Thursday, November 20, 2025
19.5 C
Bengaluru
Google search engine
LIVE
ಮನೆರಾಜಕೀಯಉದ್ಯಾನವನಗಳಲ್ಲಿ ಇದುವರೆಗೆ 634 ಇಂಗು ಗುಂಡಿ ನಿರ್ಮಾಣ: ಪ್ರೀತಿ ಗೆಹ್ಲೋಟ್.

ಉದ್ಯಾನವನಗಳಲ್ಲಿ ಇದುವರೆಗೆ 634 ಇಂಗು ಗುಂಡಿ ನಿರ್ಮಾಣ: ಪ್ರೀತಿ ಗೆಹ್ಲೋಟ್.

ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವಂತಹ ಉದ್ಯಾನವನಗಳಲ್ಲಿ ಬಿದ್ದಂತಹ ಮಳೆ ನೀರು ವ್ಯರ್ಥವಾಗದೆ ಅಲ್ಲೇ ಸಂಗ್ರಹಿಸಿ ಇಂಗಿಸುವ ಮತ್ತು ಅಂರ್ತಜಲ ಮಟ್ಟ ಹೆಚ್ಚಿಸುವ ಸಲುವಾಗಿ ಈಗಾಗಲೇ 634 ಇಂಗು ಗುಂಡಿಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ವಿಶೇಷ ಆಯುಕ್ತರಾದ(ಅ.ಪ.ಹ.ವೈ) ಪ್ರೀತಿ ಗೆಹ್ಲೋಟ್ ರವರು ತಿಳಿಸಿರುತ್ತಾರೆ.

ಪಾಲಿಕೆ ವ್ಯಾಪ್ತಿಯಲ್ಲಿ 1280 ಉದ್ಯಾನವನಗಳು ಬರಲಿದ್ದು, ಇಂಗು ಗುಂಡಿಗಳನ್ನು ನಿರ್ಮಿಸಬಹುದಾದ ಉದ್ಯಾನವನಗಳಲ್ಲಿ ಹಂತ-ಹಂತವಾಗಿ ಇಂಗು ಗುಂಡಿಗಳನ್ನು ನಿರ್ಮಾಣ ಮಾಡಲು ಪಾಲಿಕೆ ತೋಟಗಾರಿಕಾ ವಿಭಾಗವು ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಿದೆ. ಅದರಂತೆ, 2024-25ನೇ ಸಾಲಿನಲ್ಲಿ ಈಗಾಗಲೇ 634 ಇಂಗು ಗುಂಡಿಗಳನ್ನು ನಿರ್ಮಿಲಸಾಗಿದ್ದು, ಸುಮಾರು 1000 ಇಂಗು ಗುಂಡಿಗಳನ್ನು ಉದ್ಯಾನವನಗಳಲ್ಲಿ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ.

ಉದ್ಯಾನವನಗಳಲ್ಲಿ ಬಿದ್ದಂತಹ ಮಳೆ ನೀರು ವ್ಯರ್ಥವಾಗದೆ ಅಲ್ಲೇ ಸಂಗ್ರಹಿಸುವ ಮತ್ತು ಇಂಗಿಸುವ ಸಲುವಾಗಿ ಹಾಗೂ ಅಂರ್ತಜಲ ಮಟ್ಟ ಹೆಚ್ಚಿಸಲು 12 ಅಡಿ ಉದ್ದ ಹಾಗೂ 5 ಅಡಿ ಅಗಲ ಅಳತೆಯ ಇಂಗು ಗುಂಡಿಗಳನ್ನು ನಿರ್ಮಿಸಿ ಅದರಲ್ಲಿ ಸುಮಾರು 4000 ಲೀ. ಮಳೆ ನೀರನ್ನು ಸಂಗ್ರಹವಾಗುವಂತೆ ಮಾಡಲಾಗಿದೆ.

ವೈಜ್ಞಾನಿಕವಾಗಿ ಇಂಗು ಗುಂಡಿ ನಿರ್ಮಾಣ:

ಉದ್ಯಾನವನಗಳಲ್ಲಿ ವೈಜ್ಞಾನಿಕವಾಗಿ ಇಂಗು ಗುಂಡಿಗಳನ್ನು ನಿರ್ಮಿಸಲಾಗುತ್ತಿದ್ದು, ನೀರು ಹೋಗುವ ದ್ವಾರಕ್ಕೆ ಕಬ್ಬಿಣದ ಪರದೆ ಅಳವಡಿಸಿದ್ದು, ಇದರಿಂದ ಹರಿದು ಬರುವ ನೀರಿನಲ್ಲಿ ಕಸ-ಕಡ್ಡಿ ಗುಂಡಿಗೆ ಸೇರುವುದನ್ನು ತಡೆದು ಶೇ. 80 ರಷ್ಟು ಪ್ರಮಾಣದ ನೀರು ಇಂಗುಗುಂಡಿಗೆ ಸೇರುವಂತೆ ಮಾಡಲಾಗಿದೆ. 12 X 5 ಸುತ್ತಳತೆಯಲ್ಲಿ 4 ಅಡಿ ಸುತ್ತಳತೆಯ ಸಿಮೆಂಟ್ ರಿಂಗ್ ಅಳವಡಿಸಿದ್ದು, ಸುತ್ತಲೂ ಆಳದಿಂದ ಭೂಮಿಯ ಮೇಲ್ಫದರದವರೆಗೆ 40 ಎಂಎಂ ಜಲ್ಲಿಕಲ್ಲು ತುಂಬಲಾಗಿದೆ.

ಅಂತರ್ಜಲ ಹೆಚ್ಚಲು ಸಹಕಾರಿ:

ಉದ್ಯಾನವನಗಳಲ್ಲಿ ಇಂಗು ಗುಂಡಿಗಳನ್ನು ನಿರ್ಮಾಣ ಮಾಡುವುದರಿಂದ, ಮಳೆ ನೀರು ಬೇರೆಡೆ ಹೋಗದೆ ಅಲ್ಲೇ ಹೀರಿಕೊಳ್ಳುತ್ತದೆ. ಇದರಿಂದ ಉದ್ಯಾನವನಗಳಲ್ಲಿ ನೀರಿನ ಅಂತರ್ಜಲ ಮಟ್ಟವನ್ನು ಹೆಚ್ಚಿಸಬಹುದಾಗಿರುತ್ತದೆ.

 

 

 

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments