Top Newsರಾಜ್ಯಸುದ್ದಿ

ಬಸ್​ಗೆ ದಿಢೀರ್ ಬೆಂಕಿ; ಪ್ರಯಾಣಿಕರು ಪಾರು

ಬೀದರ್: ಕಲ್ಯಾಣ ಕರ್ನಾಟಕ ಸಾರಿಗೆ ಬಸ್ವೊಂದು ಮಾರ್ಗದ ಮಧ್ಯದಲ್ಲೇ ದಿಢೀರ್ ಬೆಂಕಿ ಹೊತ್ತಿ ಉರಿದ ಘಟನೆ ಜಿಲ್ಲೆಯ ಕಪ್ಪಿಕೆರೆ ಗ್ರಾಮದ ಕ್ರಾಸ್ ಬಳಿ ಬುಧವಾರ ಬೆಳಗ್ಗೆ ಸಂಭವಿಸಿದೆ.

ಬೆಳಗ್ಗೆ 11:15 ಗಂಟೆ ಸುಮಾರಿಗೆ ಬೀದರ್​ನಿಂದ ಔರಾದ್ ಕಡೆಗೆ ಬಸ್ ಹೊರಟಿತ್ತು. ಸುಮಾರು 25 ಮಂದಿ ಪ್ರಯಾಣಿಕರು ಇದ್ದರು. ಆದರೆ, ಔರಾದ್ ತಾಲೂಕಿನ ಕಪ್ಪಿಕೆರೆ ಗ್ರಾಮದ ಕ್ರಾಸ್ ಬಳಿ ಬರುತ್ತಿದ್ದಂತೆ ಏಕಾಏಕಿ ಬಸ್ನ ಎಂಜಿನ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಚಾಲಕ ಹಾಗೂ ನಿರ್ವಾಹಕರು ಬಸ್ ನಿಲ್ಲಿಸಿ, ಎಲ್ಲಾ ಪ್ರಯಾಣಿಕರನ್ನೂ ವಾಹನದಿಂದ ಕೆಳಗಿಳಿಸಿದ್ದಾರೆ. ಬಳಿಕ ಸಂಪೂರ್ಣ ಬಸ್ ಬೆಂಕಿಗೆ ಆಹುತಿಯಾಗಿದೆ.

ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಂತಪೂರ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ಕೈಗೊಂಡಿದ್ದಾರೆ. ಬಸ್ನಲ್ಲಿ ಇದ್ದವರಿಗೆ ಯಾವುದೇ ತೊಂದರೆ ಆಗಿಲ್ಲ.

Comments (0)

Your email address will not be published. Required fields are marked *

Back to top button