ಕ್ರೈಂ ಸ್ಟೋರಿರಾಜ್ಯ
ಸಿಎಂ ಸಹಿ ನಕಲು ನಕಲು; ಆರೋಪಿ ರಾಘವೇಂದ್ರ ಅರೆಸ್ಟ್

ಬೆಂಗಳೂರು: ಮುಖ್ಯಮಂತ್ರಿಗಳ ಕಚೇರಿಯ ಟಿಪ್ಪಣಿ ನಕಲು ಮಾಡಿ ವಂಚಿಸಿದ್ದ ಹಾವೇರಿ ಜಿಲ್ಲೆ ರಾಣೆಬೆನ್ನೂರು ಮೂಲದ ರಾಘವೇಂದ್ರನ್ನು ವಿಧಾನಸೌಧ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಮಾಡಿದ್ದೇನು?
ಕೆಎಎಸ್ ಅಧಿಕಾರಿಯೊಬ್ಬರಿಗೆ ಪೋಸ್ಟಿಂಗ್ ನೀಡುವಂತೆ ಆರೋಪಿ ರಾಘವೇಂದ್ರ, ಸಿಎಂ ಕಚೇರಿ ಹೆಸರಿನಲ್ಲಿ ನಕಲಿ ಟಿಪ್ಪಣಿ ಸೃಷ್ಟಿಸಿದ್ದ. ಈ ಬಗ್ಗೆ ವಿಧಾನಸೌಧದ ಸಚಿವಾಲಯ ದೂರು ನೀಡಿತ್ತು. ದೂರು ದಾಖಲಿಸಿಕೊಂಡ ವಿಧಾನಸೌಧ ಠಾಣೆ ಪೋಲಿಸರು, ತನಿಖೆ ನಡೆಸಿ ಆರೋಪಿ ರಾಘವೇಂದ್ರನನ್ನು ಅರೆಸ್ಟ್ ಮಾಡಿದ್ದಾರೆ. ಸದ್ಯ ಪೊಲೀಸರು ಆರೋಪಿಯ ವಿಚಾರಣೆ ನಡೆಸುತ್ತಿದ್ದಾರೆ.




