ರಾಜ್ಯ

ರಾಜ್ಯದ 197 ಪೋಲಿಸ್​ ಅಧಿಕಾರಿಗಳಿಗೆ ಮುಖ್ಯಮಂತ್ರಿ ಪದಕ ಗೌರವ

ಬೆಂಗಳೂರು: ರಾಜ್ಯ ಸರ್ಕಾರ 2024ನೇ ಸಾಲಿನ ಮುಖ್ಯಮಂತ್ರಿ ಪದಕ ಪಟ್ಟಿ ಪ್ರಕಟಿಸಿದ್ದು, ರಾಜ್ಯದ ಮೂವರು ಐಪಿಎಸ್​ ಅಧಿಕಾರಿಗಳು ಸೇರಿದಂತೆ 219 ಪೋಲಿಸ್ ಅಧಿಕಾರಿಗಳ ಮುಖ್ಯಮಂತ್ರಿ ಪದಕಕ್ಕೆ ಭಾಜನರಾಗಿದ್ದಾರೆ.

ಬೆಂಗಳೂರು ಗ್ರಾಂ. ಎಸ್​ಪಿ ಸಿ.ಕೆ.ಬಾಬಾ, ಸಿಐಡಿ ಎಸ್​ಪಿ ಡಾ. ಅನೂಪ್ ಶೆಟ್ಟಿ, ಹಾವೇರಿ ಎಸ್​ಪಿ ಅಂಶುಕುಮಾರ್​, ಬೆಂಗಳೂರಿನ ಕೆ.ಜಿಹಳ್ಳಿ ಎಸಿಪಿ ಪ್ರಕಾಶ್ ರಾಥೋಡ್, ಸಿಸಿಬಿ ಪಿಐ ಸಂತೋಷ್ ರಾಮ್ ಸೇರಿ 197 ಜನ ಪೋಲಿಸ್​ ಅಧಿಕಾರಿ ಹಾಗೂ ಸಿಬ್ಬಂದಿಗೆ ಮುಖ್ಯಮಂತ್ರಿ ಪದಕ ಘೋಷಣೆ ಮಾಡಲಾಗಿದೆ.

ಅಲ್ಲದೇ, ರಾಜ್ಯ ಮತ್ತು ನೆರೆ ರಾಜ್ಯದ ನಕ್ಸಲರ ಶರಣಾಗತಿಗಾಗಿ ರಾಜ್ಯ ಗುಪ್ತವಾರ್ತೆ ಹಾಗೂ ನಕ್ಸಲ್​ ನಿಗ್ರಹ ಪಡೆಯ 22 ಮಂದಿ ಅಧಿಕಾರಿ-ಸಿಬ್ಬಂದಿಗೂ ಮುಖ್ಯಮಂತ್ರಿ ಪದಕ ಘೋಷಿಸಲಾಗಿದೆ.

Comments (0)

Your email address will not be published. Required fields are marked *

Back to top button