#Exclusive NewsTop News
ರಸ್ತೆಯಲ್ಲಿ ಸಿಕ್ಕ 1ಲಕ್ಷ ಮೌಲ್ಯದ ಬ್ರೇಸ್ ಲೈಟ್,ಮಾನವಿಯತೆ ಮರೆದ ಯುವಕ


ರಸ್ತೆಯಲ್ಲಿ ಸಿಕ್ಕಿದ್ದ ಒಂದು ಲಕ್ಷ ಮೌಲ್ಯದ ಬ್ರೇಸ್ ಲೈಟ್ ನ್ನು ಹಿಂದಿರುಗಿಸುವ ಮೂಲಕ ರೂಪೇಶ್ ಹಾಗೂ ರಾಜೇಶ್ ಎಂಬುವವರು ಮಾನವೀಯತೆ ಮೆರೆದಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಪಟ್ಟಣದ ಪ್ರಕಾಶ್ ಎಂಬುವರು ತಮ್ಮ ಬ್ರೇಸ್ ಲೈಟ್ ಕಳೆದುಕೊಂಡಿದ್ದರು. ಈ ಬಗ್ಗೆ ಪೊಲೀಸ್ ಠಾಣೆಗೆ ಮಾಹಿತಿಯನ್ನು ನೀಡಿದ್ದರು. ರಸ್ತೆಯಲ್ಲಿ ತೆರಳುತ್ತಿದ್ದ ರೂಪೇಶ್ ಹಾಗೂ ರಾಜೇಶ್ ರವರಿಗೆ ಸಿಕ್ಕಿದ್ದ ಆಭರಣವನ್ನು ಪೊಲೀಸರ ಮುಖಾಂತರ ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ .ಮಾನವೀಯತೆ ಮೆರೆದ ಯುವಕರಿಗೆ ಕೊಪ್ಪ ಪಿ.ಎಸ್.ಐ. ಸನ್ಮಾನಿಸಿ ಅಭಿನಂದಿಸಿದ್ದಾರೆ




