ಬೆಂಗಳೂರು: ಮೆಟ್ರೋ ನಿಲ್ದಾಣಗಳಿಗೆ ನಟ ಶಂಕರ್ ನಾಗ್ ಮತ್ತು ನಟಿ, ನಿರೂಪಕಿ ಅಪರ್ಣಾ ಹೆಸರು ನಾಮಕರಣ ಮಾಡುವಂತೆ ಸರ್ಕಾರಕ್ಕೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಒತ್ತಾಯಿಸಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಹಾಕಿರುವ ಅವರು, ಕನ್ನಡ ಚಿತ್ರರಂಗದ ಮೇರು ನಟ ಶಂಕರ್ ನಾಗ್ ಹಾಗೂ ಕನ್ನಡಿಗರ ಮನದಲ್ಲಿ ಅಚ್ಚಳಿಯದೆ ಉಳಿದಿರುವ ಅಪರ್ಣಾ ಅವರ ಕೊಡುಗೆ ಕರ್ನಾಟಕಕ್ಕೆ ಹಾಗೂ ಕನ್ನಡಕ್ಕೆ ಅಪಾರವಾದುದು. ಶಂಕರ್ ನಾಗ್ ಹಾಗೂ ಅಪರ್ಣಾ ಅವರ ಹೆಸರುಗಳನ್ನು ಬೆಂಗಳೂರು ಮೆಟ್ರೋ ನಿಲ್ದಾಣಗಳಿಗೆ ಸರ್ಕಾರ ನಾಮಕರಣ ಮಾಡಲಿ ಎಂದು ಎಂದು ಯತ್ನಾಳ್ ಬೇಡಿಕೆ ಇಟ್ಟಿದ್ದಾರೆ
ಶ್ವಾಸಕೋಶ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ನಿರೂಪಕಿ ಅಪರ್ಣಾ ಈಚೆಗೆ ನಿಧನರಾದರು. ಅಪರ್ಣಾ ಅವರ ನಿಧನಕ್ಕೆ ಗಣ್ಯರು, ಸೆಲೆಬ್ರಿಟಿಗಳು ಸಂತಾಪ ಸೂಚಿಸಿದ್ದಾರೆ. ನಮ್ಮ ಮೆಟ್ರೋ ದನಿಯಾಗಿದ್ದ ನಿರೂಪಕಿಗೆ ಮೆಟ್ರೋ ಕೂಡ ಗೌರವ ಸಲ್ಲಿಸಿತ್ತು.
Phone Number : +91-9164072277
Email id : salesatfreedomtv@gmail.com