ಕ್ರೈಂ ಸ್ಟೋರಿ

ಮೆಟ್ರೋ ನಿಲ್ದಾಣದಲ್ಲಿ ಗುಂಡಿಟ್ಟುಕೊಂಡು ಯೋಧ ಆತ್ಮಹತ್ಯೆ

ದೆಹಲಿಯ ವಿಹಾರ ವೆಸ್ಟ್ ಮೆಟ್ರೋ ನಿಲ್ದಾಣದಲ್ಲಿ ದಾರುಣ ಘಟನೆಯೊಂದು ನಡೆದಿದೆ. ಕರ್ತವ್ಯ ನಿರ್ವಹಿಸ್ತಿದ್ದ ಸಿಐಎಸ್​ಎಫ್​ ಯೋಧರೊಬ್ಬರು ತಲೆಗೆ ತಮ್ಮದೇ ಬಂದೂಕಿನಿಂದ ಗುಂಡು ಸಿಡಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತ ಸಿಐಎಸ್​ಎಫ್ ಯೋಧನನ್ನು ಮಹಾರಾಷ್ಟ್ರದ ಗಡ್ಚಿರೋಲಿ ಮೂಲದ ಸಹರೆ ಕಿಶೋರ್ ಎಂದು ಗುರುತಿಸಲಾಗಿದೆ. ತಲೆಗೆ ಗುಂಟು ಹಾರಿಸಿಕೊಳ್ಳುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕುಳಿತ ಕಡೆಯಲ್ಲೇ ಸಹರೆ ಕಿಶೋರ್​ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದನ್ನು ನೋಡಿ ಇತರೆ ಸಿಬ್ಬಂದಿ ಗಾಬರಿಗೊಂಡು ಓಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ದೆಹಲಿಯ ವಿಹಾರ್ ವೆಸ್ಟ್ ಮೆಟ್ರೋ ನಿಲ್ದಾಣದಲ್ಲಿ ಸಿಐಎಸ್​ಎಫ್ ಯೋಧ ವಿಹರೆ ಕಿಶೋರ್​ 2022ರಿಂದ ಕಾರ್ಯನಿರ್ವಹಿಸುತ್ತಿದ್ದರು. ಸಹರೆ ಕಿಶೋರ್ ಆತ್ಮಹತ್ಯೆಗೆ ಕಾರಣವೇನು ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ.

 

Comments (0)

Your email address will not be published. Required fields are marked *

Back to top button