Tuesday, March 3, 2026
22.4 C
Bengaluru
Google search engine
LIVE
ಮನೆರಾಜಕೀಯ5 ದಿನಗಳ ಕಾಲ ಕಾವೇರಿ ಅರತಿ; ಪ್ರತಿ ದಿನ ಒಂದೊಂದು ತಾಲೂಕಿನ ಜನರಿಗೆ ಆಹ್ವಾನ- ಚಲುವರಾಯಸ್ವಾಮಿ

5 ದಿನಗಳ ಕಾಲ ಕಾವೇರಿ ಅರತಿ; ಪ್ರತಿ ದಿನ ಒಂದೊಂದು ತಾಲೂಕಿನ ಜನರಿಗೆ ಆಹ್ವಾನ- ಚಲುವರಾಯಸ್ವಾಮಿ

ಬೆಂಗಳೂರು: ನಾಳೆಯಿಂದ KRS ನಲ್ಲಿ ಕಾವೆರಿ ಆರತಿ ಪ್ರಾರಂಭ ಆಗಲಿದ್ದು, ಎಲ್ಲಾ ಸಿದ್ದತೆಗಳ ಮುಗಿದಿವೆ. 5 ದಿನಗಳ ಕಾಲ ಕಾವೇರಿ ಅರತಿ ನಡೆಯಲಿದೆ ಎಂದು ಸಚಿವ ಚಲುವರಾಯಸ್ವಾಮಿ ಹೇಳಿದ್ಧಾರೆ..

ವಿಧಾನಸೌಧದಲ್ಲಿ ಮಾತನಾಡಿದ ಅವರು, ಕಾವೇರಿ ಆರತಿಗೆ ಸದ್ಯ ಶಾಶ್ವತ ವ್ಯವಸ್ಥೆ ಮಾಡಿಲ್ಲ. ಇರುವ ಜಾಗದಲ್ಲಿ ಕಾವೇರಿ ಆರತಿ ನಾಳೆಯಿಂದ ಪ್ರಾರಂಭ ಮಾಡುತ್ತಿದ್ದೇವೆ. ಕಾರ್ಯಕ್ರಮಕ್ಕೆ ನಾಳೆ ಡಿಸಿಎಂ ಚಾಲನೆ ಕೊಡುತ್ತಾರೆ ಎಂದು ಮಾಹಿತಿ ನೀಡಿದರು. ಕಾವೇರಿ ಆರತಿಗೆ ಶಾಶ್ವತವಾಗಿ ಜಾಗ ಗುರುತು ಮಾಡಿಲ್ಲ. ಕೋರ್ಟ್‌ನಲ್ಲಿ ಕೇಸ್ ಇದೆ. ಹೀಗಾಗಿ ಅದು ಮುಗಿದ ಮೇಲೆ ಶಾಶ್ವತ ವ್ಯವಸ್ಥೆ ಮಾಡುತ್ತೇವೆ. ಈಗ ಇರುವ ಉತ್ತಮ ಜಾಗದಲ್ಲಿ ಮಾಡಿದ್ದೇವೆ ಎಂದರು.

ನಿತ್ಯ ಒಂದೊಂದು ತಾಲೂಕು ಜನರಿಗೆ ಬರೋದಕ್ಕೆ ಹೇಳಿದ್ದೇವೆ. ನಾಳೆ 3 ತಾಲೂಕು ಜನರಿಗೆ ಆಹ್ವಾನ ನೀಡಲಾಗಿದೆ. ನಾವು ಹಿಂದುತ್ವ ವಿರೋಧಿಗಳು ಅಲ್ಲ. ಧಾರ್ಮಿಕ ವಿಚಾರಕ್ಕೂ ನಾವು ವಿರೋಧ ಮಾಡಿಲ್ಲ. ಚಪಲಕ್ಕೆ ಕೆಲವರು ಮಾತಾಡ್ತಾರೆ ಮಾತಾಡಲಿ ಎಂದು ಇದೇ ವೇಳೆ ಬಿಜೆಪಿ ವಿರುದ್ಧ ಕಿಡಿಕಾರಿದರು.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments