Wednesday, June 25, 2025
28.6 C
Bengaluru
Google search engine
LIVE
ಮನೆಸುದ್ದಿರೇವ್ ಪಾರ್ಟಿ ಮೇಲೆ ಸಿಸಿಬಿ ರೇಡ್, ಮತ್ತಿನಲ್ಲಿ ತೇಲಾಡಿದ ನಟಿಯರು,ಮಾಡೆಲ್ ಗಳು

ರೇವ್ ಪಾರ್ಟಿ ಮೇಲೆ ಸಿಸಿಬಿ ರೇಡ್, ಮತ್ತಿನಲ್ಲಿ ತೇಲಾಡಿದ ನಟಿಯರು,ಮಾಡೆಲ್ ಗಳು

ಬೆಂಗಳೂರು: ರೇವ್ ಪಾರ್ಟಿಯೊಂದರ ಮೇಲೆ ಬೆಂಗಳೂರಿನ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದು ದಾಳಿಯಲ್ಲಿ ಡ್ರಗ್ಸ್ ಪತ್ತೆಯಾಗಿರುವ ವಿಚಾರ ಬೆಳಕಿಗೆ ಬಂದಿದೆ.

ಬೆಳಗಿನ ಜಾವ 3 ಗಂಟೆಯ ಸುಮಾರಿಗೆ ಈ ಪಾರ್ಟಿ ಮೇಲೆ ರೈಡ್ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.ಎಂಡಿಎಂಎನ್ ಮಾತ್ರೆಗಳು, ಕೊಕೇನ್ ರೀತಿಯ ಡ್ರಗ್ಸ್ ಪತ್ತೆಯಾಗಿದೆ. ಜೊತೆಗೆ, ದಾಳಿಯ ಹಿನ್ನೆಲೆಯಲ್ಲಿ ಪಾರ್ಟಿ ಆಯೋಜಕ ಹಾಗೂ ಮೂವರು ಡ್ರಗ್ ಪೆಡ್ಲರ್ ಸೇರಿ ಐವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆಂದು ಹೇಳಲಾಗಿದೆ.

ಈ ಪಾರ್ಟಿಯನ್ನು ಹುಟ್ಟುಹಬ್ಬದ ಹೆಸರಿನಲ್ಲಿ ನಡೆಸಲಾಗಿತ್ತು. ಸಂಜೆ 5 ಗಂಟೆಯಿಂದ 6 ಗಂಟೆಯವರೆಗೆ ಪಾರ್ಟಿಯನ್ನು ಆಯೋಜಿಸಲಾಗಿತ್ತು. ಆದರೆ, ತಡರಾತ್ರಿಯಾದರೂ ಪಾರ್ಟಿ ಮುಗಿದಿರಲಿಲ್ಲ. ಮುಂಜಾನೆಯವರೆಗೂ ಪಾರ್ಟಿ ಮುಂದುವರಿರುವ ಬಗ್ಗೆ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸ್ ನ ಮಾದಕ ವಸ್ತು ನಿಗ್ರಹ ದಳದ ಪೊಲೀಸರು ಪಾರ್ಟಿಯ ಮೇಲೆ ರೈಡ್ ಮಾಡಿದ್ದಾರೆ ಎಂದು ಹೇಳಲಾಗಿದೆ.

ಪಾರ್ಟಿಯಲ್ಲಿ ಕರ್ನಾಟಕದಲ್ಲಿರುವ ಆಂಧ್ರಪ್ರದೇಶ ಮೂಲದ ವ್ಯಕ್ತಿಗಳು ಹಾಗೂ ಆಂಧ್ರಪ್ರದೇಶದ ನಟ – ನಟಿಯರು, ಮಾಡೆಲ್ ಗಳು ಪಾಲ್ಗೊಂಡಿದ್ದರು ಎಂದು ಹೇಳಲಾಗಿದೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments