Thursday, November 20, 2025
19.5 C
Bengaluru
Google search engine
LIVE
ಮನೆ#Exclusive NewsTop Newsಎಎಸ್​ಪಿ ಮೇಲೆ ಕೈ ಎತ್ತಿದ ಸಿಎಂ.. ಆಗಿದ್ದಾದ್ರೂ ಏನು?

ಎಎಸ್​ಪಿ ಮೇಲೆ ಕೈ ಎತ್ತಿದ ಸಿಎಂ.. ಆಗಿದ್ದಾದ್ರೂ ಏನು?

ಬೆಳಗಾವಿ ಕಾರ್ಯಕ್ರಮದಲ್ಲಿ ಎಎಸ್​ಪಿ ಮೇಲೆ ಸಿಎಂ ಸಿದ್ದರಾಮಯ್ಯ ಹಲ್ಲೆಗೆ ಯತ್ನಿಸಿದ ಪ್ರಸಂಗ ನಡೆದಿದೆ.. ವೇದಿಕೆಯಲ್ಲೇ ಭದ್ರತೆಗೆ ನಿಯೋಜನೆಗೊಂಡಿದ್ದ ಧಾರವಾಡ ಎಎಸ್​ಪಿ ನಾರಾಯಣ ಭರಮನಿಗೆ ಹೊಡೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಕೈ ಎತ್ತಿದ್ದಾರೆ. ಮುಖ್ಯಮಂತ್ರಿ ಕೋಪಿಸಿಕೊಂಡಿರುವ ವೀಡಿಯೋ ಸಖತ್ ವೈರಲ್ ಆಗಿದೆ.

ಕೇಂದ್ರದ ಬೆಲೆ ಏರಿಕೆ ನೀತಿಗಳ ವಿರುದ್ಧ ಕಾಂಗ್ರೆಸ್ ಪಕ್ಷ ಬೆಳಗಾವಿಯಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಷಣ ಮಾಡುವಾಗ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ಮಾಡುತ್ತಾ ವೇದಿಕೆ ಬಳಿ ಬಂದಿದ್ರು. ಇದರಿಂದ ಸಿಎಂ ಸಿದ್ದರಾಮಯ್ಯ ತಾಳ್ಮೆ ಕಳೆದುಕೊಂಡ್ರು.. ಏಯ್ ಪೊಲೀಸ್​.. ಯಾರಯ್ಯ ನೀನು.. ಬಾರಯ್ಯ.. ಎಂದು ವೇದಿಕೆಯಲ್ಲಿ ಭದ್ರತೆಗೆ ಇದ್ದ ಎಎಸ್​ಪಿ ನಾರಾಯಣ ಭರಮನಿ ಅವರನ್ನು ಹತ್ತಿರಕ್ಕೆ ಕರೆದು ಹೊಡೆಯುವ ರೀತಿ ಕೈ ಎತ್ತಿದ್ರು.

ಖುದ್ದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲಾ ಬಂದು ಸಿಟ್ಟಾಗಬೇಡಿ ಅಂತಾ ಕಿವಿಯಲ್ಲಿ ಹೇಳಿದ್ರೂ ಸಿಎಂ ಕೇಳಿಸಿಕೊಳ್ಳಲಿಲ್ಲ.. ಸಚಿವರಾದ ಹೆಚ್​ಕೆ ಪಾಟೀಲ್ ಬಂದ್ರೂ ಪ್ರಯೋಜನ ಆಗಲಿಲ್ಲ.. ಸಮಾಧಾನ ಮಾಡಲು ಬಂದ ಎಂಬಿ ಪಾಟೀಲ್ ಮೇಲೆ ಸಿಎಂ ಸಿದ್ದರಾಮಯ್ಯ ಸಿಟ್ಟಾದ್ರು. ಕಡೆಗೆ ಸಿಎಂ ಭಾಷಣ ಮಾಡ್ತಿದ್ದ ಮೈಕನ್ನು ಆಫ್ ಮಾಡಿ ಪರಿಸ್ಥಿತಿ ನಿಭಾಯಿಸಲು ಕಾಂಗ್ರೆಸ್ಸಿಗರು ನೋಡಿದ್ರು.

ಇತ್ತೀಚಿನ ದಿನಗಳಲ್ಲಿ ಸಿಎಂ ಸಿದ್ದರಾಮಯ್ಯ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಪದೇ ಪದೇ ತಾಳ್ಮೆ ಕಳೆದುಕೊಳ್ತಿದ್ದಾರೆ. ಮೊನ್ನೆ ಮೊನ್ನೆಯಷ್ಟೇ ಕಾರ್ಯಕ್ರಮವೊಂದ್ರಲ್ಲಿ ಡಿಸಿ ಮೇಲೆ ಗರಂ ಆಗಿದ್ದ ಮುಖ್ಯಮಂತ್ರಿ ಇಂದು ಎಎಸ್​ಪಿ ಮೇಲೆ ಸಿಟ್ಟಾಗಿದ್ದಾರೆ. ಎಲ್ಲರನ್ನು ಸಮಾನವಾಗಿ ಕಾಣ್ತೀನಿ ಎನ್ನುವ ಸಿಎಂಗೆ ಈ ಪರಿ ಅಟಿಟ್ಯೂಡ್ ಏಕೆ? ಫ್ಯೂಡಲಿಸಂ ವಿರುದ್ಧ ಮಾತಾಡುವ ಸಿದ್ದರಾಮಯ್ಯ ಬಾಯಲ್ಲಿ ಅಕ್ಷರಶಃ ಫ್ಯೂಡಲ್ ಲಾಂಗ್ವೇಜ್ ಹೊರಬರ್ತಿರೋದು ಚರ್ಚೆಗೆ ಗ್ರಾಸವಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಏನಿದು ನಿಮ್ಮ ನಡೆ? ಇದು ಸರೀನಾ? ಎಎಸ್​ಪಿಗೆ ಕಪಾಳಕ್ಕೆ ಹೊಡೆಯಲು ಮುಂದಾದ್ರೆ ಪೊಲೀಸ್ ಇಲಾಖೆಯ ಆತ್ಮಸ್ಥೈರ್ಯ ಕುಗ್ಗಲ್ವಾ?

ಐಎಎಸ್ ಅಧಿಕಾರಿಯನ್ನು ಜವಾನನಂತೆ ನಡೆಸಿಕೊಂಡ್ರೆ ಅದನ್ನು ಆಡಳಿತಶಾಹಿ ವರ್ಗ ಹೇಗೆ ಸ್ವೀಕರಿಸಬೇಕು? ಎಲ್ಲಿ ಹೋಯ್ತು ನಿಮ್ಮ ಆ ಕಾಲದ ಪ್ರಬುದ್ಧತೆ? ಸಮಾಜವಾದಿ ಸಿದ್ದಾಂತ? ಸಿದ್ದರಾಮಯ್ಯನವರೇ ಎಲ್ಲಿ ಹೋಯ್ತು ಭೂಮಾಲಿಕ ವಿರೋಧಿ ಸಿದ್ದಾಂತ..?

ನೀವು ಅಕ್ಷರಶಃ ಜಮಿನ್ದಾರನಂತೆ ವರ್ತಿಸೋದು ಎಷ್ಟು ಸರಿ? ಎಂದು ಸಾರ್ವಜನಿಕರು ಮಾತನಾಡಿಕೊಳ್ಳುವಂತಾಗಿದೆ.

ರಾಜ್ಯದಲ್ಲಿ ಭ್ರಷ್ಟಾಚಾರ ಮೇರೆ ಮಿರಿದೆ.. ನಿರುದ್ಯೋಗ ತಾಂಡವ ಆಡ್ತಿದೆ..ಈ ಜ್ವಲಂತ ಸಮಸ್ಯೆಗಳ ಬಗ್ಗೆ ಗಮನಹರಿಸೋದು ಬಿಟ್ಟು ನೀವೇ ಹೀಗೆ ತಾಳ್ಮೆ ಕಳೆದುಕೊಂಡ್ರೆ ಹೇಗೆ ಎಂದು ಜನ ಪ್ರಶ್ನಿಸ್ತಿದ್ದಾರೆ

 

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments