ಬೆಂಗಳೂರು: ಕಳೆದ ಬಿಜೆಪಿ ಸರ್ಕಾದ ಅವಧಿಯಲ್ಲಿ 40% ಕಮಿಷನ್ ಪಡೆಯಲಾಗುತ್ತಿದೆ ಎಂದು ಗುತ್ತಿಗೆದಾರರ ಸಂಘದವರು ಅಂದು ಆರೋಪಿಸಿದ್ದರು. ಇದನ್ನೇ ಬ್ರಹ್ಮಾಸ್ತ್ರವಾಗಿಸಿಕೊಂಡು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೂ ಬಂದಿದೆ. ಆದ್ರೀಗ ಕಳೆದ ಸರ್ಕಾದ ಅವಧಿಗಿಂತಲೂ ಹೆಚ್ಚು ಕಮಿಷನ್ ಪಡೆಯಲಾಗುತ್ತಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಂಜುನಾಥ್ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಬಳಿಕ ಮಾಧ್ಯಮದ ಜೊತೆ ಮಾತನಾಡಿ ಸರ್ಕಾರದ ವಿರುದ್ಧ ಆರೋಪಿಸಿದರು. ನಂತರ ಮಾತನಾಡಿ, ಬಾಕಿ ಇರುವ ಬಿಲ್ ಕ್ಲಿಯರ್‌ಗೆ ಮನವಿ ಮಾಡಿದ್ದೇವೆ. ಈ ಮಾರ್ಚ್‌ನಲ್ಲಿ ಒಂದು ಸಾವಿರ ಕೋಟಿ, ಏಪ್ರಿಲ್‌ನಲ್ಲಿ 15 ಸಾವಿರ ಕೋಟಿ ಬಿಡುಗಡೆ ಮಾಡ್ತೀವಿ ಅಂತ ಸಿಎಂ ಭರವಸೆ ನೀಡಿದ್ದಾರೆ. ಅಲ್ಲಿಗೆ ಬಹುತೇಕ ಬಿಲ್ ಕ್ಲಿಯರ್ ಆಗಲಿದೆ ಎಂದರು