Wednesday, April 30, 2025
32 C
Bengaluru
LIVE
ಮನೆಸುದ್ದಿಬೆಟ್ಟಹಲಸೂರು ಮೆಟ್ರೋ ನಿಲ್ದಾಣ ನಿರ್ಮಾಣ ತೂಗುಯ್ಯಾಲೆಯಲ್ಲಿ

ಬೆಟ್ಟಹಲಸೂರು ಮೆಟ್ರೋ ನಿಲ್ದಾಣ ನಿರ್ಮಾಣ ತೂಗುಯ್ಯಾಲೆಯಲ್ಲಿ

ಬೆಂಗಳೂರು: ನಮ್ಮ ಮೆಟ್ರೋ ನೀಲಿ ಮಾರ್ಗದ ಪ್ರಮುಖ ನಿಲ್ದಾಣಗಳಲ್ಲಿ ಒಂದಾದ ಬೆಟ್ಟಹಲಸೂರು ನಿಲ್ದಾಣ ನಿರ್ಮಾಣ ತೂಗುಯ್ಯಾಲೆಯಲ್ಲಿದೆ.

ಬಾಗಲೂರು ಕ್ರಾಸ್‌ ಮತ್ತು ಟ್ರಂಪೆಟ್‌ ಜಂಕ್ಷನ್‌ ನಡುವೆ ಸುಮಾರು 140 ಕೋಟಿ ರೂಪಾಯಿ ವೆಚ್ಚದಲ್ಲಿ ಬೆಟ್ಟಹಲಸೂರು ನಿಲ್ದಾಣಕ್ಕೆ ಧನಸಹಾಯ ನೀಡಲು 2023 ರಲ್ಲಿ ರಿಯಲ್‌ ಎಸ್ಟೇಟ್‌ ಕ್ಷೇತ್ರದ ಖಾಸಗಿ ಕಂಪನಿಯೊಂದು ಮುಂದೆ ಬಂದಿತ್ತು. ಬಿಎಂಆರ್‌ಸಿಎಲ್‌ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿತು. ಆದರೆ ನಿಲ್ದಾಣ ನಿರ್ಮಾಣದ ಬಗ್ಗೆ ಇನ್ನೂ ಸ್ಪಷ್ಟ ತೀರ್ಮಾನವಾಗಿಲ್ಲ.

2023ರ ಜುಲೈನಲ್ಲಿ ನಿಲ್ದಾಣಕ್ಕೆ ಅಗತ್ಯವಿರುವ ಆರ್ಥಿಕ ಹೊಣೆಗಾರಿಕೆಯ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಮುಂದಾಗಿದ್ದ ಕಂಪನಿ, ಬಿಎಂಆರ್‌ಸಿಎಲ್‌ಗೆ ಆರಂಭಿಕ ಮೊತ್ತವಾಗಿ 1 ಕೋಟಿ ರೂಪಾಯಿ ನೀಡಿತ್ತು. ಅದಾದ ನಂತರ ಕಂಪನಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಬಿಎಂಆರ್‌ಸಿಎಲ್‌ ಮೂಲಗಳು ತಿಳಿಸಿವೆ.

ಮೇ 29 ರಂದು ಬಿಎಂಆರ್‌ಸಿಎಲ್‌ ಹಿರಿಯ ಅಧಿಕಾರಿಗಳು ಮೆಟ್ರೋ ಏಜೆನ್ಸಿಯೊಂದಿಗೆ ಪಾಲುದಾರಿಕೆ ಹೊಂದಿರುವ ಪ್ರಮುಖ ಬಿಲ್ಡರ್‌ಗಳು ಮತ್ತು ಖಾಸಗಿ ಸಂಸ್ಥೆಗಳೊಂದಿಗೆ ಸಭೆ ನಡೆಸಿದ್ದರು. ಆದರೆ, ಬೆಟ್ಟಹಲಸೂರು ನಿರ್ಮಾಣದ ಜವಾಬ್ದಾರಿ ಹೊತ್ತಿರುವ ಕಂಪನಿ ಇದರಿಂದ ದೂರ ಉಳಿದಿತ್ತು ಎಂದು ಮೂಲಗಳು ತಿಳಿಸಿವೆ.

ಈ ನಡುವೆ, ನಿರ್ಮಾಣದ ಹೊಣೆ ಹೊತ್ತಿರುವ ಕಂಪನಿ ಅಧಿಕೃತವಾಗಿ ನಿರ್ಮಾಣ ಪ್ರಕ್ರಿಯೆಗೆ ಹಣ ನೀಡಲು ಸಾಧ್ಯವಿಲ್ಲ ಎಂದು ಹಿಂದೆ ಸರಿಯದ ಹೊರತು, ನಿಲ್ದಾಣ ನಿರ್ಮಾಣವನ್ನು ರದ್ದುಗೊಳಿಸಲು ಸಾಧ್ಯವಿಲ್ಲ ಎನ್ನುತ್ತಾರೆ ಅಧಿಕಾರಿಯೊಬ್ಬರು.

ಏತನ್ಮಧ್ಯೆ, ಬಾಗ್‌ಮನೆ ಮತ್ತು ಸೆಂಚುರಿ ಗ್ರೂಪ್‌ ಜಂಟಿಯಾಗಿ 120 ಕೋಟಿ ರೂ.ಗಳಲ್ಲಿ ನಿರ್ಮಿಸಲಿರುವ ಜಕ್ಕೂರು ಪ್ಲಾಂಟೇಶನ್‌ ಮೆಟ್ರೋ ನಿಲ್ದಾಣ (ಜಕ್ಕೂರು ಕ್ರಾಸ್‌ ಮತ್ತು ಯಲಹಂಕ ನಡುವೆ) ಬಹುತೇಕ ಅಂತಿಮವಾಗಿದೆ.

ಯೂ ಟರ್ನ್‌ ಹೊಡೆದ ಸಂಸ್ಥೆ

ಬೆಟ್ಟಹಲಸೂರು ನಿಲ್ದಾಣದಿಂದ ಬುಲೆವಾರ್ಡ್‌ ಸಂಕೀರ್ಣದಲ್ಲಿನ ನಿವಾಸಿಗಳಿಗೆ ಉಪಯುಕ್ತವಾಗಲಿದೆ. ಮಾರ್ಗದ ಮೂಲ ಯೋಜನೆಯಲ್ಲಿ ಬೆಟ್ಟಹಲಸೂರು ನಿಲ್ದಾಣದ ಪ್ರಸ್ತಾಪ ಇರಲಿಲ್ಲ. ಖಾಸಗಿ ಕಂಪನಿ ಆಸಕ್ತಿ ತೋರಿದ್ದರಿಂದ ಬಾಗಲೂರು ಕ್ರಾಸ್‌ ಮತ್ತು ದೊಡ್ಡಜಾಲ ನಿಲ್ದಾಣಗಳ ನಡುವೆ ಬೆಟ್ಟಹಲಸೂರು ಮೆಟ್ರೋ ರೈಲು ನಿಲ್ದಾಣ ನಿರ್ಮಿಸಲು ಯೋಜನೆ ಬದಲಿಸಲಾಯಿತು. ಈ ಸಂಬಂಧ ನಿಗಮದೊಂದಿಗೆ ಒಡಂಬಡಿಕೆಯೂ ನಡೆದಿತ್ತು.

2020ರ ಏಪ್ರಿಲ್‌ನಲ್ಲಿ ಈ ಸಂಸ್ಥೆ ಮೆಟ್ರೋ ನಿಲ್ದಾಣವನ್ನು ನಿರ್ಮಿಸುವ ಸಲಹೆ ನೀಡಿ ಆರ್ಥಿಕ ಹೊಣೆ ಹೊರುವುದಕ್ಕೆ ಮುಂದಾಗಿತ್ತು. ಈ ನಿಲ್ದಾಣದಿಂದ ವಿಸ್ತಾರವಾದ ಬುಲೆವಾರ್ಡ್‌ ಸಂಕೀರ್ಣದಲ್ಲಿನ ನಿವಾಸಿಗಳಿಗೆ ಉಪಯುಕ್ತವಾಗಲಿದೆ ಎಂಬ ಉದ್ದೇಶದೊಂದಿಗೆ ಈ ಯೋಜನೆ ರೂಪುಗೊಂಡಿತ್ತು. ಆದರೆ, ಆ ಬಳಿಕ ಖಾಸಗಿ ಸಂಸ್ಥೆ, ಮೆಟ್ರೋ ನಿಲ್ದಾಣ ನಿರ್ಮಾಣಕ್ಕೆ ಹಣ ನೀಡಲು ತನ್ನ ಆರ್ಥಿಕ ಸ್ಥಿತಿಗತಿಗಳ ಕಾರಣ ನೀಡಿ ಹಿಂದೆ ಸರಿದಿತ್ತು.

ಅಂತೆಯೇ ಬಿಎಂಆರ್‌ಸಿಎಲ್‌ ಸಹ 2022ರ ಡಿಸೆಂಬರ್‌ನಲ್ಲಿ ಈ ನಿಲ್ದಾಣದ ಯೋಜನೆಯನ್ನು ಕೈಬಿಡುವುದಾಗಿ ಹೇಳಿತ್ತು. ನಂತರ ಸ್ಥಳೀಯರ ಆಗ್ರಹದ ಮೇರೆಗೆ ಈ ಮಾರ್ಗದಲ್ಲಿ ಚಿಕ್ಕಜಾಲ ಸ್ಟೇಷನ್‌ ಸೇರಿಸಲಾಗಿತ್ತು. 2023ರಲ್ಲಿ ಮತ್ತೆ ಸಂಸ್ಥೆ ನಿಲ್ದಾಣ ನಿರ್ಮಾಣಕ್ಕೆ ಆಸಕ್ತಿ ತೋರಿಸಿತು.

ಮೂರು ನಿಲ್ದಾಣಗಳ ಸೇರ್ಪಡೆ

ಬೆಟ್ಟಹಲಸೂರು, ಜಕ್ಕೂರು ಪ್ಲಾಂಟೇಶನ್‌ ಮತ್ತು ಚಿಕ್ಕಜಾಲ ಆರಂಭದಲ್ಲಿ ಏರ್‌ಪೋರ್ಟ್‌ ಲೇನ್‌ನ ಡಿಪಿಆರ್‌ನ ಭಾಗವಾಗಿರಲಿಲ್ಲ. ಆದರೆ, ನಂತರ ಅವನ್ನು ಸೇರಿಸಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

”ಜಕ್ಕೂರು ಪ್ಲಾಂಟೇಷನ್‌ ಮತ್ತು ಚಿಕ್ಕಜಾಲ ಠಾಣೆಗಳ ನಿರ್ಮಾಣ ಖಚಿತವಾಗಿದ್ದು, ಬೆಟ್ಟಹಲಸೂರು ನಿಲ್ದಾಣ ನಿರ್ಮಾಣ ಅನುಮಾನಾಸ್ಪದವಾಗಿದೆ” ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದರು.

 

ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments