ಮನರಂಜನೆ

‘ಬಿಗ್ ಬಾಸ್ ಕನ್ನಡ ಓಟಿಟಿ 2’ ಗೆ ಕೌಂಟ್ ಡೌನ್ ?

ಬೆಂಗಳೂರು : ಕನ್ನಡದ ಅತ್ಯಂತ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಝನ್ ೧೦ ಜನವರಿ ೨೮ಕ್ಕೆ ಮುಕ್ತಾಯಗೊಂಡಿದೆ, ಈ ಬಾರಿಯ ಸ್ಪರ್ಧಿಗಳ ಪೈಕಿ ಒಬ್ಬೊಬ್ಬರಿಗೂ ಒಂದೊಂದು ರೀತಿಯ ಫ್ಯಾನ್ ಫಾಲೋವರ್ಸ್ ಇದ್ರೂ ಕೊನೆಗೂ ಅಚ್ಚರಿಯಂತೆ ವಿಜೇತರಾಗಿ ಕಾರ್ತಿಕ್ ಮಹೇಶ್ ಹೊರಹೊಮ್ಮಿದ್ದಾರೆ.
ಡ್ರೋನ್ ಪ್ರತಾಪ್ ರನ್ನರ್‌ ಅಪ್‌ ಆದ್ರೂ . ಮೂರನೇ ಸ್ಥಾನ ಸಂಗೀತಾ ಶೃಂಗೇರಿ ಪಾಲಾದ್ರೆ ,ನಾಲ್ಕನೇ ಸ್ಥಾನ ವಿನಯ್‌ ಪಡೆದುಕೊಂಡ್ರು , ಐದನೇ ಸ್ಥಾನ ವರ್ತೂರು ಸಂತೋಷ್, ಆರನೇ ಸ್ಥಾನ ತುಕಾಲಿ ಸಂತು ಪಡೆದುಕೊಂಡು .ಬಿಗ್ ಬಾಸ್ ಮನೆ ಬಾಗಿಲನ್ನ ಮುಚ್ಚಲಾಯ್ತು.

ಬಿಗ್ ಬಾಸ್ ಮುಗಿದು ವಾರ ಕಳಿಯುವ ಮುನ್ನವೇ ‘ಬಿಗ್ ಬಾಸ್ ಕನ್ನಡ ಓಟಿಟಿ 2’ ಶುರುವಾಗುತ್ತೆ ಅನ್ನೋ ಗುಸು ಗುಸು ಜೋರಾಗಿದೆ , ಅತೀ ಶೀಘ್ರದಲ್ಲೇ ‘ಬಿಗ್ ಬಾಸ್ ಕನ್ನಡ ಓಟಿಟಿ 2’ ಶುರುವಾಗುತ್ತಂತೆ ಅನ್ನೋ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ ಸುದ್ದಿಯಾಗುತ್ತಿದೆ . ಅದಕ್ಕೆ ಮುಖ್ಯ ಕಾರಣ ಬಿಗ್ ಬಾಸ್ 10’ ಮುಗಿದ ಒಂದು ವಾರದೊಳಗಾಗಿ , ‘ಬಿಗ್ ಬಾಸ್‌’ ಮನೆಯ ನವೀಕರಣ ಕಾರ್ಯಕ್ಕೆ ಚಾಲನೆ ನೀಡಿರುವುದು . ‘ಬಿಗ್ ಬಾಸ್‌’ ಮನೆಗೆ ಹೊಸದಾಗಿ ಪೇಂಟ್ ಮಾಡಲಾಗುತ್ತಿದೆ. ಆ ಮೂಲಕ ಅದೇ ಮನೆಗೆ ವಿನೂತನ ಸ್ಪರ್ಶ ಕೊಡಲಾಗುತ್ತಿದೆ ಅನ್ನೋ ಫೋಟೋ ಬಿಡುಗಡೆಗೊಳ್ಳುತ್ತಿದ್ದಂತೆ OTT ಚರ್ಚೆ ಶುರುವಾಗಿದೆ.

ಕಳೆದ ಬಾರಿಯ ಬಿಗ್ ಬಾಸ್ ಸೀಸನ್ ೯ ಶುರುವಾಗುವ ಮುನ್ನ ‘ಬಿಗ್ ಬಾಸ್ ಕನ್ನಡ ಓಟಿಟಿ೧ ಶುರುವಾಗಿತ್ತು ,OTT೧ ನಲ್ಲಿ ೧೬ಸ್ಪರ್ಧಿಗಳು ಭಾಗವಹಿಸಿದ್ದರು ,ಸ್ಪರ್ಧಿಗಳ ಪೈಕಿ ರೂಪೇಶ್ ಶೆಟ್ಟಿ, ರಾಕೇಶ್ ಅಡಿಗ, ಸಾನ್ಯ ಅಯ್ಯರ್, ಆರ್ಯವರ್ಧನ್‌ ಗುರೂಜಿ ಹೀಗೆ ಕೆಲವರು ಮಾತ್ರ OTTಯಿಂದ ಟಿವಿ ಸ್ಕ್ರೀನ್ಗೆ ಆಯ್ಕೆಯಾಗಿದ್ದರು ‘ಬಿಗ್ ಬಾಸ್‌ ಕನ್ನಡ ಓಟಿಟಿ 1’ ಮುಗಿದ್ಮೇಲೆ ಒಂದು ವಾರದ ಅಂತರದಲ್ಲಿ ‘ಬಿಗ್ ಬಾಸ್‌ ಕನ್ನಡ 9’ ಕಾರ್ಯಕ್ರಮ ಶುರುವಾಗಿತ್ತು. ‘ಬಿಗ್ ಬಾಸ್‌ ಕನ್ನಡ ಓಟಿಟಿ 1’ ಟಾಪರ್‌ ಪಟ್ಟ ಪಡೆದವರು ರೂಪೇಶ್ ಶೆಟ್ಟಿ. ‘ಬಿಗ್ ಬಾಸ್‌ ಕನ್ನಡ 9’ ವಿನ್ನರ್ ಪಟ್ಟವೂ ರೂಪೇಶ್ ಶೆಟ್ಟಿಯ ಪಾಲಾಯಿತು.

ಈ ವಾರವೇ ಶುರುವಾಗುತ್ತ OTT-2 ?

‘ಬಿಗ್ ಬಾಸ್‌ ಕನ್ನಡ ಓಟಿಟಿ 2’ ಶುರುವಾದ್ರೆ ,ಎಷ್ಟು ದಿನಗಳ ಕಾಲ ನಡೆಯುತ್ತೆ? ಸ್ಪರ್ಧಿಗಳು ಯಾರಿರಬಹುದು ಎಂಬ ಕುತೂಹಲ ಜನರನ್ನ ಕಾಡುತ್ತಿದೆ ,ಕಿಚ್ಚ ಸುದೀಪ್ ಮಾಕ್ಸ್ ಸಿನಿಮಾದಲ್ಲಿ ಬ್ಯುಸಿ ಇದ್ದಾರೆ ,ಹಾಗಾದ್ರೆ OTT-2 ಬೇರೆಯವರು ನಡೆಸುತ್ತಾರ,ಅಥವಾ ಸುದೀಪ್ ಅವರೇ ನಡೆಸ್ತಾರ ಹೀಗೆ ಹತ್ತು ಹಲವು ಪ್ರಶ್ನೆಗಳು ಜನರನ್ನ ಕಾಡ್ತಿದೆ ,ಮೂಲಗಳ ಪ್ರಕಾರ, ‘ಬಿಗ್ ಬಾಸ್‌ ಕನ್ನಡ ಓಟಿಟಿ 2’ ಪ್ರಾಜೆಕ್ಟ್ ಇನ್ನೂ ಮಾತುಕತೆ ಹಂತದಲ್ಲಿದೆ ಯಾವಾಗ ಎಲ್ಲಿ ಅನ್ನೋದು ಇನ್ನು ಕೂಡ ಅಧಿಕೃತವಾಗಿ ತಿಳಿದುಬಂದಿಲ್ಲ ,ಒಟ್ಟಾರೆ ಬಿಗ್ ಬಾಸ್ ಸೀಸನ್ ೧೦ ಮುಗಿದ ಹೊಸ್ತಿಲಲ್ಲೇ ಬಿಗ್ ಬಾಸ್ OTT-೨ ಬಗ್ಗೆ ಜನರಲ್ಲಿ ಕುತೂಹಲ ಇರುವುದಂತೂ ಸುಳ್ಳಲ್ಲ.

 

Comments (0)

Your email address will not be published. Required fields are marked *

Back to top button