Wednesday, August 20, 2025
18.3 C
Bengaluru
Google search engine
LIVE
ಮನೆ#Exclusive NewsTop NewsRTI ವ್ಯಾಪ್ತಿಗೆ ಸೆಂಚುರಿ ಕ್ಲಬ್ - ಹೈಕೋರ್ಟ್ ಮಹತ್ವದ ಆದೇಶ

RTI ವ್ಯಾಪ್ತಿಗೆ ಸೆಂಚುರಿ ಕ್ಲಬ್ – ಹೈಕೋರ್ಟ್ ಮಹತ್ವದ ಆದೇಶ

ಬೆಂಗಳೂರು: ಮಹತ್ವದ ಬೆಳವಣಿಗೆಯಲ್ಲಿ ಆರ್​ಟಿಐ ವ್ಯಾಪ್ತಿಗೆ ಬೆಂಗಳೂರಿನ ಪ್ರತಿಷ್ಠಿತ ಸೆಂಚುರಿ ಕ್ಲಬ್ ಬರುತ್ತದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿ ಆದೇಶ ಹೊರಡಿಸಿದೆ. ಸೆಂಚುರಿ ಕ್ಲಬ್​ ಸಾರ್ವಜನಿಕ ಪ್ರಾಧಿಕಾರವಾಗಿದ್ದು, ಇದು ಮಾಹಿತಿ ಹಕ್ಕು ಕಾಯ್ದೆಯ ವ್ಯಾಪ್ತಿಗೆ ಒಳಪಡುತ್ತದೆ ಎಂಬುದಾಗಿ ಮಾಹಿತಿ ಆಯೋಗ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ.

ಮಾಹಿತಿ ಆಯೋಗ ಹೊರಡಿಸಿದ ತೀರ್ಪು ಪ್ರಶ್ನಿಸಿ ಸೆಂಚುರಿ ಕ್ಲಬ್​​ ಸಲ್ಲಿಸಿದ್ದ ಅರ್ಜಿ ವಿಚಾರಣೆ ನೆಡೆಸಿದ ನ್ಯಾ. ಸೂರಜ್​ ಗೋವಿಂದರಾಜು ಅವರಿದ್ದ ಏಕಸದಸ್ಯ ಪೀಠ ಈ ಆದೇಶ ಹೊರಡಿಸಿದೆ. ಅಂದಿನ ಮಹಾರಾಜರು, ಮೈಸೂರು ಸಂಸ್ಥಾನಕ್ಕೆ ಸೇರಿದ್ದ 7.5 ಎಕರೆ ಜಮೀನನ್ನು ಸೆಂಚುರಿ ಕ್ಲಬ್​ ಗಾಗಿ ಮಂಜೂರು ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಕ್ಲಬ್​ ನಿಂದ ಮಹಾರಾಜರು ಹಣ ಪಡೆದಿರಲಿಲ್ಲ.

ಜೊತೆಗೆ ಮೈಸೂರು ಮಹಾರಾಜರು ಮಂಜೂರು ಮಾಡಿದ 7.5 ಎಕರೆ ಜಾಗದಲ್ಲೇ ಈಗ ಕ್ಲಬ್​ ನಡೆಯುತ್ತಿದೆ. ಈ ಭೂಮಿ ಇಲ್ಲವಾದಲ್ಲಿ ಕ್ಲಬ್​ ನ ಅಸ್ಥಿತ್ವವೇ ಇಲ್ಲವಾಗಲಿದೆ.

ಕ್ಲಬ್​ ಗೆ ಮೈಸೂರು ಮಹಾರಾಜರು ನೀಡಿದ್ದ ಜಮೀನಿನ ಹಾಲಿನ ಮೌಲ್ಯ ನೂರಾರು ಕೋಟಿ ರೂಪಾಯಿ.. ಆದ್ರೆ ಸದಸ್ಯರು ಪಾವತಿ ಮಾಡುವ ಸದಸ್ಯತ್ವ ಶುಲ್ಕ ಅತ್ಯಲ್ಪ. ಈ ಎಲ್ಲ ಅಂಶಗಳನ್ನು ಪರಿಗಣಿಸಿದರೆ ಕ್ಲಬ್​ ಗೆ ಸರ್ಕಾರ ಹೆಚ್ಚಿನ ಅನುದಾನ ನೀಡಿದೆ. ಹೀಗಾಗಿ ಸೆಂಚುರಿ ಕ್ಲಬ್ ಮಾಹಿತಿ ಹಕ್ಕು ಕಾಯ್ದೆಯ ವ್ಯಾಪಿಗೆ ಬರಲಿದೆ ಎಂದು ಹೈಕೋರ್ಟ್ ನ್ಯಾಯಪೀಠ ಹೇಳಿದೆ.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments