ಸಿಎಂ ಸಿದ್ದರಾಮಯ್ಯ 2025-26 ಸಾಲಿನ ರಾಜ್ಯ ಬಜೆಟ್ ಮಂಡಿಸಿದ್ದು, ಬೆಂಗಳೂರಿಗೆ ಭರಪೂರ ಅನುದಾನ ಘೋಷಿಸಿದ್ದಾರೆ, ಹಾಗಿದ್ರೇ ಸಿಎಂ ದಾಖಲೆಯೆ 16ನೇ ಬಜೆಟ್ನಲ್ಲಿ ಬೆಂಗಳೂರಿಗೆ ಏನೆಲ್ಲಾ ಅನುದಾನಗಳು ಸಿಕ್ಕಿವೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ;
73km ಉದ್ದಾದ ಬ್ಯುಸಿನೆಸ್ ಕಾರಿಡಾರ್ ರಸ್ತೆ ನಿರ್ಮಾಣ, 27 ಸಾವಿರ ಕೋಟಿ ಅನುದಾನ.
ನಗರದಲ್ಲಿ ಒಳಚರಂಡಿ ಹಾಗೂ ಎಸ್.ಟಿ.ಪಿ ಜಾಲ ವಿಸ್ತರಣೆ.
ನಗರದಲ್ಲಿ ಹೊಸ 120km ಉದ್ದ ಪ್ಲೈಓವರ್ & ಗ್ರೇಡ್ ಸಪರೇಟರ್ ನಿರ್ಮಾಣ.
21 ಹೊಸ ರಸ್ತೆ ಅಭಿವೃದ್ಧಿಗೆ 1,800 ಕೋಟಿ ಮೀಸಲು.
ಟ್ರಾಫಿಕ್ ನಿವಾರಣೆಗೆ ರಾಜಕಾಲುವೆ, ಬಫರ್ ಝೋನ್ ಗಳಲ್ಲಿ 300km ರಸ್ತೆ ನಿರ್ಮಾಣಕ್ಕೆ 3 ಸಾವಿರ ಕೋಟಿ
ಟ್ರಾಫಿಕ್ ಸಮಸ್ಯೆ ನಿವಾರಣೆಗೆ 50km ಉದ್ದದ ಡಬಲ್ ಡೆಕ್ಕರ್ ಪ್ಲೈಓವರ್
ನಮ್ಮ ಮೆಟ್ರೋ 3ನೇ ಹಂತಕ್ಕೆ 8,916 ಕೋಟಿ ಮೀಸಲು
ನಮ್ಮ ಮೆಟ್ರೋ ಯೋಜನೆಯನ್ನು ದೇವನಹಳ್ಳಿವರೆಗೆ ವಿಸ್ತರಣೆ
ಬೆಂಗಳೂರು ಬಿಸಿನೆಸ್ ಕಾರಿಡರ್ ರಸ್ತೆಗೆ 20 ಸಾವಿರ ಕೋಟಿ ಅನುದಾನ
416 ಕೋಟಿ ವೆಚ್ಚದಲ್ಲಿ ಸಬ್ ಅರ್ಟೀರಿಯಲ್ ರಸ್ತೆ ಅಭಿವೃದ್ಧಿ
40 ಸಾವಿರ ಕೋಟಿ ವೆಚ್ಚದಲ್ಲಿ ಉತ್ತರ ದಿಂದ ದಕ್ಷಿಣ & ಪೂರ್ವದಿಂದ ಪಶ್ಚಿಮ ವರೆಗೆ ಟನಲ್ ರಸ್ತೆ ನಿರ್ಮಾಣ
ಸುಗಮ ಸಂಚಾರಕ್ಕೆ ನಗರದ ಪ್ರಮುಖ ರಸ್ತೆಗಳನ್ನು ಸಿಗ್ನಲ್ ಮುಕ್ತ ರಸ್ತೆಯಾಗಿ ಪರಿವರ್ತನ
ಹೊಸದಾಗಿ ಬೃಹತ್ ಕಾಮಗಾರಿಗಳ ನಿರ್ಮಾಣಕ್ಕೆ ವಿಶೇಷ ಸಂಸ್ಥೆಗಳ ಸ್ಥಾಪನೆ
ರಸ್ತೆ, ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳಿಗೆ 8 ಸಾವಿರ ಕೋಟಿ ಅನುದಾನ
ಮೆಜೆಸ್ಟಿಕ್ ಬಸ್ ನಿಲ್ದಾಣ ವನ್ನು ಪುನರ್ ಅಭಿವೃದ್ಧಿ
ಸಾರಿಗೆ ಹಬ್ ನೊಂದಿಗೆ ಪ್ರಾಜೆಕ್ಟ್ ಮೆಜೆಸ್ಟಿಕ್ ಯೋಜನೆ
ಸಾರ್ವಜನಿಕರ ಅನುಕೂಲಕ್ಕಾಗಿ ವಾಣಿಜ್ಯ ಸಂಕೀರ್ಣ ನಿರ್ಮಾಣ
ಬೆಂಗಳೂರು ಸೇಫ್ ಸಿಟಿ ಯೋಜನೆಗೆ ಬಜೆಟ್ ನಲ್ಲಿ ಮಹತ್ವ
ಬೆಂಗಳೂರು ಸೇಪ್ ಸಿಟಿ ಯೋಜನೆಗೆ 667 ಕೋಟಿ ಅನುದಾನ ಮೀಸಲು
ನಗರದಲ್ಲಿ ಹೊಸದಾಗಿ 7500 ಸಿಸಿ ಕ್ಯಾಮೆರಾ ಅಳವಡಿಕೆ
10 ಡ್ರೋನ್ ಕ್ಯಾಮೆರಾ ಹಾಗೂ 560 ಬಾಡಿ ವಾರ್ನ್ ಕ್ಯಾಮೆರಾ ಅಳವಡಿಕೆ
ಶಕ್ತಿ ಯೋಜನೆಯ ಅಡಿಯಲ್ಲಿ ಸಾರಿಗೆ ಇಲಾಖೆಗೆ ಅತಿ ಹೆಚ್ಚಿನ ಆರ್ಥಿಕ ನೆರವು
4 ಸಾರಿಗೆ ನಿಗಮಗಳಿಗೆ 2 ಸಾವಿರ ಕೋಟಿ ಅನುದಾನ, ಹೊಸದಾಗಿ 10 ಸಾವಿರ ಹೊಸ ಬಸ್ ಗಳ ಖರೀದಿ
ಬಜೆಟ್ ನಲ್ಲಿ ಬೆಂಗಳೂರಿನಲ್ಲಿ ಅಪರಾದಗಳನ್ನು ತಡೆಯಲು ಒತ್ತು
ಇಷ್ಟು ದಿನ 8 ವಲಯಗಳಿದ್ದ ಪೊಲೀಸ್ ಇಲಾಖೆಯನ್ನು 11 ವಲಯಗಳಾಗಿ ವಿಂಗಡಣೆ
ಹೊಸದಾಗಿ ಮೂರು ಡಿಸಿಪಿ ವಲಯಗಳ ಸೇರ್ಪಡೆ
ರಾಜಕಾಲುವೆ ಅಭಿವೃದ್ಧಿಗಾಗಿ 3 ಸಾವಿರ ಕೋಟಿ ಮೀಸಲು
ಆರ್ಟೀರಿಯಲ್ & ಸಬ್ ಆರ್ಟೀರಿಯಲ್ ರಸ್ತೆಗಳ ಅಭಿವೃದ್ಧಿಗಾಗಿ 660 ಕೋಟಿ ಅನುದಾನ
ಬ್ರ್ಯಾಂಡ್ ಬೆಂಗಳೂರು ಯೋಜನೆಗೆ 1,800 ವಿಶೇಷ ಅನುದಾನ
ಮಳೆಯ ಪ್ರವಾಹ ತಡೆಯಲು BBMP & BWSSB ಒಟ್ಟು 3 ಸಾವಿರ ಕೋಟಿ ಮೀಸಲು
ಕಾವೇರಿ 5ನೇ ಹಂತಕ್ಕೆ 5,500 ಕೋಟಿ ರೂ ಅನುದಾನ
ಬಿಬಿಎಂಪಿಯ ಮೂಲ ಭೂತ ಸೌಕರ್ಯಗಳಿಗಾಗಿ 2 ಸಾವಿರ ಕೋಟಿ ಬಿಡುಗಡೆ
ಸಿಎಂ ನಗರೋತ್ಥಾನ ಯೋಜನೆಗೆ 500 ಕೋಟಿ ಮೀಸಲು