ರಾಜ್ಯ

ಇಂದು ಸ್ಯಾಂಕಿ ಕೆರೆಯಲ್ಲಿ ಕಾವೇರಿ ಆರತಿ

ಬೆಂಗಳೂರು: ಸದಾಶಿವ ನಗರದಲ್ಲಿರುವ ಸ್ಯಾಂಕಿ ಕೆರೆಯಲ್ಲಿ ಇಂದು ಗಂಗಾರಿತಿ ಮಾದರಿಯಲ್ಲೇ ಕಾವೇರಿ ಆರತಿಯನ್ನು ಆಯೋಜಿಸಲಾಗಿದೆ.

ವಿಶ್ವ ಜಲ ದಿನದ ನಿಮಿತ್ತ ಕಾವೇರಿ ನದಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಇಂದು ಸಂಜೆ  5 ಗಂಟೆಗೆ ಕಾವೇರಿ ಆರತಿಯನ್ನು ಸರ್ಕಾರ ಆಯೋಜಿಸಿದೆ

ಮಧ್ಯಾಹ್ನ 2 ಗಂಟೆಗೆ ಕಾಡು‌ಮಲ್ಲೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಮಾಡಲಾಗುತ್ತಿದೆ. ಗಂಗಾ ದೇವಿಗೆ ಹೋಮ ಹಾಕಿ ಪೂಜೆ ಮಾಡಲಾಗುವುದು. ಸಂಜೆ 4 ಗಂಟೆಗೆ ಕಾಡು ಮಲ್ಲೇಶ್ವರ ದೇವಾಲಯದಿಂದ ಮೆರವಣಿಗೆ ಮೂಲಕ ಸ್ಯಾಂಕಿ ಕೆರೆಗೆ ಆಗಮನವಾಗಲಿದೆ. ಭಾಗಮಂಡಲದಿಂದ ತರಲಾಗುವ ಕಾವೇರಿ ಜಲಕ್ಕೆ ಪೂಜೆ ಮಾಡಲಾಗುತ್ತದೆ. 108 ಕಳಶಗಳೊಂದಿಗೆ ಮೆರವಣಿಗೆ ಸಾಗಲಿದೆ. ಸಂಜೆ 7 ಗಂಟೆಯಿಂದ ಸ್ಯಾಂಕಿ ಕೆರೆಯಲ್ಲಿ ಕಾವೇರಿ ಆರತಿ ಪೂಜೆ ಆರಂಭ ಆಗಲಿದೆ. ತೇಲುವ ವೇದಿಕೆಯಲ್ಲಿ ವಾರಾಣಸಿಯ ಪ್ರಸಿದ್ಧ ತಂಡದಿಂದ ಕಾವೇರಿ ಆರತಿ ಮೂಲಕ ಪ್ರತಿಜ್ಞಾವಿಧಿ ಸ್ವೀಕಾರ ಮಾಡಲಾಗುತ್ತದೆ. ಬಳಿಕ ಉತ್ತರ ಭಾರತದ ಪುರೋಹಿತರಿಂದ ಪೂಜೆ ಮಾಡಲಾಗುವುದು.

ಇನ್ನು ಸಂಜೆ 5.30 ಕ್ಕೆ ರಘು ದೀಕ್ಷಿತ್ ಹಾಗೂ ಅನನ್ಯ ಭಟ್ ಅವರ ಸಂಗೀತ ಕಾರ್ಯಕ್ರಮ ಇರಲಿದೆ. ತೇಲುವ ತೆಪ್ಪದಲ್ಲಿ ಕಾವೇರಿ ಆರತಿ ನಡೆಯಲಿದ್ದು, ದೀಪಾಲಂಕಾರದ ವ್ಯವಸ್ಥೆ ಮಾಡಲಾಗಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.

Comments (0)

Your email address will not be published. Required fields are marked *

Back to top button