Tuesday, June 24, 2025
26.6 C
Bengaluru
Google search engine
LIVE
ಮನೆ#Exclusive Newsಹಬ್ಬಕ್ಕೆ ಊರಿಗೆ ಹೋಗೋರಿಗೆ ಬಸ್ ದರ ಶಾಕ್

ಹಬ್ಬಕ್ಕೆ ಊರಿಗೆ ಹೋಗೋರಿಗೆ ಬಸ್ ದರ ಶಾಕ್

ಬೆಂಗಳೂರು: ಯುಗಾದಿ ಹಬ್ಬಕ್ಕೆಂದು ಊರಿಗೆ ಹೋಗುವವರಿಗೆ ಖಾಸಗಿ ಬಸ್​ನವರು ಟಿಕಟ್​ ದರ ಏರಿಕೆಯ ಶಾಕ್​ ಕೊಟ್ಟಿದ್ದಾರೆ.

ಖಾಸಗಿ ಬಸ್​ ದರ ಅಷ್ಟೇ ಅಲ್ಲದೇ KSRTC ಬಸ್​ಗಳ ಟಿಕೆಟ್​ ದರ ಸಹ ಏರಿಕೆಯಾಗಿದೆ. ಕೆಎಸ್​ಆರ್​ಟಿಸಿ ಬಸ್​ ಟಿಕೆಟ್​ ದರ 200-300ರೂ ದಷ್ಟು ಹೆಚ್ಚಾಗಿದ್ದರೆ, ಇನ್ನು ಖಾಸಗಿ ಬಸ್​ ದರ ದುಪ್ಪಟ್ಟು ಏರಿಕೆಯಾಗಿದೆ.

ಸಾಮಾನ್ಯವಾಗಿ ಹಬ್ಬದ ಸಂದರ್ಭದಲ್ಲಿ ಬಸ್​ ಟಿಕೆಟ್​ ದರ ಏರಿಕೆ ಆಗುವುದು ಸಹಜ. ಆದ್ರೆ, ಈ ಬಾರಿ ಯುಗಾದಿ ಹಬ್ಬದ ಹಿನ್ನಲೇ ಖಾಸಗಿ ಬಸ್​​ನವರು ಭಾರಿ ಟಿಕೆಟ್​ ದರ ಏರಿಕೆ ಮಾಡಿರುವುದು ಪ್ರಯಾಣಿಕರ ಕೆಂಗಣ್ಣಿಗೆ ಗುರಿಯಾಗಿದೆ.

ಬೆಂಗಳೂರಿನಿಂದ ಯಾವ ಊರಿಗೆ ಎಷ್ಟಿದೆ?

ಬೆಂಗಳೂರು – ಮಂಗಳೂರು

  • ಸಾಮಾನ್ಯ ದರ – 650 ರಿಂದ 1300
  • ಹಬ್ಬದ ದರ – 1200-4000

ಬೆಂಗಳೂರು – ಹುಬ್ಬಳ್ಳಿ

  • ಸಾಮಾನ್ಯ ದರ 475 – 110
  • ಹಬ್ಬದ ದರ 1200-4200

ಬೆಂಗಳೂರು-ದಾವಣಗೆರೆ

  • ಸಾಮಾನ್ಯ ದರ – 450-1300
  • ಹಬ್ಬದ ದರ – 750-5500

ಬೆಂಗಳೂರು-ಧಾರವಾಡ

  • ಸಾಮಾನ್ಯ ದರ – 600-1100
  • ಹಬ್ಬದ ದರ – 1069-5500

ಬೆಂಗಳೂರು-ಬೆಳಗಾವಿ

  • ಸಾಮಾನ್ಯ ದರ- 389-1200
  • ಹಬ್ಬದ ದರ-1129-5500

ಬೆಂಗಳೂರು-ಕಲ್ಬುರ್ಗಿ

  • ಸಾಮಾನ್ಯ ದರ-750-1000
  • ಹಬ್ಬದ ದರ-1200-2200

ಬೆಂಗಳೂರು-ರಾಯಚೂರು

  • ಸಾಮಾನ್ಯ ದರ-650-990
  • ಹಬ್ಬದ ದರ-1100-2990

ಬೆಂಗಳೂರು-ಹಾಸನ

  • ಸಾಮಾನ್ಯ ದರ-463-1000
  • ಹಬ್ಬದ ದರ-750-1600

ಬೆಂಗಳೂರು-ಯಾದಗಿರಿ

  • ಸಾಮಾನ್ಯ ದರ-699-900
  • ಹಬ್ಬದ ದರ=1300-2200

ಬೆಂಗಳೂರು-ಶಿವಮೊಗ್ಗ

  • ಸಾಮಾನ್ಯ ದರ-500-990
  • ಹಬ್ಬದ ದರ =1199-1800

ಇನ್ನು ಬಸ್​ ದರ ಏರಿಕೆ ಕುರಿತು ಪ್ರತಿಕ್ರಿಯೆ ನೀಡಿರುವ ಖಾಸಗಿ ಬಸ್​ ಮಾಲೀಕರ ಸಂಘದ ಅಧ್ಯಕ್ಷ ನಟರಾಜ್ ಶರ್ಮ, ನಾವು ಬಸ್​ ದರ ದುಪ್ಪಟ್ಟು ಏರಿಕೆ ಮಾಡಿಲ್ಲ, ಶೇ. 50 ರಿಂದ 60ರಷ್ಟು ಮಾತ್ರ ಹೆಚ್ಚಳ ಮಾಡಿದ್ದೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.

 

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments