ಬೆಂಗಳೂರು: ಕೊಲೆ ಪ್ರಕರಣದಲ್ಲಿ ಜೈಲು ವಾಸ ಅನುಭವುಸ್ತಿರೋ ನಟ ದರ್ಶನ್ ಶಾಕ್ ಮೇಲೆ ಶಾಕ್ ಎದುರಾಗಿದೆ
ಜೈಲಲ್ಲಿ ಕೂತು ಮನೆಯೂಟ ಮಾಡುವ ದರ್ಶನ್ ಆಸೆಗೆ ಮತ್ತೆ ತಣ್ಣೀರು ಬಿದ್ದಿದೆ. ದರ್ಶನ್ ಮನೆಯೂಟ ನೀಡಲು ಮತ್ತೊಮ್ಮೆ ಅನುಮತಿ ನಿರಾಕರಣೆಯಾಗಿದೆ.
ಮನೆಯೂಟ, ಹಾಸಿಗೆ, ಬಟ್ಟೆ ನೀಡಲು ಸಾಧ್ಯವಿಲ್ಲ. ಆರೋಪಿ ದರ್ಶನ್‌ಗೆ ಸದ್ಯ ಯಾವುದೇ ಆರೋಗ್ಯ ಸಮಸ್ಯೆ ಇಲ್ಲ.ದರ್ಶನ್ ಗೆ ಮನೆಯೂಟ ಕೊಡುವ ಪರಿಸ್ಥಿತಿ ನಿರ್ಮಾಣವಾಗಿಲ್ಲ ಅಂತ ಜೈಲು ಅಧಿಕಾರಿಗಳು ಉತ್ತರಿಸಿದ್ದಾರೆ. ದರ್ಶನ್ ನಿಂದ ಸಲ್ಲಿಸಲಾಗಿದ್ದ ಮತ್ತೊಂದು ಮನವಿಯೂ ತಿರಸ್ಕಾರವಾಗಿದೆ. ಕಾರಾಗೃಹ ಡಿಜಿಪಿ ಮಾಲಿನಿ ಕೃಷ್ಣಮೂರ್ತಿ ಅವರಿಂದ ಮನೆಯೂಟ ನಿರಾಕರಿಸಿ ಆದೇಶ ಹೊರಡಿಸಿದ್ದಾರೆ. ಜೈಲಿನ ವೈದ್ಯಾಧಿಕಾರಿಗಳ ವರದಿ ಆಧರಿಸಿ ಪ್ರಿಸನ್ ಡಿಜಿಪಿಯಿಂದ ಆದೇಶ ಹೊರಡಿಸಲಾಗಿದೆ.
ಅನುಮತಿ ಕೊಡಲು ಸಾಧ್ಯವಿಲ್ಲ. ದರ್ಶನ್ ಗೆ ಮನೆಯೂಟ ನೀಡುವಂತಹ ಅಗತ್ಯತೆ ಇಲ್ಲ ಎಂದು ಹಿಂಬರಹ ನೀಡಿದ್ದಾರೆ. ದರ್ಶನ್ ಅರ್ಜಿ ಕುರಿತು ತೆಗೆದುಕೊಂಡ ನಿರ್ಧಾರವನ್ನ ಜೈಕು ಅಧಿಕಾರಿಗಳು ಹೈಕೋರ್ಟ್ ಗೆ ತಿಳಿಸಲಿದ್ದಾರೆ. ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಜೈಲು ಅಧಿಕಾರಿಗಳು ವರದಿ ಸಲ್ಲಿಸಲಿದ್ದಾರೆ.
ದರ್ಶನ್ ಮನವಿಯನ್ನ ಪರಿಶೀಲಿಸಿ ಪರಿಗಣಿಸುವುದಾಗಿ ಹೈಕೋರ್ಟ್ ಗೆ ಸರ್ಕಾರದ ಪರ ವಕೀಲರು 10 ದಿನಗಳಲ್ಲಿ ದರ್ಶನ್ ಮನವಿ ಕುರಿತು ನಿರ್ಧಾರ ತೆಗೆದುಕೊಳ್ಳಲು ಹೈಕೋರ್ಟ್ ಸೂಚಿಸಿತ್ತು.
ದರ್ಶನ್ ಅರ್ಜಿ ಸಂಬಂಧ ತೆಗೆದುಕೊಂಡ ಆದೇಶ ವರದಿ ಸಲ್ಲಿಸಲಿರುವ ಜೈಲು ಅಧಿಕಾರಿಗಳು ಸದ್ಯದಲ್ಲೇ ಹೈಕೋರ್ಟ್ಗೆ ವರದಿ ಸಲ್ಲಿಸಲಿದ್ದಾರೆ. ಇತ್ತ ಹೈಕೋರ್ಟ್ ನಲ್ಲಿ ದರ್ಶನ್ ಮನೆಊಟದ ಅರ್ಜಿ ಆ.20ಕ್ಕೆ ಮತ್ತೆ ವಿಚಾರಣೆಗೆ ಬರಲಿದೆ.



