ಬೆಂಗಳೂರು:ಅಗಸ್ಟ್ 2 ರಂದು ರಾತ್ರಿ 8.30ರ ಸಮಯದಲ್ಲಿ ವಿಕಲಚೇತನನೋರ್ವ ಕೈತೋರಿಸಿದರೂ ಬಸ್ ನಿಲ್ಲಿಸದೆ ಚಲಾಯಿಸಿಕೊಂಡು ಹೋದ ಘಟನೆ ವೈಯಾಲಿಕಾವಲ್​ ಬಸ್​ ನಿಲ್ದಾಣದ ಬಳಿ ನಡೆದಿದೆ.
ಅಂದು ರಾತ್ರಿ ವಿಕಲಚೇತನ ಅಂಧ ಪ್ರಯಾಣಿಕ ಕಾವಲ್​ ಭೈರಸಂದ್ರದಿಂದ ಮಾಗಡಿ ರಸ್ತೆಗೆ ತೆರಳಬೇಕಾಗಿತ್ತು. ಈ ಭಾಗಕ್ಕೆ ಹೊರಟಿದ್ದ 176B ಬಿಎಮ್​ಟಿಸಿ ಬಸ್​ಗೆ ಪ್ರಯಾಣಿಕ ಕೈ ತೋರಿಸಿದರೂ ಕೂಡ ಅದು ನಿಂತಿಲ್ಲ. ನಗರ ಸಾರಿಗೆ ಸಂಪರ್ಕದಲ್ಲಿ ಉತ್ತಮ ಸೇವೆ ಗಳಿಸಿದ್ದರೂ ಕೂಡ ಇಂತಹ ಘಟನೆಗಳಿಂದ ಈ ಸಂಸ್ಥೆಗಳಿಗೆ ಕೆಟ್ಟ ಹೆಸರು ಬರುತ್ತಿದೆ. ಹಲವೆಡೆ ಬಸ್​ ನಿಲ್ಲಿಸದೆ ಹೋಗುತ್ತಾರೆ. ಅಜಾಗರೂಕತೆಯಿಂದ ಚಾಲನೆ ಮಾಡುತ್ತಾರೆ ಎಂಬುದು ಇಂಥಾ ಪ್ರಕರಣಗಳಿಂದ ತಿಳಿದುಬರುತ್ತದೆ. ಪಾಸ್​-ಕಾಸ್​ ಕೊಟ್ಟು ಪ್ರಯಾಣಿಸುವವರ ಕಥೆ ಇದಾದರೆ ಆಧಾರ್​ ತೋರಿಸಿ ಪ್ರಯಾಣಿಸುವವರ ಕಥೆ ಏನೆಂಬುದು ತಿಳಿಯದಾಗಿದೆ. ಇಂಥಾ ಪ್ರಕರಣಗಳತ್ತ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಅವರು ನೀಡುವ ಸೂಚನೆಗಳೂ ಕೂಡ ಜಾರಿಗೆ ಬರುತ್ತಿಲ್ಲ ಎನ್ನುತ್ತಾರೆ ಹಲವಾರು ಸಿಬ್ಬಂದಿ.

By Veeresh

Leave a Reply

Your email address will not be published. Required fields are marked *

Verified by MonsterInsights