ಜೀನಿ ವಿರುದ್ಧ ಅಪಪ್ರಚಾರ – ಕಡೆಗೂ ಸಿಕ್ತು ಸಾಕ್ಷ್ಯ..!

ಜೀನಿ ಮಿಲೆಟ್ಸ್ ಮಿಕ್ಸ್ ಈಗ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಫೇಮಸ್.. ಕೊರೊನಾ ಬಳಿಕ ಜನರಲ್ಲಿ ಮಿಲೆಟ್ಸ್ ಮಿಕ್ಸ್ ತಿನ್ನುವ ಅರಿವು ಹೆಚ್ಚಾಯ್ತು. ಈ ಬಳಿಕ ಜೀನಿ ಕಂಪನಿಯ ಮಿಲೆಟ್ಸ್ ರಾಜ್ಯಾದ್ಯಂತ ಮನೆಮಾತಾಯ್ತು. ಇದೇ ಜೀನಿ ಕಂಪನಿಯ ಮಾಲೀಕ ಇದೀಗ ವಿವಾದದ ಕೇಂದ್ರ ಬಿಂದು ಆಗಿದ್ದಾರೆ.. ಚಿಕ್ಕಮಟ್ಟದಲ್ಲಿ ಶುರುವಾಗಿದ್ದ ಜೀನಿ ಮಿಲೆಟ್ಸ್ ಇದೀಗ ಕೋಟ್ಯಂತರ ಮೌಲ್ಯದ ಅತಿ ದೊಡ್ಡ ಉದ್ದಿಮೆಯಾಗಿ ಬೆಳೆದಿದೆ. ನೂರಾರು ಕುಟುಂಬಗಳಿಗೆ ಜೀನಿ ಕಂಪನಿ ಉದ್ಯೋಗ ನೀಡಿ ಅಷ್ಟೂ ಜನರ ಕುಟುಂಬ ಪೋಷಣೆ ಮಾಡುತ್ತಿದೆ. ಇದೇ ಅವಧಿಯಲ್ಲಿ ಜೀನಿ ಕಂಪನಿ ಮಾಲೀಕ ದಿಲೀಪ್ ಕುಮಾರ್ ಅವರ ವಿರುದ್ಧವೇ ಕೇಳಿಬಂದ ಕೇಸ್ ಒಂದು ಇಡೀ ರಾಜ್ಯಾದ್ಯಂತ ಈಗ ಸುದ್ದಿಯಾಗಿದೆ.
ತುಮಕೂರು ಜಿಲ್ಲೆ ಶಿರಾ ತಾಲೂಕಿನ ಯೆರಗುಂಟೆ ಎಂಬಲ್ಲಿ ಜೀನಿ ಕಂಪನಿ ತನ್ನ ಅತಿ ದೊಡ್ಡ ಉತ್ಪಾದನಾ ಘಟಕ ಹೊಂದಿದ್ದು ನೂರಾರು ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದೇ ವೇಳೆ ಜೀನಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ಮಹಿಳೆಯೊಬ್ಬಳು ಏಕಾ ಏಕಿ ಜೀನಿ ಮಾಲೀಕರ ವಿರುದ್ಧವೇ ಲೈಂಗಿಕ ದೌರ್ಜನ್ಯ ಆರೋಪ ಹೊರಿಸಿದ್ದಾರೆ. ಜೀನಿ ಮಾಲೀಕ ದಿಲೀಪ್ ನನ್ನ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ, ಮೈ ಕೈ ಮುಟ್ಟುತ್ತಾರೆ, ಕೆಲಸ ಮುಗಿದಮೇಲೆ ಶೆಡ್ಗೆ ಬಾ ಅಂತಾರೆ ಅಂತೆಲ್ಲಾ ಆರೋಪಿಸಿದ್ದರು.. ಅಲ್ಲದೆ ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಕೂಡ ದಾಖಲಾಗಿತ್ತು.
ಆದರೆ ಜೀನಿ ಕಂಪನಿ ಮಾಲೀಕ ದಿಲೀಪ್ ವಿರುದ್ಧ ಮಾಡಿದ ಆರೋಪಗಳಿಗೆ ಇದೀಗ ಒಂದೊಂದೇ ನಿಜವಾದ ಸತ್ಯ ಹೊರಬರ್ತಿದೆ.. ದಿಲೀಪ್ ವಿರುದ್ಧದ ಆರೋಪ ಹಿಂದೆ ರಾಜಕೀಯ ಷಡ್ಯಂತ್ರವಿರೋದು ಮೇಲ್ನೋಟಕ್ಕೆ ಕಾಣಿಸಿದೆ. ಆರೋಪ ಹೊರಿಸಿದ್ದ ಮಹಿಳೆಗೆ ಜಿಲ್ಲಾ ಪಂಚಾಯ್ತಿಯ ಮಾಜಿ ಸದಸ್ಯ ರಾಮಣ್ಣ ಎಂಬುವರು ಬೆಂಬಲಕ್ಕೆ ನಿಂತಿದ್ದರು. ದಿಲೀಪ್ ಲೈಂಗಿಕ ದೌರ್ಜನ್ಯ ಮಾಡಿರೋದು ನಿಜ ಅಂತ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದರು..
ಆದ್ರೆ ಮೊನ್ನೆಯಷ್ಟೇ ದಿಲೀಪ್ ಲೈಂಗಿಕ ದೌರ್ಜನ್ಯ ಮಾಡಿದ್ದಾರೆ ಎಂದಿದ್ದ ಜಿಲ್ಲಾಪಂಚಾಯ್ತಿ ಮಾಜಿ ಸದಸ್ಯ ರಾಮಣ್ಣ ಇದೀಗ ಯೂಟರ್ನ್ ಹೊಡೆದಿದ್ದಾರೆ.. ಮಹಿಳೆ ತನ್ನ ಮಗುವಿನ ಮೇಲೆ ಆಣೆ ಮಾಡಿದ್ದರು. ಆಣೆ ಮಾಡಿದ ಮೇಲೆ ಅವರು ಸತ್ಯವನ್ನ ಹೇಳಿರುತ್ತಾರೆ. ಈ ಆಧಾರದ ಮೇಲೆ ಮಹಿಳೆಗೆ ನ್ಯಾಯ ಕೊಡಿಸಲು ಮುಂದಾದೆ ಎಂತ ರಾಮಣ್ಣ ಹೇಳಿದ್ದಾರೆ. ಅಲ್ದೇ ಜೀನಿ ಕಂಪನಿ ಬಗ್ಗೆಯೂ ಗೊತ್ತಿಲ್ಲ, ದಿಲೀಪ್ ಬಗ್ಗೆಯೂ ನನಗೆ ಯಾವುದೇ ಮಾಹಿತಿ ಗೊತ್ತಿಲ್ಲ. ಮಹಿಳೆ ಆಣೆ ಮಾಡಿದ್ದನ್ನ ಕೇಳಿ ನಮ್ಮ ಸಮುದಾಯದ ಮಹಿಳೆಗೆ ಅನ್ಯಾಯ ಆಗಬಾರದೆಂದು ಆ ಹೇಳಿಕೆ ಕೊಟ್ಟಿದ್ದೆ ಎಂದಿದ್ದಾರೆ.
ದಿಲೀಪ್ ವಿರುದ್ಧ ಮಹಿಳೆ ಆರೋಪ ಮಾಡಿದ್ದು ಒಂದು ಕಡೆ ತನಿಖೆ ನಡೆಯುತ್ತಿದ್ದರೆ, ಮಾಜಿ ಜನಪ್ರತಿನಿಧಿಯೊಬ್ಬರು ದಿಲೀಪ್ ಅವರ ಮೇಲಿನ ಆರೋಪ ಸತ್ಯವಾ ಸುಳ್ಳಾ ಎಂದೂ ವಿಚಾರಿಸದೆ ನೇರವಾಗಿ ಆರೋಪ ಮಾಡಿ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದು ಜೀನಿ ಕಂಪನಿ ವಿರುದ್ಧ ಅಪಪ್ರಚಾರ ಮಾಡುವ ಉದ್ದೇಶ ಇದೀಗ ಬಟಾಬಯಲಾಗಿದೆ.
ಮತ್ತೊಂದು ಕಡೆ ಸಂತ್ರಸ್ತ ಯುವತಿಯೊಬ್ಬರು ಜೀನಿ ಮಾಲೀಕರ ವಿರುದ್ಧ ಆರೋಪ ಹೊರಿಸಲು ಕ್ಷುಲ್ಲಕ ಕಾರಣ ಒಂದನ್ನು ನೀಡಿದ್ದಾರೆ. ದಿಲೀಪ್ ಎನ್ನುವವರ ಹೆಸರಿನಲ್ಲಿ ಆ ಮಹಿಳೆಗೆ ಫೇಸ್ಬುಕ್ನಲ್ಲಿ ಸಂದೇಶ ಒಂದು ಬಂದಿತ್ತಂತೆ. ಆ ಬಳಿಕ ದಿಲೀಪ್ ಹೆಸರಿನ ಅಕೌಂಟ್ ಅನ್ನು ಬ್ಲಾಕ್ ಮಾಡಿದ್ದರಂತೆ. ಅದಾದ ಮಾರನೆಯ ದಿನವೇ ಜೀನಿ ಕಂಪನಿಯಿಂದ ಆ ಮಹಿಳೆಯನ್ನ ಕೆಲಸದಿಂದ ವಜಾಗೊಳಿಸಲಾಗಿತ್ತಂತೆ. ಇದೊಂದೇ ಕಾರಣಕ್ಕೆ ಜೀನಿ ಮಾಲೀಕ ಕಿರುಕುಳ ಕೊಟ್ಟಿದ್ದಾರೆಂದು ಆ ಮಹಿಳೆ ಆರೋಪಿಸಿದ್ದಾರೆ. ಅಲ್ಲದೇ ಖಾಸಗಿ ಮಾಧ್ಯಮಗಳಿಗೆ ನೀಡಿದ ಕಿರು ಸಂದರ್ಶನದಲ್ಲೂ ಜೀನಿ ಕಂಪನಿ ಮಾಲೀಕ ದಿಲೀಪ್ ನನ್ನ ಜೊತೆ ಸಲುಗೆಯಿಂದ ವರ್ತಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ದಿಲೀಪ್ ಅವರು ಸಲುಗೆಯಿಂದ ವರ್ತಿಸಿಲ್ಲ ಎಂದು ಸ್ಪಷ್ಟನೆ ನೀಡಿದ ಮೇಲೂ ಲೈಂಗಿಕ ದೌರ್ಜನ್ಯ ಆರೋಪ ಮಾಡಿರುವುದು ಎಲ್ಲ ರೀತಿಯಿಂದಲೂ ಜೀನಿ ಹೆಸರನ್ನು ಕೆಡಿಸಲು ಮಾಡಿದ ಷಡ್ಯಂತ್ರ ಅನ್ನುವುದು ಸಾಬೀತಾಗಿದೆ.
ಇಷ್ಟಾದರೂ ಜೀನಿ ಕಂಪನಿ ಮಾಲೀಕರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಜೀನಿ ಘಟಕದಲ್ಲಿದ್ದ ಎಲ್ಲ ಸಿಸಿಟಿವಿ ದೃಶ್ಯಗಳನ್ನೂ ಪೊಲೀಸರಿಗೆ ನೀಡಲಾಗಿದೆ.
ರಾಜಕೀಯಕ್ಕೆ ಬರ್ತಾರೆ ಜೀನಿ ಮಾಲೀಕ ದಿಲೀಪ್
ದಿಲೀಪ್ ಅವರನ್ನು ಈ ದೌರ್ಜನ್ಯ ಕೇಸ್ ಹಿಂದೆ ರಾಜಕೀಯ ಷಡ್ಯಂತ್ರವೂ ಇದೆ ಎನ್ನಲಾಗಿದೆ.ದಿಲೀಪ್ ಅವರು ತಮ್ಮ ಗ್ರಾಮ ಹಾಗೂ ಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲಿ ಸ್ವಂತ ಖರ್ಚಿನಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಅವರು ಎಲೆಕ್ಷನ್ಗೆ ನಿಲ್ಲುವ ಸಾಧ್ಯತೆ ಇದೆ ಎನ್ನವ ಚರ್ಚೆಗಳು ಕೂಡ ಬಂದಿತ್ತು.. ಒಂದು ವೇಳೆ ದಿಲೀಪ್ ಅವರು ಚುನಾವಣೆಗೆ ನಿಂತರೆ, ಅಕ್ರಮ ದಂಧೆಕೋರರ ಅಬ್ಬರಕ್ಕೆ ಬ್ರೇಕ್ ಬೀಳಲಿದೆ ಅನ್ನುವ ಆತಂಕವೂ ಉಳಿದವರಕ್ಕ ಕಾಡಿತ್ತು ಎನ್ನಲಾಗ್ತಿದೆ. ಇದೇ ಕಾರಣಕ್ಕೆ ದಿಲೀಪ್ ವಿರುದ್ಧ ಈಗಲೇ ಅಪಪ್ರಚಾರ ಮಾಡಿದ್ದಾರೆ ಎಂದು ದಿಲೀಪ್ ಬಳಗದಲ್ಲಿ ಮಾತು ಕೇಳಿಬರ್ತಿದೆ.
ಈಗ ಮಹಿಳೆಯನ್ನು ಮುಂದಿಟ್ಟುಕೊಂಡು ತನ್ನ ವಿರುದ್ಧ ಅಪಪ್ರಚಾರ ಮಾಡಿ ಹೆಸರು ಹಾಳು ಮಾಡಿದ್ದಾರೆ. ರಾಜಕೀಯಕ್ಕೆ ಬರಬಾರದೆಂದು ಈ ರೀತಿ ಸುಳ್ಳು ಅಪವಾದ ಹೊರಿಸಿದ್ದಾರೆ. ಆದ್ರೆ ಇಡೀ ಕೇಸ್ಗೆ ಬೇಕಾದ ಎಲ್ಲ ಸಾಕ್ಷ್ಯಗಳನ್ನ, ಸಿಸಿಟಿವಿ ದೃಶ್ಯಗಳನ್ನ ಸಮಾಜದ ಮುಂದೆ ತೆರೆದಿಡಲು ದಿಲೀಪ್ ಮುಂದಾಗಿದ್ದಾರೆ. ಮುಂದಿನ ದಿನಗಳಲ್ಲಿ ಜಿಲ್ಲಾಪಂಚಾಯ್ತಿ ಚುನಾವಣೆಗೂ ಖಂಡಿತವಾಗಿ ಸ್ಪರ್ಧಿಸುತ್ತೀನಿ ಎಂದು ಷಡ್ಯಂತ್ರಮಾಡಿದವರ ಗುಂಪಿಗೆ ದಿಲೀಪ್ ಸವಾಲೆಸೆದಿದ್ದಾರೆ.




