ಬೆಂಗಳೂರು: ಲ್ಯಾಂಗ್ಫೋರ್ಡ್ ರಸ್ತೆಯಲ್ಲಿನ ಕಾನ್ಫಿಡೆಂಟ್ ಗ್ರೂಪ್ ಕಚೇರಿಯಲ್ಲಿ ನಡೆದ ಪ್ರಸಿದ್ಧ ಉದ್ಯಮಿ ಡಾ. ಸಿ.ಜೆ. ರಾಯ್ ಅವರ ಆತ್ಮಹತ್ಯೆ ದೇಶಾದ್ಯಾಂತ ಆಘಾತ ಮೂಡಿಸಿದೆ. ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣವನ್ನು ಅನುಮಾನಾಸ್ಪದ ಸಾವು ಎಂದು ದಾಖಲಿಸಲಾಗಿದ್ದು, ಇನ್ನೂ ಸಾವಿನ ನಿಖರ ಕಾರಣ ಸ್ಪಷ್ಟವಾಗಿಲ್ಲ.
ಶುಕ್ರವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ, ಡಾ. ರಾಯ್ ಅವರು ಐಟಿ ಅಧಿಕಾರಿಗಳಿಗೆ ಹೇಳಿಕೆ ನೀಡಲು ಕಚೇರಿಗೆ ಬಂದಿದ್ದರು. ಬಳಿಕ ತಮ್ಮ ಕ್ಯಾಬಿನ್‌ಗೆ ಹೋದ ಅವರು ತಾಯಿಯೊಂದಿಗೆ ಮಾತಾಡಲು ಕೆಲವು ನಿಮಿಷ ಕೇಳಿದ್ದರು. ಕ್ಯಾಬಿನ್‌ಗೆ ಯಾರನ್ನೂ ಒಳಗೆ ಬಿಡಬೇಡಿ ಎಂದು ಸೂಚನೆ ನೀಡಿದ್ದರು. ಹತ್ತು ನಿಮಿಷಗಳ ನಂತರ ಬಾಗಿಲು ತಟ್ಟಿದರೂ ಪ್ರತಿಕ್ರಿಯೆ ಬರಲಿಲ್ಲ. ಬಾಗಿಲು ಒಳಗಿಂದ ಲಾಕ್ ಆಗಿದ್ದರಿಂದ ಅದನ್ನು ಮುರಿದು ಒಳಗಡೆ ಹೋಗಿ ನೋಡಿದಾಗ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿರುವುದು ಕಂಡುಬಂದಿತ್ತು . ಶರ್ಟ್ ಮೇಲೆ ರಕ್ತದ ಕಲೆಯಾಗಿದ್ದು , ದೇಹ ತಣ್ಣಗಾಗಿತ್ತು ತಕ್ಷಣ ಅಂಬ್ಯುಲೆನ್ಸ್ ಮೂಲಕ ಅವರನ್ನು ನಾರಾಯಣ ಆಸ್ಪತ್ರೆಗೆ ಕರೆದೊಯ್ದಾಗ ಮೃತ ಪಟ್ಟಿರುವುದು ಧೃಡವಾಗಿದೆ ಎಂದು ಭದ್ರತಾ ಸಿಬ್ಬಂದಿ ಹೇಳಿಕೆ ನೀಡಿದ್ದಾರೆ.
ಕಾನ್ಫಿಡೆಂಟ್ ಗ್ರೂಪ್ ಮ್ಯಾನೇಜಿಂಗ್ ಡೈರೆಕ್ಟರ್ ಟಿ.ಎ. ಜೋಸೆಫ್ ತನಿಖೆಗೆ ಮನವಿ ಸಲ್ಲಿಸಿದ್ದಾರೆ , ಪೊಲೀಸ್ 174ಸಿ ಅಡಿಯಲ್ಲಿ UDR ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಡಾ. ಸಿ.ಜೆ. ರಾಯ್ ನ ಸಹೋದರ ಸಿ.ಜೆ. ಬಾಬು ಹೇಳಿಕೆ ಪ್ರಕಾರ , ರಾಯ್ ಅವರಿಗೆ ಸಾಲ, ಶತ್ರು ಅಥವಾ ಆರ್ಥಿಕ ತೊಂದರೆ ಇರಲಿಲ್ಲ, ಆದಾಯ ತೆರಿಗೆ ಇಲಾಖೆ ಒತ್ತಡ ಮಾಡುತ್ತಿತ್ತು. ಡಾ. ರಾಯ್ ಬೆಂಗಳೂರು, ಕೇರಳ, ತಮಿಳುನಾಡು ಮತ್ತು ವಿದೇಶಗಳಲ್ಲಿ ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿದ್ದರು. ಕಳೆದ ಎರಡು ತಿಂಗಳಿಂದ ಕೇರಳ ಐಟಿ ಅಧಿಕಾರಿಗಳಿಂದ ತನಿಖೆ, ಮತ್ತು ಕಳೆದ ಮೂರು ದಿನಗಳಿಂದ ಬೆಂಗಳೂರು ಕಚೇರಿ ಮೇಲೆ ದಾಳಿ ನಡೆಯುತ್ತಿತ್ತು.ಸಾವಿನ ಮುನ್ನದಿನ ಬೆಳಿಗ್ಗೆ ರಾಯ್ ಒತ್ತಡ ಹೆಚ್ಚಾಗಿದೆ ಎಂದು ಕುಟುಂಬದ ಸದಸ್ಯರಿಗೆ ತಿಳಿಸಿದ್ದರು ,ಕಂಪನಿ ಲಾಭದಲ್ಲೇ ಇತ್ತು ಎಂದು ಬೇಸರದಲ್ಲಿ ನುಡಿದಿದ್ದಾರೆ.


