BPL Card: ಪರಿತರ ಚಿಟಿ (APL and BPL Ration Card) ರಾಜ್ಯ ಹಾಗೂ ಕೇಂದ್ರ ಸರ್ಕಾರದ ಕೆಲವೊಂದು ಸೌಲಭ್ಯಗಳನ್ನು ಪಡೆದುಕೊಳ್ಳಬೇಕೆಂದರೆ ಬಹುಮುಖ್ಯ ದಾಖಲೆಯಾಗಿದೆ. ಅದರಲ್ಲೂ ಬಡಕುಟುಂಬದವರಿಗೆ ಹೊರೆಯಾಗಬಾರದೆಂಬ ಉದ್ದೇಶದಿಂದ ಈ ಪಡಿತರ ಚೀಟಿಯನ್ನು ಮಾಡಲಾಗಿದೆ. ಆದರೆ ಕೆಲವರು ಈ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳದೆ, ಉದಾಸೀನ ತೋರುತ್ತಿದ್ದಾರೆ ಎನ್ನುವ ಅರೋಪಗಳು ಕೇಳಿಬರುತ್ತಿರುವ ಹಿನ್ನೆಲೆ ಆಹಾರ ಇಲಾಖೆ ಒಂದು ದೃಢ ನಿರ್ಧಾರಕ್ಕೆ ಬಂದಿದೆ ಎನ್ನುವ ಮಾಹಿತಿಯೊಂದು ಲಭ್ಯವಾಗಿದೆ.
ಮೂರು ತಿಂಗಳಿನಿಂದ ಪಡಿತರ ಪಡೆಯದವರ ರೇಷನ್ ಕಾರ್ಡ್ ಅನ್ನು ರದ್ದು ಮಾಡಲು ಆಹಾರ ಇಲಾಖೆ ಮುಂದಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಸರ್ಕಾರದ ಇತರ ಯೋಜನೆಗಳ ಪ್ರಯೋಜನೆಗಳನ್ನು ಪಡೆದುಕೊಳ್ಳಲು ಮಾತ್ರ ಬಿಪಿಎಲ್ ಕಾರ್ಡ್ ಬಳಸಿಕೊಳ್ಳುತ್ತಿರುವ ಆರೋಪ ಸರ್ಕಾರದವರೆಗೂ ಬಂದಿದ್ದು, ಆದ್ದರಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಲು ಮುಂದಾಗಿದೆ ಎನ್ನಲಾಗಿದೆ.
ಇಕೆವೈಸಿ ಕಡ್ಡಾಯ: ಈಗಾಗಲೇ ಜಾರಿಗೆ ತಂದಿರುವ ಸರ್ಕಾರದ ಎಲ್ಲಾ ಯೋಜನೆಗಳಿಗೆ ಪಡಿತರ ಚೀಟಿ ಪ್ರಮುಖವಾಗಿದೆ. ಅಲ್ಲದೆ, ಸರ್ಕಾರ ರೇಷನ್ ಕಾರ್ಡ್‌ಗೆ ಇಕೆವೈಸಿ ಮಾಡಿಸುವುದು ಕಡ್ಡಾಯಗೊಳಿಸಿದೆ. ಅಸಲಿ ರೇಷನ್ ಕಾರ್ಡ್ ಯಾವುದು, ನಕಲಿ ರೇಷನ್ ಕಾರ್ಡ್ ಯಾವುದು ಎಂಬುದನ್ನು ತಿಳಿಯಲು ಸರ್ಕಾರ ಇಕೆವೈಸಿ ಕಡ್ಡಾಯಗೊಳಿಸಿದೆ.