Top Newsಉದ್ಯೋಗದೇಶ/ವಿದೇಶವಾಣಿಜ್ಯಸುದ್ದಿಹಣಕಾಸು

ಬಜೆಟ್ 2026-27 ಸೆಮಿಕಂಡಕ್ಟರ್ ಮತ್ತು ಎಲೆಕ್ಟ್ರಾನಿಕ್ಸ್ ಕ್ಷೇತ್ರಕ್ಕೆ ಭರ್ಜರಿ ಕೊಡುಗೆ; ರೇರ್ ಅರ್ಥ್ ಕಾರಿಡಾರ್ ಘೋಷಣೆ!

ಭಾರತವನ್ನು ಜಾಗತಿಕ ಎಲೆಕ್ಟ್ರಾನಿಕ್ಸ್ ಹಬ್ ಮಾಡುವ ನಿಟ್ಟಿನಲ್ಲಿ ಸರ್ಕಾರ ದೊಡ್ಡ ಹೆಜ್ಜೆ ಇಟ್ಟಿದೆ. ಎಲೆಕ್ಟ್ರಾನಿಕ್ ಬಿಡಿಭಾಗಗಳ ತಯಾರಿಕಾ ಯೋಜನೆಗೆ ನೀಡಲಾಗುವ ಅನುದಾನವನ್ನು 40,000 ಕೋಟಿ ರೂಪಾಯಿಗಳಿಗೆ ಏರಿಸಲಾಗಿದೆ.

ಇದು ದೇಶೀಯವಾಗಿ ಬಿಡಿಭಾಗಗಳ ಉತ್ಪಾದನೆಯನ್ನು ಹೆಚ್ಚಿಸಿ, ಆಮದಿನ ಮೇಲಿನ ಅವಲಂಬನೆಯನ್ನು ತಗ್ಗಿಸಲು ಸಹಕಾರಿಯಾಗಲಿದೆ.ಮೊದಲ ಸೆಮಿಕಂಡಕ್ಟರ್ ಮಿಷನ್‌ನ ಯಶಸ್ಸಿನ ನಂತರ, ಸರ್ಕಾರವು ಸೆಮಿಕಂಡಕ್ಟರ್ ಮಿಷನ್ 2.0 ಅನ್ನು ಅಧಿಕೃತವಾಗಿ ಘೋಷಿಸಿದೆ.

ಕೇವಲ ಚಿಪ್ ತಯಾರಿಕೆಯಲ್ಲದೆ, ಉಪಕರಣಗಳು, ಕಚ್ಚಾ ವಸ್ತುಗಳ ಪೂರೈಕೆ ಮತ್ತು ‘ಫುಲ್ ಸ್ಟ್ಯಾಕ್ ಇಂಡಿಯನ್ ಐಪಿ’ ಅಭಿವೃದ್ಧಿಗೆ ಒತ್ತು ನೀಡಲಾಗುತ್ತದೆ. ಜಾಗತಿಕ ಮಟ್ಟದಲ್ಲಿ ಸೆಮಿಕಂಡಕ್ಟರ್ ಸಪ್ಲೈ ಚೈನ್‌ನಲ್ಲಿ ಭಾರತವು ಬಲವಾದ ಸ್ಥಾನ ಪಡೆಯುವಂತೆ ಮಾಡುವುದು ಈ ಮಿಷನ್‌ನ ಪ್ರಮುಖ ಉದ್ದೇಶವಾಗಿದೆ.

ಸೆಮಿಕಂಡಕ್ಟರ್ ಮತ್ತು ಹೈ-ಟೆಕ್ ಉದ್ಯಮಗಳಿಗೆ ಅತ್ಯಗತ್ಯವಾಗಿರುವ ‘ವಿರಳ ಭೂಖನಿಜಗಳ’ ಪೂರೈಕೆಗಾಗಿ ಸರ್ಕಾರ ಹೊಸ ಯೋಜನೆಯನ್ನು ರೂಪಿಸಿದೆ.ಒಡಿಶಾ, ಕೇರಳ ಮತ್ತು ಆಂಧ್ರಪ್ರದೇಶದಂತಹ ಖನಿಜ ಸಮೃದ್ಧ ರಾಜ್ಯಗಳನ್ನು ಒಳಗೊಂಡಂತೆ ಈ ಕಾರಿಡಾರ್ ನಿರ್ಮಿಸಲಾಗುತ್ತದೆ.

ಪ್ರಸ್ತುತ ಈ ಖನಿಜಗಳಿಗಾಗಿ ಭಾರತವು ವಿದೇಶಗಳ ಮೇಲೆ ಅವಲಂಬಿತವಾಗಿದೆ. ಸ್ವದೇಶಿ ಮೈನಿಂಗ್ ಮತ್ತು ಸಂಶೋಧನೆಗೆ ಉತ್ತೇಜನ ನೀಡುವ ಮೂಲಕ ಈ ಅವಲಂಬನೆಯನ್ನು ಕಡಿಮೆ ಮಾಡುವುದು ಸರ್ಕಾರದ ಗುರಿಯಾಗಿದೆ.ಈ ಬಜೆಟ್ ನಿರ್ಧಾರಗಳು ಭಾರತದ ತಾಂತ್ರಿಕ ಸ್ವಾವಲಂಬನೆಗೆ ಭದ್ರ ಬುನಾದಿ ಹಾಕಲಿವೆ

Comments (0)

Your email address will not be published. Required fields are marked *

Back to top button