ಹಠಾತ್ ಸೃಷ್ಟಿಯಾದ ರಸ್ತೆಯ ಗುಂಡಿಗೆ ಕಾರು ಮಗುಚಿ ಅಪಘಾತ ಸಂಭವಿಸಿದ ಘಟನೆ ಚೆನ್ನೈನಲ್ಲಿ ನಡೆದಿದೆ.
ಚೆನ್ನೈನ ತಿರುವನ್ಮಿಯೂರಿನಲ್ಲಿರುವ ಟೈಡಲ್ ಪಾರ್ಕ್ ಸಿಗ್ನಲ್ ಬಳಿ ರಸ್ತೆಯಲ್ಲಿ ಹಠಾತ್ ಗುಂಡಿ ಬಿದ್ದಿದೆ. ಇದೇ ಸಂದರ್ಭದಲ್ಲಿ ಅಲ್ಲಿಯೇ ಹಾದು ಹೋಗ್ತಿದ್ದ ಕಾರು ಪಲ್ಟಿಯಾಗಿದೆ.
ಅದೃಷ್ಟವಶಾತ್ ಕಾರಿನಲ್ಲಿದ್ದ ನಾಲ್ವರಿಗೆ ಯಾವುದೇ ಗಾಯಗಳು ಆಗಿಲ್ಲ.. ಅವಘಡ ಆದ ತಕ್ಷಣ ಸ್ಥಳೀಯರು ಕಾರಿನಲ್ಲಿದ್ದವರನ್ನು ರಕ್ಷಿಸಿದ್ದಾರೆ.
ಏತನ್ಮಧ್ಯೆ, ಗುಂಡಿಯಿಂದಾಗಿ ಈ ಪ್ರದೇಶದಲ್ಲಿ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ಕಾರನ್ನು ಮೇಲಕ್ಕೆತ್ತುವ ಕೆಲಸ ನಡೆದಿದೆ