ರಾಜಕೀಯರಾಜ್ಯಸುದ್ದಿ

ವರುಣ ಜಾತ್ರೆಗೆ ಸಿಎಂ ಸೌದೆ ಬದಲಿಗೆ ಸಿಲಿಂಡರ್ ಭಾಗ್ಯ!

ಮೈಸೂರು: ಜಿಲ್ಲೆಯ ವರುಣ ಕ್ಷೇತ್ರದ ವರಕೊಡು ಗ್ರಾಮದಲ್ಲಿ ನಡೆದ ದೊಡ್ಡ ಜಾತ್ರೆಯ ಸಂದರ್ಭದಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಪ್ರಭಾವ ಬಳಸಿ ಭಕ್ತಾದಿಗಳ ಪ್ರಸಾದ ತಯಾರಿಕೆಗಾಗಿ ಒಂದು ಲೋಡ್ ಗ್ಯಾಸ್ ಸಿಲಿಂಡರ್‌ಗಳನ್ನು ಪೂರೈಸಿದ್ದಾರೆ.

ಶುಕ್ರವಾರ ನಡೆದ ಈ ಅದ್ಧೂರಿ ಜಾತ್ರೆಯಲ್ಲಿ ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು. ಪ್ರಸಾದ ತಯಾರಿಸಲು ಇಂಧನದ ಕೊರತೆಯಾಗದಂತೆ ಮುನ್ನೆಚ್ಚರಿಕೆ ವಹಿಸಿದ ಸಿಎಂ, ಸುಮಾರು 200 ರಿಂದ 250 ಸಿಲಿಂಡರ್‌ಗಳನ್ನು ಒದಗಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದರು. ಜಾತ್ರೆಗೆ ಎರಡು ದಿನ ಮುಂಚಿತವಾಗಿಯೇ ಈ ವ್ಯವಸ್ಥೆ ಮಾಡಲಾಗಿತ್ತು ಎಂದು ಮೈಸೂರು ಹೋಟೆಲ್ ಸಂಘದ ಅಧ್ಯಕ್ಷ ನಾರಾಯಣಗೌಡ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ಇದೇ ಸಂದರ್ಭದಲ್ಲಿ ಹೋಟೆಲ್ ಉದ್ಯಮಿಗಳ ಪರವಾಗಿ ಸಿಎಂಗೆ ಮನವಿಯನ್ನೂ ಮಾಡಲಾಗಿದೆ. ಮೈಸೂರಿನಲ್ಲಿ ನಿತ್ಯ ಸುಮಾರು 4,000 ಸಿಲಿಂಡರ್‌ಗಳ ಬಳಕೆಯಾಗುತ್ತಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿ ಕೊರತೆಯಿದೆ. ಸಿಎಂ ಅವರು ಮನಸ್ಸು ಮಾಡಿದರೆ ಏನೂ ಬೇಕಾದರೂ ಸಾಧ್ಯ ಎಂಬುದು ವರಕೊಡು ಜಾತ್ರೆಯ ಮೂಲಕ ಸಾಬೀತಾಗಿದೆ. ಆದ್ದರಿಂದ, ನಗರದ ಹೋಟೆಲ್ ಉದ್ಯಮಕ್ಕೆ ಕನಿಷ್ಠ 700-800 ಸಿಲಿಂಡರ್‌ಗಳಾದರೂ ನಿರಂತರವಾಗಿ ಸಿಗುವಂತೆ ಕ್ರಮ ಕೈಗೊಳ್ಳಬೇಕು ಎಂದು ನಾರಾಯಣಗೌಡ ಆಗ್ರಹಿಸಿದ್ದಾರೆ.

Comments (0)

Your email address will not be published. Required fields are marked *

Back to top button