಲ್ಯಾಂಡ್‌ಗಳನ್ನು ಸ್ಥಾಪಿಸಲಾಗಿದೆ ಎಂದು ಗೃಹ ಇಲಾಖೆ ಮಾಹಿತಿಯನ್ನು ನೀಡುತ್ತದೆ.

ಹೀಗಿದ್ದರೂ ಮಹಿಳೆಯರ ಮೇಲೆ ನಿರಂತರವಾಗಿ ದೌರ್ಜನ್ಯ ಪ್ರಕರಣಗಳು ವರದಿಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆ. ಇದನ್ನು ಪೂರ್ಣ ವಿರಾಮ ಹಾಕುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಮತ್ತಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments