ಕಾಗಿನೆಲೆ ಶ್ರೀಗಳು ( #Kaginele Seer )ನಡೆಸಿದ ರಾಜೀ ಸಂಧಾನ ಫಲಕೊಟ್ಟಿದೆ. ಪರಿಣಾಮ ದಾವಣಗೆರೆ ಕಾಂಗ್ರೆಸ್ನಲ್ಲಿ ಬಂಡಾಯ ಶಮನವಾಗಿದೆ. ದಾವಣಗೆರೆ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ತೀರ್ಮಾನಿಸಿದ್ದ ಇನ್ಸೈಟ್ ಸಂಸ್ಥಾಪಕ ವಿನಯ್ ಕುಮಾರ್ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಕಾಂಗ್ರೆಸ್ ಪಕ್ಷದ ವಿರುದ್ಧ ಹೋಗದಿರಲು ತೀರ್ಮಾನಿಸಿದ್ದಾರೆ.
ಕಾಂಗ್ರೆಸ್ ಪ್ರಭಾ ಮಲ್ಲಿಕಾರ್ಜುನ್ಗೆ ಟಿಕೆಟ್ ನೀಡದ ಕಾರಣ ವಿನಯ್ಕುಮಾರ್ ಮುನಿಸಿಕೊಂಡಿದ್ದರು. ಬಂಡಾಯ ಸ್ಪರ್ಧೆ ಮಾಡಲು ಹಳ್ಳಿ ಹಳ್ಳಿ ಸುತ್ತಿ ಜನಾಭಿಪ್ರಾಯ ಸಂಗ್ರಹಿಸಿದ್ದರು. ಕಾಂಗ್ರೆಸ್ ನಾಯಕರು ನಡೆಸಿದ ಓಲೈಕೆ ಪ್ರಯತ್ನ ಫಲಿಸಿರಲಿಲ್ಲ. ಹೀಗಾಗಿ ಕಡೆ ಕ್ಷಣದಲ್ಲಿ ಕುರುಬ ಸಮುದಾಯದ ಕಾಗಿನೆಲೆ ಮಠದ ಶ್ರೀಗಳು ಮಧ್ಯಪ್ರವೇಶ ಮಾಡಿದ್ದರು. ಬಂಡಾಯ ಸ್ಪರ್ಧೆ ಮಾಡದಂತೆ ವಿನಯ್ಕುಮಾರ್ ಮನವೊಲಿಸುವಲ್ಲಿ ಕಾಗಿನೆಲೆ ಶ್ರೀಗಳು ಸಫಲರಾಗಿದ್ದಾರೆ. ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿ ಮಾಡಿಸಿದ್ದಾರೆ. ಪ್ರಭಾ ಮಲ್ಲಿಕಾರ್ಜುನ್ ಪರವಾಗಿ ಪ್ರಚಾರ ಮಾಡಲು ವಿನಯ್ ಕುಮಾರ್ ಒಪ್ಪಿಗೆ ಸೂಚಿಸಿದ್ದಾರೆ.
ದಾವಣಗೆರೆ ಯುವ ಸಮೂಹದಲ್ಲಿ ವಿನಯ್ ಕುಮಾರ್ ಚುಂಬಕ ಶಕ್ತಿಯಾಗಿ ಬೆಳೆದಿದ್ದಾರೆ. ಯುವ ಸಮೂಹದಲ್ಲಿ ತಮ್ಮದೇ ಆದ ಪ್ರಭಾವ ಹೊಂದಿದ್ದಾರೆ. ಈ ವಿಚಾರವೀಗ ಸಚಿವ ಎಸ್ಎಸ್ ಮಲ್ಲಿಕಾರ್ಜುನ್ ಅವರಿಗೂ ಅರ್ಥವಾಗಿದೆ. ಹೀಗಾಗಿ ಸಚಿವ ಎಸ್ಎಸ್ ಮಲ್ಲಿಕಾರ್ಜುನ್ ಸಹ ವಿನಯ್ ಕುಮಾರ್ ವಿಚಾರದಲ್ಲಿ ಮೃದುವಾಗಿದ್ದಾರೆ.
ಕಾಗಿನೆಲೆ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀ ಶ್ರೀ ನಿರಂಜನಾನಂದಪುರಿ ಸ್ವಾಮಿಗಳು, ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್, ಯುವ ಉತ್ಸಾಹಿ ನಾಯಕ @vinaygb, ಹರಿಹರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಅವರು ನನ್ನನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದರು. pic.twitter.com/TMB9Bvhvh9
— Siddaramaiah (@siddaramaiah) April 7, 2024