Top Newsರಾಜ್ಯ

ಸ್ಲಂ ಬೋರ್ಡ್ ಅನರ್ಹ CE ವಿರುದ್ಧ ದೂರು

ಬೆಂಗಳೂರು:ಕರ್ನಾಟಕ ಕೊಳಗೇರಿ ಅಭಿವೃದ್ದಿ ಮಂಡಳಿ ಯ ಪ್ರಭಾರ ಮುಖ್ಯ ಎಂಜಿನಿಯರ್ ಸುದೀರ್ ಗೆ ಸಂಕಷ್ಟ ಎದುರಾಗಿದೆ. ಸ್ಲಂ ಬೋರ್ಡ್ ಪ್ರಭಾರ ಮುಖ್ಯ ಎಂಜಿನಿಯರ್ ಸುದೀರ್ ವಿರುದ್ದ ಸರ್ಕಾರಕ್ಕೆ ದೂರು ದಾಖಲಾಗಿದೆ.

ಸುಧೀರ್ ಸ್ಲಂ ಬೋರ್ಡ್ ನಲ್ಲಿ ಅಕ್ರಮವಾಗಿ ಸೇವೆ ಸಲ್ಲಿಕೆ ಮಾಡುತ್ತಿದ್ದು,ಅರ್ಹತೆ ಇಲ್ಲದಿದ್ರೂ ಒಂಭತ್ತು ತಿಂಗಳಿಂದ ಸಿಇ ಹುದ್ದೆ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಈ ಸಂಬಂಧ ರಾಜ್ಯ ವಸತಿ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ದೂರು‌‌ ನೀಡಲಾಗಿದೆ.

ಸ್ಲಂ ಬೋರ್ಡ್ ಸೂಪರಿಂಟೆಂಡೆಂಟ್ ಆಗಿರುವ ಸುಧೀರ್ ಆರು ತಿಂಗಳು ಮಾತ್ರ ಪ್ರಭಾರ ಸಿಇ ಮುಂದುವರಿಕೆಗೆ ಅವಕಾಶ ಇದೆ. ಆದ್ರೆ ಸುಧೀರ್ ಕಳೆದ 9 ತಿಂಗಳಿಂದ ನಿಯಮ ಉಲ್ಲಂಘಿಸಿ ಸಿಇ ಹುದ್ದೆಯಲ್ಲಿ  ಮುಂದುವರಿದಿದ್ದಾರೆ. ಹೀಗಾಗಿ ಸುಧೀರ್ ವರ್ಗಾವಣೆಗೆ ಕೋರಿ ಸರ್ಕಾರಕ್ಕೆ ದೂರು ಸಲ್ಲಿಕೆಯಾಗಿದೆ.

ಪ್ರಭಾರ ಸಿಇ ವಿರುದ್ಧ ಭಾರಿ ಭ್ರಷ್ಟಾಚಾರ ಆರೋಪ ಇದ್ದು,ತನಿಖೆಗೆ ಆಗ್ರಹಿಸಲಾಗಿದೆ. ಸಚಿವರ ಕೈ ಬಿಸಿ ಮಾಡಿ ಹುದ್ದೆಯಲ್ಲಿ ಮುಂದುವರಿದಿದ್ದಾರೆ. ನಿಯಮಬಾಹಿರವಾಗಿ ಹಲವು ಟೆಂಡರ್, ಬಿಲ್ ಮಂಜೂರು ಮಾಡಿದ್ದಾರೆ ಎಂಬ ಆರೋಪಗಳು ಇವೆ.

ಅರ್ಹ ಎಂಜಿನಿಯರ್ ಗಳನ್ನು ಪಕ್ಕಕ್ಕೆ ಸೇರಿಸಿ ಸುಧೀರ್ ಗೆ ಹುದ್ದೆ ನೀಡಿರುವುದು ಅಧಿಕಾರಿಗಳ ತೀವ್ರ ಆಕ್ಷೇಪಕ್ಕೆ ಕಾರಣವಾಗಿದೆ. ಹೀಗಾಗಿ ಅರ್ಹ ಮುಖ್ಯ ಎಂಜಿನಿಯರ್ ನೇಮಕಕ್ಕೆ ಒತ್ತಾಯ ಕೇಳಿಬಂದಿದೆ.

Comments (0)

Your email address will not be published. Required fields are marked *

Back to top button