Top Newsಕ್ರೈಂ ಸ್ಟೋರಿಸುದ್ದಿ

ತಮಟಗಾರ ಸಹೋದರನಿಂದ ಪೋಲಿಸ್ ಮೇಲೆ ಬ್ಲೇಡ್​​​​​​ನಿಂದ ಹಲ್ಲೆ…!!

ಧಾರವಾಡ: ಕಾರ ಪಾರ್ಕಿಂಗ್ ವಿಚಾರಕ್ಕೆ ಕಾಂಗ್ರೆಸ್ ಮುಖಂಡನ ಸಹೋದರರಿಂದ ಪೊಲೀಸ್ ಪೇದೆವೊಬ್ಬರ ಮೇಲೆ ಬ್ಲೇಡ್’ನಿಂದ ಹಲ್ಲೆ ಮಾಡಿರುವ ಘಟನೆ ಧಾರವಾಡದಲ್ಲಿ ನಡೆದಿದೆ.

ಕೈ ಮುಖಂಡ ಇಸ್ಮಾಯಿಲ್ ತಮಟಗಾರ ಅವರ ಸಹೋದರ ಇಕ್ವಾಲ್ ತಮಟಗಾರ, ಅಮಿರ್ ತಮಟಗಾರ ಮತ್ತು ಅಜಮತ್ ಅಲಿ ಮುಲ್ಲಾ ಎಂಬಾತರೇ ಹಲ್ಲೇ ಮಾಡಿದ್ದು, ಡಿಆರ್ ಪೊಲೀಸ್ ಪೇದೆ ಬಸವರಾಜ ಕಮತರ ಹಲ್ಲೆಗೆ ಒಳಗಾದ ಪೊಲೀಸ್ ಪೇದೆಯಾಗಿದ್ದಾರೆ.

ಧಾರವಾಡದ ಐಸ್ ಗೇಟ್ ಬಳಿಯಲ್ಲಿ ಮದ್ಯರಾತ್ರಿ ಪಾರ್ಕಿಂಗ್ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ಬ್ಲೆಡ್ ನಿಂದ ಪೊಲೀಸ್ ಪೇದೆ ಬಸವರಾಜ ಅವರ ಮುಖಕ್ಕೆ ಹಲ್ಲೆ ಮಾಡಿದ್ದಾರೆ. ಪರಿಣಾಮ ಬಸವರಾಜ ಕಮತರ ಅವರಿಗೆ ಸ್ಥಳೀಯ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.

ಈ ಕುರಿತು ಧಾರವಾಡ ಉಪನಗರ ಠಾಣೆಯಲ್ಲಿ ಹಲ್ಲೆ ಮಾಡಿದ ಕೈ ಮುಖಂಡನ ಸಹೋದರರ ಮೇಲೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಮೂವರನ್ನು ಬಂಧನ ಮಾಡಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

Comments (0)

Your email address will not be published. Required fields are marked *

Back to top button