ಬೆಂಗಳೂರು: ದಿನದಿಂದ ದಿನಕ್ಕೆ ಜಾತಿಗಣತಿ ಗದ್ದಲ ಹೆಚ್ಚುತ್ತಿರುವ ಬೆನ್ನಲ್ಲೇ ಸಿಎಂ ಸಿದ್ದರಾ ಮಯ್ಯ ಅವರು ಪರಿಶಿಷ್ಟ ಪಂಗಡ ಮುಖಂಡ ರನ್ನು ವಿಶ್ವಾಸಕ್ಕೆ ಪಡೆಯಲು ಮುಂದಾಗಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಸಚಿವರಾದ ಕೆ. -ಎಚ್.ಮುನಿಯಪ್ಪ, ಆರ್.ಬಿ.ತಿಮ್ಮಾಪುರ, ಮಾಜಿ ಸಚಿವ ಎಚ್.ಆಂಜನೇಯ ಸೇರಿದಂತೆ -ಹಲವು ನಾಯಕರೊಂದಿಗೆ ಸಿಎಂ ಸಿದ್ದರಾ ಮಯ್ಯ ಸಭೆ ನಡೆಸಿದ್ದು, ಒಳ ಮೀಸಲು ಜಾರಿ ವಿಷಯದಲ್ಲಿ ಸರಕಾರ ಸೂಕ್ತ ಕ್ರಮವಹಿಸಲಿದೆ. ಆದರೆ ಒಳ ಮೀಸಲು ಕಲ್ಪಿಸಲು ಜಾತಿಗಣತಿ ಅತ್ಯಂತ ಅಗತ್ಯವಾಗಿದೆ. ಆದ್ದರಿಂದ ಜಾತಿಗಣತಿ ವಿಷಯದಲ್ಲಿ ಸರಕಾರಕ್ಕೆ ನಿಮ್ಮ ಬೆಂಬಲ ಅಗತ್ಯ ಎಂದು ಮನವರಿಕೆ ಮಾಡಿದ್ದಾರೆ.
ಒಳ ಮೀಸಲು ಜಾರಿಯಿಂದ ಪರಿಶಿಷ್ಟ ಪಂಗಡದ ವಿವಿಧ ಸಮುದಾಯಗಳಿಗೆ ಅನು ಕೂಲವಾಗಲಿದೆ. ಒಳ ಮೀಸಲು ಕಲ್ಪಿಸುವುದಕ್ಕೆ ರಾಜ್ಯ ಸರಕಾರಗಳಿಗೆ ಅಧಿಕಾರವಿದೆ ಎಂದು ಸುಪ್ರೀಂಕೋರ್ಟ್ ಸಹ ಹೇಳಿದೆ. ಇದರೊಂದಿಗೆ ಹಿಂದುಳಿದ ವರ್ಗಗಳಿಗೆ ಶಾಶ್ವತ ಆಯೋಗದ ವತಿಯಿಂದ ನಡೆಸಲಾಗಿರುವ ಜಾತಿ ಜನಗಣತಿ ವರದಿಯನ್ನು ಅನುಷ್ಠಾನಕ್ಕೆ ತಂದರೆ ಬಳ ಮೀಸಲು ಕಲ್ಪಿಸಲು ವೈಜ್ಞಾನಿಕವಾದ ದತ್ತಾಂಶ -ಗಳು ಲಭ್ಯವಾಗುತ್ತವೆ. ನ್ಯಾಯಾಲ ಯವು ಅದನ್ನು ಪುರಸ್ಕರಿಸುತ್ತದೆ. ಆದ್ದರಿಂದ ಜಾತಿ ಗಣತಿ ವಿಷಯದಲ್ಲಿ ಮುಂದಿನ ದಿನಗಳಲ್ಲಿ ಎದು ರಾಗಬಹುದಾದ ಆಕ್ಷೇಪಗಳಿಗೆ ಸರಕಾರದೊಂದಿಗೆ ನಿಲ್ಲಬೇಕು ಎಂದು ಮನವಿ ಮಾಡಿದ್ದಾರೆ.
ಸ್ಥಳೀಯ ಚುನಾವಣೆ ವೇಳೆಗೆ ಜಾರಿ ಮಾಡಿ
ಸಭೆಯಲ್ಲಿ ಎಡಗೈ ಸಮುದಾಯದ ನಾಯಕರು ಮಾತನಾಡಿ, ಹಲವು ದಶಕಗಳ ಈ ಬೇಡಿಕೆ ಉದ್ದೇಶಪೂರಕವಾಗಿಯೇ ಕಡೆಗಣಿಸಲ್ಪಟ್ಟಿದೆ. ರಾಜಕೀಯವಾಗಿ ಎಲ್ಲ ಪಕ್ಷಗಳೂ ಈ ವಿಚಾರವನ್ನು ಮುಂದಿಟ್ಟುಕೊಂಡು ಸಮುದಾಯ ದಿಕ್ಕು ತಪ್ಪಿಸು ತ್ತಿವೆ. ಕಾಂಗ್ರೆಸ್ ಪಕ್ಷ ವಿಧಾನಸಭಾ ಚುನಾವಣೆಗೂ ಮುನ್ನ ಚಿತ್ರದುರ್ಗದಲ್ಲಿ ಸಮಾವೇಶ ನಡೆಸಿ ಒಳ ಮೀಸಲಾತಿ ಕಲ್ಪಿಸುವ ಭರವಸೆ ನೀಡಿತ್ತು. ಅದರ ಅನುಸಾರ ಸರಕಾರ ಬಂದ ಮೇಲೆ ಕ್ರಮ ತೆಗೆದು ಕೊಂಡಿಲ್ಲ. ಜನರಿಗೆ ಕೊಟ್ಟ ಮಾತಿನ ಪ್ರಕಾರ ಸರಕಾರ ನಡೆದುಕೊಳ್ಳಬೇಕು. ಮುಂದಿನ ದಿನಗಳಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಎದುರಾಗಲಿದೆ. ಆ ವೇಳೆಗೆ ನಾವು ಜನರಿಗೆ ಮುಖ ತೋರಿಸಬೇಕಿದೆ. ಒಳಮೀಸಲಾತಿಯನ್ನು ಜಾರಿಗೊಳಿಸಲೇಬೇಕು ಎಂದು ಮನವಿ ಮಾಡಿದ್ದಾರೆ ಎನ್ನಲಾಗಿದೆ.


