ಚಿನ್ನಸ್ವಾಮಿಯಲ್ಲಿ ಆರ್ಸಿಬಿ ಅಬ್ಬರಕ್ಕೆ ಕ್ಷಣಗಣನೆ!

ಬೆಂಗಳೂರು : ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಾಳೆ ನಡೆಯಲಿರುವ ಆರ್ಸಿಬಿ ಮತ್ತು ಸನ್ರೈಸರ್ಸ್ ಹೈದರಾಬಾದ್ ನಡುವಿನ ಹಣಾಹಣಿಗೆ ಇಡೀ ನಗರವೇ ಸಜ್ಜಾಗಿದೆ. ಕ್ರೀಡಾಂಗಣದ ಒಳಗೆ ಈಗಾಗ್ಲೇ ಅಂತಿಮ ಹಂತದ ಸಿದ್ಧತೆಗಳು ಮುಗಿದಿದ್ದು, ಪ್ರತಿಯೊಂದು ಆಸನವನ್ನೂ ಸ್ವಚ್ಛಗೊಳಿಸಿ ಅಭಿಮಾನಿಗಳ ಸ್ವಾಗತಕ್ಕೆ ಸಿದ್ಧಪಡಿಸಲಾಗಿದೆ. ಮೈದಾನದ ಹಸಿರು ಮತ್ತು ಗ್ಯಾಲರಿಗಳ ಹೊಳಪು ಪಂದ್ಯದ ಸಂಭ್ರಮವನ್ನು ಇಂದೇ ಇಮ್ಮಡಿಗೊಳಿಸುತ್ತಿದ್ದು, ನಾಳಿನ ಪಂದ್ಯಕ್ಕೆ ಬೇಕಾದ ಎಲ್ಲಾ ತಾಂತ್ರಿಕ ಕೆಲಸಗಳು ಪೂರ್ಣಗೊಂಡಿವೆ.
ವಿಶೇಷವಾಗಿ ಭದ್ರತೆಯ ದೃಷ್ಟಿಯಿಂದ ಕ್ರೀಡಾಂಗಣದ ಉದ್ದಗಲಕ್ಕೂ ಈಗಾಗ್ಲೇ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ನೆನ್ನೆ ನಡೆದ ಯಶಸ್ವಿ ‘ಮೋಕ್ ಡ್ರಿಲ್’ ಮೂಲಕ ತುರ್ತು ಪರಿಸ್ಥಿತಿಗಳನ್ನು ಎದುರಿಸಲು ಮತ್ತು ಅಭಿಮಾನಿಗಳ ಸುರಕ್ಷತೆಯನ್ನು ಖಚಿತಪಡಿಸಲು ಭದ್ರತಾ ಪಡೆಗಳು ಸಂಪೂರ್ಣವಾಗಿ ಸನ್ನದ್ಧವಾಗಿವೆ. ಕ್ರೀಡಾಂಗಣದ ಒಳಗೆ ಪ್ರವೇಶಿಸುವ ಮಾರ್ಗಗಳಿಂದ ಹಿಡಿದು ಗ್ಯಾಲರಿಗಳವರೆಗೆ ಹದ್ದಿನ ಕಣ್ಣು ಇಡಲಾಗಿದ್ದು, ಪ್ರೇಕ್ಷಕರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ವಾಕ್ಥ್ರೂ ತಪಾಸಣೆಗಳನ್ನು ಕೂಡ ಮಾಡಲಾಗಿದೆ.
ಆರ್ಸಿಬಿ ಕ್ರ್ಯೂ ಮೆಂಬರ್ಸ್ ಈಗಾಗಲೇ ಕ್ರೀಡಾಂಗಣಕ್ಕೆ ಎಂಟ್ರಿ ಕೊಟ್ಟಿದ್ದು, ಲೈಟಿಂಗ್ಸ್, ಕ್ಯಾಮೆರಾ ಸೆಟಪ್ ಮತ್ತು ಗ್ರೌಂಡ್ ಮೈನ್ಟೆನೆನ್ಸ್ ಕೆಲಸಗಳಲ್ಲಿ ಮಗ್ನರಾಗಿದ್ದಾರೆ. “ಈ ಸಲ ಕಪ್ ನಮ್ದೆ” ಅನ್ನೋ ಘೋಷಣೆಗಳ ನಡುವೆ, ನಾಳಿನ ಪಂದ್ಯವು ಒಂದು ದೊಡ್ಡ ಹಬ್ಬದಂತೆ ನಡೆಯಲು ಚಿನ್ನಸ್ವಾಮಿ ಮೈದಾನ ಈಗ ಒಂದು ಭದ್ರಕೋಟೆಯಾಗಿ ಮಾರ್ಪಟ್ಟಿದೆ.ಬೆಂಗಳೂರು : ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಾಳೆ ನಡೆಯಲಿರುವ ಆರ್ಸಿಬಿ ಮತ್ತು ಸನ್ರೈಸರ್ಸ್ ಹೈದರಾಬಾದ್ ನಡುವಿನ ಹಣಾಹಣಿಗೆ ಇಡೀ ನಗರವೇ ಸಜ್ಜಾಗಿದೆ. ಕ್ರೀಡಾಂಗಣದ ಒಳಗೆ ಈಗಾಗ್ಲೇ ಅಂತಿಮ ಹಂತದ ಸಿದ್ಧತೆಗಳು ಮುಗಿದಿದ್ದು, ಪ್ರತಿಯೊಂದು ಆಸನವನ್ನೂ ಸ್ವಚ್ಛಗೊಳಿಸಿ ಅಭಿಮಾನಿಗಳ ಸ್ವಾಗತಕ್ಕೆ ಸಿದ್ಧಪಡಿಸಲಾಗಿದೆ. ಮೈದಾನದ ಹಸಿರು ಮತ್ತು ಗ್ಯಾಲರಿಗಳ ಹೊಳಪು ಪಂದ್ಯದ ಸಂಭ್ರಮವನ್ನು ಇಂದೇ ಇಮ್ಮಡಿಗೊಳಿಸುತ್ತಿದ್ದು, ನಾಳಿನ ಪಂದ್ಯಕ್ಕೆ ಬೇಕಾದ ಎಲ್ಲಾ ತಾಂತ್ರಿಕ ಕೆಲಸಗಳು ಪೂರ್ಣಗೊಂಡಿವೆ.

ಆರ್ಸಿಬಿ ಕ್ರ್ಯೂ ಮೆಂಬರ್ಸ್ ಈಗಾಗಲೇ ಕ್ರೀಡಾಂಗಣಕ್ಕೆ ಎಂಟ್ರಿ ಕೊಟ್ಟಿದ್ದು, ಲೈಟಿಂಗ್ಸ್, ಕ್ಯಾಮೆರಾ ಸೆಟಪ್ ಮತ್ತು ಗ್ರೌಂಡ್ ಮೈನ್ಟೆನೆನ್ಸ್ ಕೆಲಸಗಳಲ್ಲಿ ಮಗ್ನರಾಗಿದ್ದಾರೆ. “ಈ ಸಲ ಕಪ್ ನಮ್ದೆ” ಅನ್ನೋ ಘೋಷಣೆಗಳ ನಡುವೆ, ನಾಳಿನ ಪಂದ್ಯವು ಒಂದು ದೊಡ್ಡ ಹಬ್ಬದಂತೆ ನಡೆಯಲು ಚಿನ್ನಸ್ವಾಮಿ ಮೈದಾನ ಈಗ ಒಂದು ಭದ್ರಕೋಟೆಯಾಗಿ ಮಾರ್ಪಟ್ಟಿದೆ.