ಮನರಂಜನೆಸಿನಿಮಾ

ಬ್ರೋ ಗೌಡ ಕಮ್‌ಬ್ಯಾಕ್;ಹೊಸ ಧಾರಾವಾಹಿ ಶೂಟಿಂಗ್ ಆರಂಭ

ಬಿಗ್‌ಬಾಸ್ ಖ್ಯಾತಿಯ ಶಮಂತ್, ಅಲಿಯಾಸ್ ‘ಬ್ರೋ ಗೌಡ’ ಮತ್ತೆ ಕಿರುತೆರೆಗೆ ಮರಳುತ್ತಿದ್ದಾರೆ! ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿಯ ಮೂಲಕ ಕನ್ನಡಿಗರ ಮನೆಮಾತಾಗಿದ್ದ ಇವರು, ಈಗ ಮತ್ತೆ ಕಲರ್ಸ್ ಕನ್ನಡ ವಾಹಿನಿಯ ಹೊಸ ಪ್ರಾಜೆಕ್ಟ್ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ.

ಲಕ್ಷ್ಮೀ ಬಾರಮ್ಮ ಮುಕ್ತಾಯವಾದ ಬಳಿಕ ತೆಲುಗು ಕಿರುತೆರೆಗೆ ಜಿಗಿದಿದ್ದ ಶಮಂತ್, ಅಲ್ಲಿಯೂ ಯಶಸ್ಸು ಕಂಡಿದ್ದರು. ನಂತರ ಒಂದು ಸಿನಿಮಾದಲ್ಲೂ ಬ್ಯುಸಿಯಾಗಿದ್ದ ಇವರು, ಈಗ ಕನ್ನಡ ಅಭಿಮಾನಿಗಳಿಗಾಗಿ ಮತ್ತೆ ಸೀರಿಯಲ್ ಲೋಕಕ್ಕೆ ಕಾಲಿಡುತ್ತಿದ್ದಾರೆ. ಸದ್ಯದ ಮಾಹಿತಿ ಪ್ರಕಾರ, ಶಮಂತ್ ಈ ಹೊಸ ಧಾರಾವಾಹಿಯ ಚಿತ್ರೀಕರಣದಲ್ಲಿ ಬಿಜಿಯಾಗಿದ್ದು, ಇದು ಕಲರ್ಸ್ ಕುಟುಂಬದಲ್ಲೇ ಪ್ರಸಾರವಾಗುವುದು ಖಚಿತವಾಗಿದೆ.

ಈ ಹೊಸ ಧಾರಾವಾಹಿಯ ಶೀರ್ಷಿಕೆ, ನಾಯಕಿ ಯಾರು ಮತ್ತು ಪ್ರಸಾರದ ಸಮಯದ ಬಗ್ಗೆ ಇನ್ನು ಅಧಿಕೃತ ಮಾಹಿತಿ ಹೊರಬೀಳಬೇಕಿದೆ. ಆದರೂ, ಶಮಂತ್ ಅವರ ಕಮ್‌ಬ್ಯಾಕ್ ಸುದ್ದಿಯು ಅವರ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದ್ದು, ‘ಬ್ರೋ ಗೌಡ’ನ ಹೊಸ ಅವತಾರವನ್ನು ನೋಡಲು ಕಿರುತೆರೆ ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ.

Comments (0)

Your email address will not be published. Required fields are marked *

Back to top button