ಬೆಂಗಳೂರು: 15 ವರ್ಷದ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಬಸ್ ಡ್ರೈವರ್ ಬಾಲಕಿಯ ಕುಟುಂಬಸ್ಥರು ಥಳಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಹೈದರಾಬಾದ್ನಿಂದ ಬೆಂಗಳೂರಿಗೆ ಖಾಸಗಿ ಬಸ್ ನಲ್ಲಿ ಬರುತ್ತಿದ್ದು, ಮೊಬೈಲ್ ಚಾರ್ಜ್ ಮಾಡಲು ಡ್ರೈವರ್ಗೆ ಫೋನ್ ನೀಡಿದ್ದಳು. ಸ್ವಲ್ಪ ಸಮಯದ ಬಳಿಕ ಮೊಬೈಲ್ ವಾಪಸ್ ಕೇಳಿದಾಗ ಸ್ಪೇರ್ ಡ್ರೈವರ್ ಅಸಭ್ಯವಾಗಿ ವರ್ತಿಸಿದ್ದಾನೆ. ಡ್ರೈವರ್ ಆರೀಫ್.. ನೀನು ನನಗೆ ಕಿಸ್ ಕೊಟ್ಟರೆ ಮೊಬೈಲ್ ಕೊಡ್ತೀನಿ ಎಂದಿದ್ದಾನೆ. ಅಲ್ಲದೇ ಯುವತಿ ಮಲಗಿದ್ದ ಸೀಟ್ಗೆ ಬಂದು ಕಿರುಕುಳ ನೀಡಿದ್ದಾನೆ. ಇದರಿಂದ ಗಾಬರಿಯಾದ ಅಪ್ರಾಪ್ತೆ, ಪೋಷಕರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾಳೆ.
ಬಾಲಕಿಯ ದೂರಿನ ಮೇರೆಗೆ, ಆಕೆಯ ಸಹೋದರ ಮತ್ತು ತಾಯಿ ಚಾಣಕ್ಯ ಸರ್ಕಲ್‌ನಲ್ಲಿ ಬಸ್ ತಲುಪುವ ಸಂದರ್ಭಕ್ಕೆ ಸ್ಥಳಕ್ಕೆ ಧಾವಿಸಿದ್ದಾರೆ. ಕೋಪಗೊಂಡ ಕುಟುಂಬಸ್ಥರು ಚಾಲಕನ ಬಟ್ಟೆ ಬಿಚ್ಚಿ, ಸಾರ್ವಜನಿಕವಾಗಿ ಥಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರಿಫ್‌ನನ್ನು ವಶಕ್ಕೆ ಪಡೆದು, ಘಟನೆಯ ಕುರಿತು ತನಿಖೆ ಆರಂಭಿಸಿದ್ದಾರೆ.