Wednesday, January 28, 2026
18.8 C
Bengaluru
Google search engine
LIVE
ಮನೆರಾಜ್ಯಗದಗ ಡಿಸಿ ಕಚೇರಿ ಮತ್ತು ಮಂಗಳೂರು ಆರ್​ಟಿಓ ಕಚೇರಿಗೆ ಬಾಂಬ್​ ಬೆದರಿಕೆ

ಗದಗ ಡಿಸಿ ಕಚೇರಿ ಮತ್ತು ಮಂಗಳೂರು ಆರ್​ಟಿಓ ಕಚೇರಿಗೆ ಬಾಂಬ್​ ಬೆದರಿಕೆ

ಗದಗ ಜಿಲ್ಲಾಡಳಿತ ಭವನವನ್ನು ಬಾಂಬ್​​​​ನಿಂದ ಸ್ಪೋಟಿಸುವುದಾಗಿ ಬೆದರಿಕೆ ಇ-ಮೇಲ್​ ಸಂದೇಶ ಬಂದಿದ್ದು, ಕೆಲಕಾಲ ಆತಂಕದ ವಾತಾವರಣ ನಿರ್ಮಾಣ ವಾಗಿತ್ತು. ಜಿಲ್ಲಾಧಿಕಾರಿಯ ಇ-ಮೇಲ್​​​​ ಸಂದೇಶದಲ್ಲಿ ಅರ್ನಾ ಅಶ್ವಿನ್​​​​ ಶೇಖರ್​​​ ಎಂಬ ಹೆಸರಿನ ಇ-ಮೇಲ್​​ ಬಂದಿದ್ದು, ಗದಗ ಡಿಸಿ ಆಫೀಸ್​​​​ನ ಪ್ರಮುಖ 5 ಸ್ಥಳಗಳಲ್ಲಿ ಬಾಂಬ್​​​ ಇಟ್ಟಿರುವುದಾಗಿ ಮಾಹಿತಿ ಇತ್ತು..

ಇನ್ನುವಿಷಯ ತಿಳಿದು ಸ್ಥಳಕ್ಕೆ ಶ್ವಾನದಳ, ಬಾಂಬ್​​​ ಸ್ಕ್ಯಾಡ್​ ಹಾಗೂ ಪೊಲೀಸರು ಭೇಟಿ ನೀಡಿ ಗದಗ ಜಿಲ್ಲಾಡಳಿತ ಭವನದಲ್ಲಿ ಶೋಧ ಕಾರ್ಯ ನಡೆಸಿದ್ರು. ಡಿಸಿ ಚೇಬಂರ್​​ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಸುಮಾರು ಎರಡು ಗಂಟೆಗಳ ಕಾಲ ತಪಾಸಣೆ ನಡೆಸಿದರು. ಯಾವುದೇ ಸ್ಪೋಟಕ ವಸ್ತುಗಳ ಪತ್ತೆಯಾಗದ ಹಿನ್ನೆಲೆ ಹುಸಿ ಬಾಂಬ್​​​ ಬೆದರಿಕೆಯ ಸಂದೇಶ ಎಂದು ಅನುಮಾನ ವ್ಯಕ್ತವಾಗಿದೆ.. ತಮಿಳುನಾಡು ಚುನಾವಣೆ ಸಮಯದಲ್ಲಿ ಗಮನ ಬೇರೆಡೆ ಸೆಳೆಯುವ ಹಿನ್ನೆಲೆ ಇಂತಹ ಕಾರ್ಯಕ್ಕೆ ಬೆದರಿಕೆದಾರರು ಯತ್ನಿಸಿರಬಹುದು ಎನ್ನಲಾಗುತ್ತಿದೆ..

ತಮಿಳುನಾಡಿನ ಎಲ್‌ಟಿಟಿಇ ಕಾರ್ಯಕರ್ತರೊಂದಿಗೆ ಸೇರಿ ಪಾಕಿಸ್ತಾನ ಐಎಸ್‌ಐ ಸಂಸ್ಥೆ ಸ್ಫೋಟಿಸಲು ಸಂಚು ಎಂದು ಸಹ ಇ-ಮೇಲ್‌ನಲ್ಲಿ ಉಲ್ಲೇಖಿಸಲಾಗಿದೆ. ಬಾಂಬ್ ಬೆದರಿಕೆ ಕಾರ್ಯಾಚರಣೆಯಲ್ಲಿ ಡಿವೈಎಸ್ಪಿ ಮುರ್ತುಜಾ ಖಾದ್ರಿ, ಸಿಪಿಐಗಳಾದ ಎಲ್ ಕೆ ಜೂಲಕಟ್ಟಿ, ಸಿದ್ದರಾಮೇಶ ಗಡಾದ್ ಸೇರಿದಂತೆ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.

ಇನ್ನು ಮಂಗಳೂರಿನ ಆರ್‌ಟಿಓ ಕಚೇರಿಗೂ ಬಾಂಬ್ ಬೆದರಿಕೆ ಬಂದಿದ್ದು, ಕಚೇರಿಯ ಅಧಿಕೃತ ಮೇಲ್‌ಗೆ ಬಾಂಬ್ ಬೆದರಿಕೆ ಸಂದೇಶವನ್ನು ರವಾನಿಸಲಾಗಿದೆ. ಮಂಗಳೂರಿನ ನೆಹರೂ ಮೈದಾನ ಬಳಿಯಿರುವ ಆರ್‌ಟಿಓ ಕಚೇರಿಯ 5 ಕಡೆ ಬಾಂಬ್ ಸ್ಫೋಟಿಸುವುದಾಗಿ ಕಿಡಿಕೇಡಿಗಳು ಸಂದೇಶ ರವಾನಿಸಿದ್ದಾರೆ. ಸದ್ಯ ಆರ್‌ಟಿಒ ಕಚೇರಿಯಲ್ಲಿ ಮಂಗಳೂರು ಪೊಲೀಸರು, ಬಾಂಬ್ ನಿಷ್ಕ್ರಿಯ ದಳದಿಂದ ಇಡೀ ಕಟ್ಟಡವನ್ನು ತಪಾಸಣೆ ಮಾಡಲಾಗಿದೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments