Tuesday, January 27, 2026
24.7 C
Bengaluru
Google search engine
LIVE
ಮನೆಶಿಕ್ಷಣಏ.15 ರಿಂದ ಸಿಇಟಿ ಪರೀಕ್ಷೆ ಆರಂಭ

ಏ.15 ರಿಂದ ಸಿಇಟಿ ಪರೀಕ್ಷೆ ಆರಂಭ

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ 2025ರ ಸಿಇಟಿ ಪರೀಕ್ಷೆ ದಿನಾಂಕ ಪ್ರಕಟಿಸಿದೆ. ಏ.15 ರಿಂದ 17ರವರೆಗೆ ಪರೀಕ್ಷೆಗಳು ನಡೆಯಲಿದೆ. ಈ ವರ್ಷ 3 ಲಕ್ಷ 30 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆ ಬರೆಯುವ ನಿರೀಕ್ಷೆಯಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಧಿಕಾರ ಕಾರ್ಯನಿರ್ವಾಹ ನಿರ್ದೇಶಕ ಎಚ್​​.ಪ್ರಸನ್ನ ತಿಳಿಸಿದ್ದಾರೆ.

ಸಿಇಟಿ ಕನ್ನಡ ಭಾಷೆಯ ಪರೀಕ್ಷೆ ಏಪ್ರಿಲ್ 15ಕ್ಕೆ ಹಿಂದೂಡಿಕೆ ಆಗಿದೆ. ಅಂದರೆ ಈ ಹಿಂದೆ ಪರೀಕ್ಷೆಯನ್ನು ಏಪ್ರಿಲ್ 18 ಕ್ಕೆ ನಿಗದಿಪಡಿಸಲಾಗಿತ್ತು. ಆದರೆ ಏಪ್ರಿಲ್ 18, ಶುಕ್ರವಾರ ಕ್ರೈಸ್ತ ಧಾರ್ಮಿಕ ಹಬ್ಬವಾದ ಗುಡ್ ಫ್ರೈಡೇ ಇರುವುದರಿಂದ ಸರ್ಕಾರ ಪರೀಕ್ಷೆ ದಿನಾಂಕವನ್ನು ಬದಲಿಸಿದೆ. ಏಪ್ರಿಲ್ 15ರಂದು ಬೆಂಗಳೂರು, ಮಂಗಳೂರು, ವಿಜಯಪುರ, ಬೆಳಗಾವಿ ಕೇಂದ್ರಗಳಲ್ಲಿ ಮಾತ್ರ ಕನ್ನಡ ಭಾಷಾ ಪರೀಕ್ಷೆ ನಡೆಯಲಿದೆ. 10ನೇ ತರಗತಿಯಲ್ಲಿ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕಲಿತವರು, ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಮತ್ತು ಕೆಇಎ ನಡೆಸಿದ ಕನ್ನಡ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೂ ವಿನಾಯಿತಿ ಇರುತ್ತದೆ.

ಏಪ್ರಿಲ್ 16ರಂದು 10:30 ರಿಂದ ಭೌತಶಾಸ್ತ್ರ ಹಾಗೂ ಮಧ್ಯಾಹ್ನ 2:30 ರಿಂದ ರಾಸಾಯನಶಾಸ್ತ್ರ ಪರೀಕ್ಷೆಗಳು ನಡೆಯಲಿದ್ದು, ಮರುದಿನ ಅಂದರೆ ಏಪ್ರಿಲ್ 17 ರಂದು ಬೆಳಗ್ಗೆ ಗಣಿತ ಮತ್ತು ಮಧ್ಯಾಹ್ನ ಜೀವಶಾಸ್ತ್ರ ಪರೀಕ್ಷೆ ನಡೆಯಲಿದೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments