ಚಿತ್ರದುರ್ಗ : ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಸಂಸದರ ಕಚೇರಿ ಮುಂಭಾಗದಲ್ಲಿ ಭದ್ರಾ ಮೇಲ್ದಂಡೆ ಯೋಜನೆ ತ್ವರಿತ ಕಾಮಗಾರಿ ಅರಂಭಿಸುವಂತೆ ಒತ್ತಾಯಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.
ಸರ್ಕಾರಗಳು ಸ್ಪಂದಿಸದ ಹಿನ್ನೆಲೆಯಲ್ಲಿ ಸಂಸದರ ಸಭೆಯು ಜಿ.ಪಂ ಯಲ್ಲಿರುವುದರಿಂದ ಸಭೆಗೆ ಅಡ್ಡಿಪಡಿಸಲು ಗೇಟ್ ಗಳಿಗೆ ಟ್ರಾಕ್ಟರ್ ಗಳನ್ನು ಅಡ್ಡ ನಿಲ್ಲಿಸಿ ಪ್ರತಿಭಟನೆಯನ್ನು ನಡೆಸಿದರು. ಇದೇ ಸಮಯದಲ್ಲಿ ಮಾತಾಡಿದ ರೈತ ಮುಖಂಡ ಸಿದ್ದವೀರಪ್ಪ, ಪೊಲೀಸ್ ಅಧಿಕಾರಿಗಳು ರೈತರ ಮೇಲೆ ದೌರ್ಜನ್ಯ ಮಾಡಬಾರದು ಎಂದರು.