Wednesday, April 30, 2025
35.6 C
Bengaluru
LIVE
ಮನೆ#Exclusive NewsTop Newsಚುನಾವಣಾ ಆಯೋಗದಿಂದ ಸಾಮಾನ್ಯ, ವೆಚ್ಚ ವೀಕ್ಷಕರ ನೇಮಕ: ದೂರು ಸಲ್ಲಿಕೆಗೆ ಅವಕಾಶ

ಚುನಾವಣಾ ಆಯೋಗದಿಂದ ಸಾಮಾನ್ಯ, ವೆಚ್ಚ ವೀಕ್ಷಕರ ನೇಮಕ: ದೂರು ಸಲ್ಲಿಕೆಗೆ ಅವಕಾಶ

ರಾಮನಗರ: 185-ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ನಡೆಯುತ್ತಿರುವ ಹಿನ್ನಲೆಯಲ್ಲಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಕೇಂದ್ರ ಚುನಾವಣಾ ಆಯೋಗವು ಸಾಮಾನ್ಯ ವೀಕ್ಷಕರು ಹಾಗೂ ವೆಚ್ಚ ವೀಕ್ಷಕರನ್ನು ನಿಯೋಜಿಸಿದೆ. ಸಾಮಾನ್ಯ ವೀಕ್ಷಕರನ್ನಾಗಿ ಐಎಎಸ್ ಅಧಿಕಾರಿ ರೀತು ಹಾಗೂ ವೆಚ್ಚ ವೀಕ್ಷಕರನ್ನಾಗಿ ಐಆರ್‌ಎಸ್ ಅಧಿಕಾರಿ ಪ್ರಶಾಂತ್ ಗಡೇಕರ್ ಅವರು ಚನ್ನಪಟ್ಟಣಕ್ಕೆ ಆಗಮಿಸಿದ್ದಾರೆ.

ಸಾಮಾನ್ಯ ವೀಕ್ಷಕರಾದ ರೀತು ಅವರು ಚನ್ನಪಟ್ಟಣ ಟೌನ್‌ನ ಬಿ.ಎಂ. ರಸ್ತೆಯಲ್ಲಿರುವ ಪರಿವೀಕ್ಷಣಾ ಮಂದಿರದಲ್ಲಿ ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಸಾರ್ವಜನಿಕರ ಭೇಟಿಗೆ ಲಭ್ಯವಿರುತ್ತಾರೆ ಹಾಗೂ ಉಪ ಚುನಾವಣೆ ಕುರಿತಾದ ದೂರುಗಳಿದ್ದಲ್ಲೀ ಅವರ ಮೊಬೈಲ್ ಸಂಖ್ಯೆ: 8050465792 ಅನ್ನು ಸಂಪರ್ಕಿಸಬಹುದು.

ವೆಚ್ಚ ವೀಕ್ಷಕರಾದ ಪ್ರಶಾಂತ್ ಗಡೇಕರ್ ಅವರು ಚನ್ನಪಟ್ಟಣ ಟೌನಿನ ಬಿ.ಎಂ. ರಸ್ತೆಯಲ್ಲಿರುವ ಪರಿವೀಕ್ಷಣಾ ಮಂದಿರದಲ್ಲಿ ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಸಾರ್ವಜನಿಕರ ಭೇಟಿಗೆ ಲಭ್ಯವಿರುತ್ತಾರೆ. ಅವರ ಮೊಬೈಲ್ ಸಂಖ್ಯೆ: 9036440879 ಅನ್ನು ಸಂಪರ್ಕಿಸಿ, ದೂರುಗಳೆನ್ನಾದರೂ ಇದ್ದಲ್ಲೀ ನೀಡಬಹುದಾಗಿದೆ ಎಂದು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments