2020ರಲ್ಲಿ ಇಡೀ ಪ್ರಪಂಚಕ್ಕೆ ಒಕ್ಕರಿಸಿದ ಕೋವಿಡ್-19 ಸಾಂಕ್ರಾಮಿಕ ರೋಗ ನಾಲ್ಕು ವರ್ಷಗಳೇ ಕಳೆದರೂ ಸಹ ಇನ್ನೂ ಸಹ ಪೂರ್ತಿಯಾಗಿ ಈ ಪ್ರಪಂಚ ಬಿಟ್ಟು ತೊಲಗಿಲ್ಲ ನೋಡಿ. ಪ್ರತಿ ವರ್ಷ ಕೋವಿಡ್-19 ವೈರಸ್ಸಿನ ಹೊಸ ಹೊಸ ರೂಪಾಂತರಗಳು ಅಲ್ಲಲ್ಲಿ ಹುಟ್ಟಿಕೊಳ್ಳುತ್ತಲೇ ಇದ್ದು, ಅಲ್ಲಿನ ಜನರ ಆರೋಗ್ಯಕ್ಕೆ ತೊಂದರೆಯನ್ನುಂಟು ಮಾಡುತ್ತಿದೆ.
ಈಗ ಮತ್ತೆ ಹೊಸ ಕೋವಿಡ್-19 ರೂಪಾಂತರವೊಂದು ಕಾಣಿಸಿಕೊಂಡಿದೆ ನೋಡಿ. ಇದು ಹೆಚ್ಚಿದ ಪ್ರಸರಣ ಮತ್ತು ಪ್ರತಿರಕ್ಷಣಾ ಪ್ರತಿರೋಧವನ್ನು ಪ್ರದರ್ಶಿಸಿದೆ ಎನ್ನಲಾಗಿದೆ. ಯುನೈಟೆಡ್ ಸ್ಟೇಟ್ಸ್‌ನಲ್ಲಿ ಪತ್ತೆಯಾದ ಈ ಭಿನ್ನ ಗುಂಪನ್ನು ತೀವ್ರ ತೀವ್ರ ಉಸಿರಾಟದ ಸಿಂಡ್ರೋಮ್ ಕೊರೊನಾ ವೈರಸ್ 2 (SARS-CoV-2) ಫ್ಲರ್ಟ್ (FLiRT) ರೂಪಾಂತರ KP.2 ಎಂದು ಹೆಸರಿಸಲಾಗಿದೆ ಮತ್ತು ಇದು JN.1.11.1 ರ ಸ್ಪಿನ್‌ಆಫ್ ಆಗಿದೆ.