ವಾಣಿಜ್ಯ

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಿರುದ್ಧ ಸಿಡಿದೆದ್ದ ಗುತ್ತಿಗೆದಾರರು..

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಅಧಿಕಾರಿಗಳ‌ ನಡೆಯ ವಿರುದ್ಧ ಗುತ್ತಿಗೆದಾರರು ಅಸಮಧಾನಗೊಂಡಿದ್ದಾರೆ. ಮಾಡಿಸಿದ ಕೆಲಸಗಳಿಗೆ ಬಿಲ್ ಮಾಡಿಸದೆ ಕಾಯಿಸಲಾಗುತ್ತಿದೆ. ಎಷ್ಟು ಬಾರಿ ಕೇಳಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಈವರೆಗೂ ಒಟ್ಟು 450 ಕೋಟಿ ರೂಪಾಯಿ ಬಿಲ್ ಮಂಜೂರು ಮಾಡಬೇಕಿದೆ. ಅನೇಕ ಬಾರಿ ಹೋರಾಟ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ. ಬಾಕಿ ಬಿಲ್ ಬಾರದೇ ನಾವು ಬೀದಿಗೆ ಬೀಳೋ ಪರಿಸ್ಥಿತಿ ಪಾಲಿಕೆ ತಂದಿದೆ.

ಜೂನ್ ಜುಲೈ‌ನಲ್ಲಿ ಟ್ಯಾಕ್ಸ್ ಕಲೆಕ್ಷನ್ ಮಾಡಿ ಕೊಡುವುದಾಗಿ ಹೇಳುತ್ತಾರೆ. ಆದರೆ, ಬ್ಯಾಂಕ್ ಸೇರಿ ಇತರೆ ಕಡೆ ಸಾಲ ಪಡೆದು ಗುತ್ತಿಗೆ  ಕೆಲಸ ಮಾಡಿರುತ್ತೇವೆ. ಮಾರ್ಚ್‌ನಲ್ಲಿ ಬ್ಯಾಂಕಗಳ ಇಯರ್ ಎಂಡ್. ಅಲ್ಲಿ ಸಾಲ ಮರು ಪಾವತಿ ಮಾಡಬೇಕು. ಇಲ್ಲದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿಗೆ ಬಂದಿದ್ದೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Comments (0)

Your email address will not be published. Required fields are marked *

Back to top button