ನಾವು ದಿನನಿತ್ಯ ಸೇವಿಸುವ ಆಹಾರದ ಬಗ್ಗೆ ಹಾಗೂ ಮಕ್ಕಳಿಗೆ ಎಂತಹ ಆಹಾರ ನೀಡಿದರೆ ಉಪಯುಕ್ತ ಎಂಬುವುದನ್ನು ತಿಳಿದುಕೊಳ್ಳಿ.. ಮಕ್ಕಳ ಆಹಾರದಲ್ಲಿ ನುಗ್ಗೆ ಸೊಪ್ಪಿನ ಪುಡಿಯನ್ನು ಸೇರಿಸಿದರೆ, ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ನುಗ್ಗೆಸೊಪ್ಪನ್ನು ಆಯುರ್ವೇದದಲ್ಲಿ ಔಷಧಿ ಎಂದು ಪರಿಗಣಿಸಲಾಗಿದೆ. ಇದು ಅನೇಕ ಆರೋಗ್ಯ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ. ಹೆಚ್ಚಿನ ಜನರು ಇದನ್ನು ಪಲ್ಯದ ರೂಪದಲ್ಲಿ ಸೇವಿಸುತ್ತಾರೆ. ಇದನ್ನು ಪುಡಿ ರೂಪದಲ್ಲಿಯೂ ಬಳಸಲಾಗುತ್ತದೆ. ಇದು ವಯಸ್ಕರಿಗೆ ಮತ್ತು ಮಕ್ಕಳಿಗೆ ಉಪಯುಕ್ತವಾಗಿದೆ.


ನುಗ್ಗೆಸೊಪ್ಪನ್ನು ಸೇವಿಸುವುದರಿಂದ ಮಕ್ಕಳಿಗೆ ಎಲ್ಲಾ ಪೋಷಕಾಂಶಗಳು ದೊರೆಯುತ್ತವೆ. ಇದು ಹಾಲಿಗಿಂತ 17 ಪಟ್ಟು ಹೆಚ್ಚು ಕ್ಯಾಲ್ಸಿಯಂ, ಪಾಲಕ್‌ಕ್ಕಿಂತ 25 ಪಟ್ಟು ಹೆಚ್ಚು ಕಬ್ಬಿಣ, ಬಾಳೆಹಣ್ಣಿಗಿಂತ 15 ಪಟ್ಟು ಹೆಚ್ಚು ಪೊಟ್ಯಾಸಿಯಮ್ ಮತ್ತು ಕ್ಯಾರೆಟ್‌ಗಿಂತ 10 ಪಟ್ಟು ಹೆಚ್ಚು ವಿಟಮಿನ್ ‘ಎ’ ಅನ್ನು ಹೊಂದಿರುತ್ತದೆ. ಮಕ್ಕಳ ರೋಗನಿರೋಧಕ ಶಕ್ತಿ ವಯಸ್ಕರಿಗಿಂತ ದುರ್ಬಲವಾಗಿರುವಂತಹ ಪರಿಸ್ಥಿತಿಯಲ್ಲಿ, ಮೊರಿಂಗಾ ಪುಡಿಯನ್ನು ಸೇವಿಸುವುದು ಪ್ರಯೋಜನಕಾರಿಯಾಗಿದೆ. ಇದರಲ್ಲಿರುವ ಜೀವಸತ್ವಗಳು ಮತ್ತು ಖನಿಜಗಳು ಮಕ್ಕಳನ್ನು ರೋಗಗಳಿಂದ ದೂರವಿಡಲು ಸಹಾಯ ಮಾಡುತ್ತದೆ.


ಮಕ್ಕಳ ಆರೋಗ್ಯಕರ ಬೆಳವಣಿಗೆಗೆ ಆಹಾರದ ಬಗ್ಗೆ ಗಮನ ಹರಿಸುವುದು ಬಹಳ ಮುಖ್ಯ. ಮಕ್ಕಳ ಅನಾರೋಗ್ಯ ಪರಿಸ್ಥಿತಿಯಲ್ಲಿ ನುಗ್ಗೆ ಸೊಪ್ಪಿನ ಪುಡಿ ಆರೋಗ್ಯಕರ ಆಯ್ಕೆಯಾಗಿದೆ. ಇದರಲ್ಲಿರುವ ಪೋಷಕಾಂಶಗಳು ಮಗುವಿನ ಒಟ್ಟಾರೆ ಆರೋಗ್ಯಕ್ಕೆ ಪ್ರಯೋಜನವನ್ನು ನೀಡುತ್ತದೆ ಹಾಗೂ ಮಗುವಿನ ಆರೋಗ್ಯಕರ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಮಕ್ಕಳಲ್ಲಿ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳಾಗುವುದು ಸಾಮಾನ್ಯ. ನುಗ್ಗೆ ಸೊಪ್ಪಿನ ಪುಡಿಯಲ್ಲಿ ಹೆಚ್ಚಿನ ಪ್ರಮಾಣದ ಫೈಬರ್ ಇದ್ದು, ಇದು ಜೀರ್ಣಕ್ರಿಯೆಯನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಮಕ್ಕಳ ಆಹಾರದಲ್ಲಿ ನುಗ್ಗೆ ಸೊಪ್ಪಿನ ಪುಡಿಯನ್ನು ಸೇರಿಸುವುದರಿಂದ ಅವರ ಜೀರ್ಣಕ್ರಿಯೆಯು ಆರೋಗ್ಯಕರವಾಗಿರುತ್ತದೆ ಮತ್ತು ಮಕ್ಕಳಿಗೆ ಮಲಬದ್ಧತೆ ಮತ್ತು ಅಜೀರ್ಣದಂತಹ ಸಮಸ್ಯೆಗಳು ಉಂಟಾಗುವುದಿಲ್ಲ.


ನುಗ್ಗೆ ಸೊಪ್ಪಿನ ಪುಡಿ ಕ್ಯಾರೆಟ್‌ಗಿಂತ 10 ಪಟ್ಟು ಹೆಚ್ಚು ‘ವಿಟಮಿನ್ ಎ’ ಇದೆ, ಇದು ಕಣ್ಣುಗಳನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಆದ್ದರಿಂದ, ಇದರ ಸೇವನೆಯು ಮಕ್ಕಳ ಕಣ್ಣಿನ ಆರೋಗ್ಯಕ್ಕೆ ಪ್ರಯೋಜನವನ್ನು ನೀಡುತ್ತದೆ. ಮಕ್ಕಳು ಜ್ಯೂಸ್ ಮತ್ತು ಹಣ್ಣಿನ ಸ್ಮೂಥಿಗಳನ್ನು ಇಷ್ಟಪಡುತ್ತಾರೆ. ನೀವು ನುಗ್ಗೆ ಸೊಪ್ಪಿನ ಪುಡಿಯನ್ನು ಜ್ಯೂಸ್ ಅಥವಾ ಸ್ಮೂಥಿಗೆ ಸೇರಿಸುವ ಮೂಲಕ ಮಕ್ಕಳಿಗೆ ನೀಡಬಹುದು. ಇದು ರುಚಿಯನ್ನು ಹೆಚ್ಚಿಸುತ್ತದೆ ಹಾಗೂ ಮಕ್ಕಳಿಗೆ ಶಕ್ತಿಯ ಪಾನೀಯವಾಗಿಯೂ ಕಾರ್ಯನಿರ್ವಹಿಸುತ್ತದೆ. ಮಜ್ಜಿಗೆ, ಮೊಸರು ಮತ್ತು ರೈತಾಗೆ ಸೇರಿಸಿ ನುಗ್ಗೆ ಸೊಪ್ಪಿನ ಪುಡಿಯನ್ನು ನೀಡಬಹುದು. ನುಗ್ಗೆ ಸೊಪ್ಪಿನ ಪುಡಿಯನ್ನು ಹಣ್ಣುಗಳ ಮೇಲೆ ಸಿಂಪಡಿಸಿ ನೀಡಬಹುದು. ನೀವು ಯಾವುದೇ ಹಣ್ಣು ಅಥವಾ ತರಕಾರಿಗಳ ಪ್ಯೂರಿಗೆ ನುಗ್ಗೆ ಸೊಪ್ಪಿನ ಪುಡಿಯನ್ನು ಸೇರಿಸಿ ಮಕ್ಕಳಿಗೆ ನೀಡಬಹುದು.

By admin

Leave a Reply

Your email address will not be published. Required fields are marked *

Verified by MonsterInsights