ಬೆಂಗಳೂರು – ಸಿಲಿಕಾನ್ ಸಿಟಿಯ ಜನರಿಗೆ ಸರ್ಕಾರದ ವತಿಯಿಂದ 100 ಬಿಎಂಟಿಸಿ ಎಲೆಕ್ರ್ಟಿಕಲ್ ಬಸ್ ಗಳ ಲೋಕಾರ್ಪಣೆ ಕಾರ್ಯಕ್ರಮಕ್ಕೆ ವಿಧಾನಸೌಧದ ಮುಂಭಾಗದಲ್ಲಿ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು.
ಎಲೆಕ್ಟ್ರಿಕಲ್ ಬಸ್ ಗಳು ಜನಸ್ನೇಹಿ ಪ್ರಯಾಣಕ್ಕೆ ಅನುಕೂಲ – ಸಿಎಂ ಸಿದ್ದರಾಮಯ್ಯ..
ಇಂದಿನಿಂದ ಯುವನಿಧಿ ಯೋಜನೆಗೆ ಚಾಲನೆ ಕೊಡುತ್ತಿದ್ದೇವೆ, ನೋಂದಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ಬಿಎಂಟಿಸಿ ಹಾಗೂ ಟಾಟಾ ಮೋಟರ್ಸ್ ಸಹಯೋಗದೊಂದಿಗೆ 100 ಎಲೆಕ್ಟ್ರಿಕಲ್ ಬಸ್ ಗಳ ಲೋಕಾರ್ಪಣೆ ಕಾರ್ಯಕ್ರಮ ನೆರವೇರುತ್ತಿದೆ. ಬೆಂಗಳೂರು ಜನರ ಪ್ರಯಾಣಕ್ಕೆ ಅನುಕೂಲ ಮಾಡಿಕೊಡುತ್ತಿದ್ದೇವೆ. 1600 ಎಲೆಕ್ಟ್ರಿಕಲ್ ಬಸ್ ಗಳನ್ನ ಏಪ್ರಿಲ್ ಒಳಗೆ ಬಿಎಂಟಿಸಿಯಲ್ಲಿ ಸೇರ್ಪಡೆಯಾಗುತ್ತಿವೆ, ಇವೆಲ್ಲಾ ಬಸ್ ಗಳನ್ನ ನಮ್ಮ ರಾಜ್ಯದಲ್ಲೇ ತಯಾರಾಗುತ್ತಿದೆ ಅನ್ನೋದು ಖುಷಿಯ ವಿಚಾರ, ಇದರಿಂದ ಸಾರಿಗೆ ಸುಗಮ ಜೊತೆಗೆ ವಾಯುಮಾಲಿನ್ಯ ಕಡಿಮೆ ಆಗುತ್ತಿದೆ…ಶಕ್ತಿ ಯೋಜನೆಯಿಂದ ಎಲ್ಲಾ ಮಹಿಳೆಯರಿಗೆ ಹೆಚ್ಚು ಉಪಯೋಗವಾಗುತ್ತಿದೆ ಹಿಂದಿನ ಯಾವ ಸರ್ಕಾರವೂ ಮಾಡಲಿಲ್ಲ, ಬರೀ ಟೀಕೆ ಮಾಡ್ತಾರೆ, ನಾನು ವಿರೋಧ ಪಕ್ಷವನ್ನ ಕೇಳುತ್ತೇನೆ ನಿವ್ಯಾಕೆ ಈ ರೀತಿಯ ಕಾರ್ಯಕ್ರಮ ಮಾಡಲಿಲ್ಲ ಎಂದು ಕೆಳೋಕೆ ಬಯಸುತ್ತೇನೆ, ಹಾಗೆ ಮುಂದಿನ ಚುನಾವಣೆಯಲ್ಲಿ ಮಹಿಳೆಯರು ವಿರೋಧ ಪಕ್ಷದವರಿಗೆ ತಕ್ಕ ಪಾಠ ಕಲಿಸುತ್ತಾರೆ. ಶಕ್ತಿಯೋಜನೆಯಿಂದ ದೇವಸ್ಥಾನದ ಆದಾಯ ಹೋಟೆಲ್ ಉದ್ಯಮ, ಪ್ರವಾಸೋದ್ಯಮದಲ್ಲಿ ಆದಾಯ ಹೆಚ್ಚಿದೆ ಎಂದು ತಿಳಿಸಿದರು..
ಶಕ್ತಿ ಯೋಜನೆಯಿಂದ ಸರ್ಕಾರಕ್ಕೆ ನಷ್ಟ ಆಗ್ತಾಯಿಬಹುದು ಆದರೆ…? – ಡಿಸಿಎಂ
ಡಿಸಿಎಂ ಡಿ.ಕೆ. ಶಿವಕುಮಾರ್ ಮಾತನಾಡಿ ದೇಶದ ಇತಿಹಾಸ ಸೃಷ್ಠಿ ಮಾಡಲು ಸರ್ಕಾರ ಶಪಥ ಮಾಡಿದೆ. ಇದೊಂದು ದಿಟ್ಟ ಮೈಲಿಗಲ್ಲು ಇದಾಗಿದೆ. ಮುಂದಿನ ವರ್ಷದ ಕೊನೆಯೊಳಗೆ ಸಂಪೂರ್ಣ ಎಲೆಕ್ಟ್ರಿಕಲ್ ಬಸ್ ಮಯವಾಗಲಿದೆ. ವಿಶ್ವವನ್ನೆ ಆಕರ್ಷಣೆ ಮಾಡಲಿಕ್ಕೆ ನಾವು ತಯಾರಿದ್ದೇವೆ, ವಾಯುಮಾಲಿನ್ಯ ಬಗ್ಗೆ ಅನೇಕ ಕ್ರಮಗಳನ್ನ ತೆಗೆದುಕೊಳ್ಳಲಾಗ್ತಿದೆ.ಇನ್ನೂ ಶಕ್ತಿ ಯೋಜನೆಯಿಂದ ನಷ್ಟ ಆಗಿರಬಹುದು ಆದರೆ ವಹಿವಾಟು ಹೆಚ್ಚಾಗಿದೆ ಎಂದು ಡಿಸಿಎಂ ಹೇಳಿದರು. ನಮ್ಮ ಗ್ಯಾರಂಟಿಗಳನ್ನ ಮೋದಿ ಗ್ಯಾರಂಟಿ ಎಂದು ನಮ್ಮನ್ನ ಫಾಲೋ ಮಾಡ್ತಾ ಇದ್ದಾರೆ ಅವರಿಗೆ ಒಳ್ಳೆಯದಾಗಲಿ.
ಸಂಪೂರ್ಣವಾಗಿ ಎಲೆಕ್ಟ್ರಿಕಲ್ ಬಸ್ ಗುರಿ – ರಾಮಲಿಂಗಾರೆಡ್ಡಿ.
ಇದೇ ವೇಳೆ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ನಮ್ಮ ಬಿಎಂಟಿಸಿ ವತಿಯಿಂದ ಬಸ್ ಗಳಿಗೆ ಚಾಲನೆ ಕೊಡ್ತೀದ್ದಾರೆ, ಇವೆಲ್ಲಾ ಟಾಟಾ ಸಂಸ್ಥೆಯ ಬಸ್ ಗಳಾಗಿದೆ 970 ಒಟ್ಟು ಒಟ್ಟು ಒಡಾಡಲಿವೆ.ವಿದ್ಯುತ್ ಚಾಲಿತ ಬಸ್ ಗಳ ಸಂಖ್ಯೆ ದೆಹಲಿ ಬಿಟ್ಟರೆ ಬೆಂಗಳೂರು ಎರಡನೇ ಸ್ಥಾನಕ್ಕೆ ಹೋಗಲಿದೆ ಇನ್ನೂ ಮುಂದೆ ಎಲೆಕ್ಟ್ರಿಕಲ್ ಬಸ್ ಸಂಚಾರವಾದಲ್ಲಿ ವಾಯುಮಾಲಿನ್ಯ ತಗ್ಗಿಸಲು ಅನುಕೂಲವಾಗುತ್ತೆ, ಕೇಂದ್ರದಿಂದಲೂ ಕೂಡ ವಾಯಮಾಲಿನ್ಯ ತಗ್ಗಿಸಲು ಸೂಚನೆ ಕೊಟ್ಟಿದ್ದಾರೆ. ಇಂದಿಗೆ ಒಟ್ಟು 120 ಕೋಟಿ ಹೆಚ್ಚು ಜನ ಶಕ್ತಿ ಯೋಜನೆಯಲ್ಲಿ ಪ್ರಯಾಣ ಮಾಡಿದ್ದಾರೆ. ಮುಂದಿನ ಮಾರ್ಚ್ ವೇಳೆಗೆ ಸಿಬ್ಬಂದಿ ನೇಮಕಾತಿ ಮಾಡಕೊಳ್ಳಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿರಾದ ರಾಮಲಿಂಗಾರೆಡ್ಡಿ, ಶರಣುಪ್ರಕಾಶ್ ಪಾಟೀಲ್, ನಾಗೇಂದ್ರ, ಪ್ರಿಯಾಂಕ ಖರ್ಗೆ ಎಂ ಸಿ ಸುಧಾಕರ್, ಶಾಸಕರಾದ ವಿನಯ್ ಕುಲಕರ್ಣಿ, ಟಿ.ಎ ಶರವಣ, ನಜೀರ್ ಅಹಮದ್ ಸಿಎಂ ರಾಜಕೀಯ ಕಾರ್ಯದರ್ಶಿ ಗೊವೀಂದ್ ರಾಜು, ಯು ಬಿ ವೆಂಕಟೇಶ್ ಸೇರಿ ಬಿಎಂಟಿಸಿ ಎಂ.ಡಿ ಸತ್ಯವತಿ ಕಾರ್ಯಕ್ರಮದಲ್ಲಿ ಭಾಗವಹಿಸದ್ದರು.