ಬೆಂಗಳೂರು; ಈ ಹಿಂದೆ ಬಿಜೆಪಿ ಸರ್ಕಾರದಿಂದ ಶಾಲಾ ಕಾಲೇಜ್ ಗಳಿಗೆ ಹಿಜಾಬ್ ಧರಿಸಿ ಬರುವುದನ್ನು ನಿಷೇಧಿಸಲಾಗಿತ್ತು. ಕೆಲ ಕಾಲ ಈ ನಿಯಮವೂ ರಾಜ್ಯದಲ್ಲಿ ಮುಂದುವರಿದಿತ್ತು. ಇದೀಗ ಸಿಎಂ ಸಿದ್ದರಾಮಯ್ಯ ಮೈಸೂರಿನಲ್ಲಿ ಭಾಷಣದ ನಡುವೆ ಹಿಜಾಬ್ ನಿಷೇಧ ವಾಪಸ್ ತೆಗೆದುಕೊಳ್ಳಲಾಗುವುದೆಂದು ಹೇಳಿದ್ದರು.
ಹಿಜಾಬ್ ಹೇಳಿಕೆ ಕೆಲವೇ ಹೊತ್ತಿನಲ್ಲಿ ವಿರೋಧ ಪಕ್ಷಗಳು ಸಾಮಾಜಿಕ ಜಾಲತಾಣ ಮೂಲಕ ಸಿಎಂ ಸಿದ್ದರಾಮಯ್ಯನವರ ವಿರುದ್ದ ಕಿಡಿಕಾರಿದ್ದಾರೆ.
ಟಾಲ್ಕ್ , ಟ್ವೀಟ್ ವಾರ್ ಹೆಚ್ಚಾಗುತ್ತಿದ್ದಂತೆ ಇದೀಗ ಸಿಎಂ ಹಿಜಾಬ್ ನಿಷೇಧ ವಾಪಾಸ್ ಬಗ್ಗೆ ಇನ್ನೂ ತೀರ್ಮಾನ ಮಾಡಿಲ್ಲ,ಹಿಜಾಬ್ ನಿಷೇಧ ವಾಪಾಸ್ ಗೆ ಯೋಚನೆ ಮಾಡ್ತೇವೆ ಎಂದು ಹೇಳಿದ್ದಾರೆ. ಸಿಎಂ ಹೇಳಿಕೆಗೆ ಕೆಲ ಮಂತ್ರಿಗಳು ಹಿಜಾಬ್ ನಿಷೇಧ ವಾಪಸ್ ಪಡೆಯಲು ಸರ್ಕಾರದ ಚಿಂತನೆ ಬಗ್ಗೆ ಒಮ್ಮತ್ತ ನೀಡಿದ್ದಾರೆ.
ಇನ್ನು ಹಲವರು ರಾಜ್ಯದಲ್ಲಿ ಕೋಮುವಾದ ಸ್ಪಲ್ಪ ಮಟ್ಟಿಗೆ ಕಡಿಮೆ ಆಗಿತ್ತು. ಇದೀಗ ಹಿಜಾಬ್ ನಿಷೇಧ ವಾಪಸ್ , ಹೇಳಿಕೆಯಿಂದ ರಾಜ್ಯದಲ್ಲಿ ಮತ್ತೆ ಕೋಮುವಾದ ಸೃಷ್ಠಿಯಾಗುತ್ತದೆ ಎಂದು ಹಲವರು ಕಿಡಿಕಾರಿದ್ದಾರೆ. ಹಿಜಾಬ್ ನಿಷೇಧ ವಾಪಸ್ ನಿಯಮ ಜಾರಿ ಯಾಗುತ್ತಾ ಕಾದು ನೋಡಬೇಕಿದೆ.