Big Boss 10 Kannada elimination : ಬಿಗ್ ಬಾಸ್ ಮನೆಯಿಂದ ಮೈಕಲ್ ಮತ್ತು ಅವಿನಾಶ್ ಇಬ್ಬರು ಔಟ್ , ಈ ವಾರ ಕಿಚ್ಚ ಸುದೀಪ್ ಅವರು ಆಗಮಿಸಿಲ್ಲ. ಕೆಸಿಸಿ ಕ್ರಿಟೆಟ್ ಟೂರ್ನಮೆಂಟ್ ಇರುವುದರಿಂದ ಅವರು ಸೂಪರ್ ಸಂಡೇ ವಿತ್ ಕಿಚ್ಚ ಸುದೀಪ ಎಪಿಸೋಡ್ನಲ್ಲಿ ಕಾಣಿಸಿಕೊಂಡಿಲ್ಲ. ಅಂದಹಾಗೆ , ಈ ವಾರ ಬಿಗ್ ಬಾಸ್ ಶೋನಲ್ಲಿ ಡಬಲ್ ಎಲಿಮಿನೇಷನ್ ಇರಬಹುದು ಎಂಬ ನೀರಿಕ್ಷೆ ಇತ್ತು. ಅನಿನಾಶ್ ಶೆಟ್ಟಿ ಮತ್ತು ಮೈಕಲ್ ಅವರು ಮನೆಯಿಂದ ಆಚೆ ಹೋಗಿದ್ದಾರೆ.
ಬಿಗ್ ಬಾಸ್ ಮನೆಯಿಂದ ಮೈಕಲ್ ಮತ್ತು ಅವಿನಾಶ್ ಇಬ್ಬರು ಔಟ್ , ಈ ವಾರ ಕಿಚ್ಚ ಸುದೀಪ್ ಅವರು ಆಗಮಿಸಿಲ್ಲ. ಕೆಸಿಸಿ ಕ್ರಿಟೆಟ್ ಟೂರ್ನಮೆಂಟ್ ಇರುವುದರಿಂದ ಅವರು ಸೂಪರ್ ಸಂಡೇ ವಿತ್ ಕಿಚ್ಚ ಸುದೀಪ ಎಪಿಸೋಡ್ನಲ್ಲಿ ಕಾಣಿಸಿಕೊಂಡಿಲ್ಲ. ಅಂದಹಾಗೆ , ಈ ವಾರ ಬಿಗ್ ಬಾಸ್ ಶೋನಲ್ಲಿ ಡಬಲ್ ಎಲಿಮಿನೇಷನ್ ಇರಬಹುದು ಎಂಬ ನೀರಿಕ್ಷೆ ಇತ್ತು. ಅನಿನಾಶ್ ಶೆಟ್ಟಿ ಮತ್ತು ಮೈಕಲ್ ಅವರು ಮನೆಯಿಂದ ಆಚೆ ಹೋಗಿದ್ದಾರೆ.
ಬಿಗ್ ಬಾಸ್ ಈ ವಾರ ಕಿಚ್ಚ ಸುದೀಪ್ ಅವರು ಆಗಮಿಸಿರಲಿಲ್ಲ. ಹಾಗಾಗಿ , ಅವರ ಬದಲಿಗೆ ಶೈನ್ ಶೆಟ್ಟಿ ಮತ್ತು ಶುಭಾ ಪೂಂಜಾ ಅವರು ಆಗಮಿಸಿದ್ದರು. ಈ ವಾರ ಸಂಗೀತಾ ಶೃಂಗೇರಿ , ವರ್ತೂರು ಸಂತೋಷ್, ಡ್ರೋನ್ ಪ್ರತಾಪ್, ಮೈಕಲ್ ಅಜಯ್, ಅವಿನಾಶ್ ಶೆಟ್ಟಿ ಮಾತ್ರ ಎಲಿಮಿನೇಟ್ ಅಂಗಳದಲ್ಲಿ ಉಳಿದುಕೊಂಡರು. ಅವರಿಬ್ಬರಲ್ಲಿ ಒಬ್ಬರು ಸೇಫ್ ಆಗಬಹುದೆಂದು ಎಂಬ ನೀರೀಕ್ಷೆ ಇತ್ತು.
ಕೇಕ್ ಮೂಲಕ ಸೇಫ್ ಆದ ಸಿರಿ
ಈ ವಾರ ನಾಮಿನೇಟ್ ಆದವರಲ್ಲಿ ಎಲ್ಲರೂ ಸೇಫ್ ಆಗಿ ಕೊನೆಗೆ ಸಿರಿ, ಮೈಕಲ್, ಅವಿನಾಶ್ ಶೆಟ್ಟಿ ಇದ್ದರು. ಆಗ ಬಿಗ್ ಬಾಸ್ ಮನೆಯೊಳಗೆ ಮೂರು ಕೇಕ್ಗಳನ್ನು ತಯಾರಿಸಲಾಯಿತು. ಆ ಕೇಕ್ಗಳನ್ನು ಕೇಳಗೆ ಸೇಫ್ ಆಗುವ ಸ್ಪರ್ಧಿಯ ಹೆಸರನ್ನು ಬರೆಯಲಾಗಿತ್ತು. ಪೂರ್ತಿ ಕೇಕ್ ತಿಂದಾಗ ಹೆಸರು ಇದೆಯೋ, ಇಲ್ಲವೋ ಎಂಬುದು ಗೊತ್ತಾಗುತ್ತದೆ. ಸಿರಿ,ಮೈಕಲ್,ಅವಿನಾಶ್ ಕೇಕ್ ತಿನ್ನಲು ಆರಂಭಿಸಿದರು. ಅಂತಿಮವಾಗಿ ಮೈಕಲ್ ಮತ್ತು ಅವಿನಾಶ್ ಕೇಕ್ ತಿಂದು ಮುಗಿಸಿದರು. ಆದರೆ ಅವರ ಸೇಫ್ ಆದರು. ಮೈಕಲ್ ಮತ್ತು ಅವಿನಾಶ್ ಶೆಟ್ಟಿ ಎಲಿಮಿನೇಷನ್ ಆತಂಕದಲ್ಲಿದ್ದರು.
ಮನೆಯೊಳಗೆ ಬಂದ ಕಾರುಗಳು
ಈ ವಾರ ಬಿಗ್ ಬಾಸ್ ಮನೆಯಲ್ಲಿ ಡಬಲ್ ಎಲಿಮಿನೇಷನ್ ಇರಲಿದೆ ಎಂಬ ಸೂಚನೆ ಸಿಕ್ಕಿತ್ತು. ಮನೆಯೊಳಗೆ ಎರಡು ಕಾರುಗಳು ಬಂದು , ಇಬ್ಬರು ಸ್ಪರ್ಧಿಗಳನ್ನು ಹೊರಗೆ ಕರೆದುಕೊಂಡು ಹೋಗಲಿವೆ ಎನ್ನಲಾಗಿದೆ. ಅಂತೆಯೇ, ಮಧ್ಯರಾತ್ರಿ ಮನೆಯೊಳಗೆ ಎರಡು ಕಾರುಗಳು ಬಂದವು. ಮೈಕಲ್ ಮತ್ತು ಅವಿನಾಶ್ ಶೆಟ್ಟಿ ಒಂದೊಂದು ಕಾರುಗಳಲ್ಲಿ ಹತ್ತಿಕೊಂಡರು. ಕಾರುಗಳು ಕೆಲವೊತ್ತು ಮನೆಯ ಗಾರ್ಡನ್ ಏರಿಯಾದಲ್ಲಿ ರೌಂಡ್ ಹೊಡೆದವು. ಕೊನೆಗೆ ಎರಡೂ ಕಾರುಗಳು ಮನೆಯಿಂದ ಹೊರಗೆ ಹೋದವು.
ಪ್ರತಿ ವಾರ ಎಲಿಮಿನೇಷನ್ ಆದ ಸ್ಪರ್ಧಿಗಳ ಹೆಸರುಗಳನ್ನು ಪೋಸ್ಟ್ ಮಾಡುತ್ತಿದ್ದರು. ಆದರೆ ಈ ವಾರ ಅವಿನಾಶ್ ಮತ್ತು ಮೈಕಲ್ ಹೊರಗೆ ಹೋದರು ಕೂಡ ಅವರಿಬ್ಬರ ಹೆಸರುಗಳನ್ನು ಪೋಸ್ಟ್ ಮಾಡಿರಲಿಲ್ಲ. ಹಾಗಾಗಿ, ಖಂಡಿತಾ ಏನೀ ಒಂದು ಟ್ವಿಸ್ಟ್ ಇದೆ ಎಂಬ ವೀಕ್ಷಕರು ಇದ್ದಾರೆ.