ರಾಜಸ್ತಾನದ ಮಾಜಿ ಆರಂಭಿಕ ಆಟಗಾರ ರೋಹಿತ್‌ ಶರ್ಮಾ ತಮ್ಮ 40ನೇ ವಯಸ್ಸಿಗೆ ನಿಧನರಾಗಿದ್ದಾರೆ.ಇವರು ಬಹಳ ದಿನಗಳಿಂದ ಲೀವರ್‌ ಸಮಸ್ಯೆಯಿಂದ ಬಳಲುತ್ತಿದ್ದು ಚಿಕಿತ್ಸೆ ಫಲಕಾರಿಯಾಗದೇ ಇಂದು ಮೃತಪಟ್ಟಿದ್ದಾರೆ..

ಕಳೆದ ನಾಲ್ಕೈದು ದಿನಗಳಿಂದ ರೋಹಿತ್‌ ಶರ್ಮಾ ಅವರಿಗೆ ತೊಂದರೆ ಹೆಚ್ಚಾಗಿದ್ದು. ವೈದ್ಯರಿಂದ ಪ್ರಾಣ ಉಳಿಸಲು ಸಾಧ್ಯವಾಗಿಲ್ಲ.ರಾಜಸ್ಥಾನ ಪರ ಆಡಿದ್ದ ಮಾಜಿ ರಣಜಿ ಕ್ರಿಕೆಟಿಗ ರೋಹಿತ್‌ ಶರ್ಮಾ ನಿಧನರಾಗಿದ್ದಾರೆ.. 40 ವರ್ಷದ ರೋಹಿತ್‌ ರಾಜಸ್ಥಾನ ಪರವಾಗಿ ಹಲವು ರಣಜಿ ಪಂದ್ಯಗಲನ್ನು ಆಡಿದ್ದಾರೆ.ಕಳೆದ ಕೆಲವು ದಿನಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಅವರು ಇಂದು ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದ್ದಾರೆ.

ಇವರ ಹೆಸರು ಮತ್ತು ಟೀಂ ಇಂಡಿಯಾ ನಾಯಕನ ಹೆಸರೂ ಒಂದೇ ತರಹ ಇರುವುದರಿಂದ ಹಿಟ್‌ ಮ್ಯಾನ್‌ ಅಭಿಮಾನಿಗಳು ಶಾಕ್‌ ಆಗಿದ್ದರು,ಫೋಟೋ ನೋಡಿದ ಮೇಲೆ ಕ್ರಿಕೆಟಿಗರು ನಿಟ್ಟುಸಿರು ಬಿಟ್ಟಿದ್ದಾರೆ. ರಾಜಸ್ತಾನದ ಮಾಜಿ ಆಟಗಾರ ತಮ್ಮ ವೃತ್ತಿಜೀವನದಲ್ಲಿ ಒಟ್ಟು 7 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿ .166ರನ್‌ ಗಳಿಸಿದ್ದರು.ಇದಲ್ಲದೆ ಇವರು 28 ಲಿಸ್ಟ್‌ ಎ ಪಂದ್ಯಗಳನ್ನು ಸಹ ಆಡಿ .35.41 ಸರಾಸರಿಯಲ್ಲಿ 850 ರನ್‌ ಗಳಿಸಿದ್ದಾರೆ.ಈ ಬಲಗೈ ಬ್ಯಾಟ್ಸ್‌ಮನ್‌ 4 ಟಿ-20 ಪಂದ್ಯಗಳಲ್ಲಿ ಆಡಿದ್ದಾರೆ..32.75 ಸರಾಸರಿಯಲ್ಲಿ 131 ರನ್‌ಗಳನ್ನ ಗಳಿಸಿದ್ದಾರೆ..

ಸದ್ಯ ಕ್ರಿಕೆಟಿಗ ರೋಹಿತ್‌ ಆಗಲಿಕೆಯಿಂದ ಕ್ರಿಕೆಟ್‌ ಆಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

By admin

Leave a Reply

Your email address will not be published. Required fields are marked *

Verified by MonsterInsights