ಮುಡಾ ಸೈಟ್ ಹಂಚಿಕೆ ಅಕ್ರಮ ಹಾಗೂ ವಾಲ್ಮೀಕಿ ನಿಗಮದ ಹಗರಣದಿಂದಾಗಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಪತನದ ಭೀತಿ ಆರಂಭವಾಗಿದೆ. ಸರ್ಕಾರದಲ್ಲಿನ ಹಗರಣಗಳಿಂದ ಕಾಂಗ್ರೆಸ್ ವರಿಷ್ಠರಿಗೂ ಮುಜುಗರ ತಂದಿದೆ. ಇದರ ಜೊತೆಗೆ ಸಿದ್ದರಾಮಯ್ಯರನ್ನ ಕುರ್ಚಿಯಿಂದ ಬೀಳಿಸಲು ಇನ್ನೊಂದು ಬಣ ತುದಿಗಾಲಲ್ಲಿ ಕೈ ಹಾಕಿ ನಿಂತಿದೆ. ಇದರ ನಡುವೆ ಕಾಂಗ್ರೆಸ್ಗೆ ಆಘಾತ ಕೊಡೋ ಸುದ್ದಿ ಕೊಟ್ಟಿದ್ದಾರೆ ಮಾಜಿ ಸಿಎಂ, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ.
ಮುಡಾ ಹಗರಣ ವಿರೋಧಿಸಿ ಬಿಜೆಪಿ-ಜೆಡಿಎಸ್ ಮೈಸೂರಿಗೆ ಬೃಹತ್ ಪಾದಯಾತ್ರೆ ನಡೆಸುತ್ತಿದೆ. ಈ ಪಾದಯಾತ್ರೆ ವೇಳೆ ಮಾತನಾಡಿರುವ ಹೆಚ್ಡಿಕೆ, ಹೊಸ ಸರ್ಕಾರ ರಚನೆಯ ಹೊಸ ಗುಟ್ಟು ಬಿಟ್ಟುಕೊಟ್ಟಿದ್ದಾರೆ. ರಾಜ್ಯದಲ್ಲಿ ಮತ್ತೆ ಎನ್ಡಿಎ ಸರ್ಕಾರವನ್ನು ತರಲು ಒಟ್ಟಾಗಿ ಕೆಲಸ ಮಾಡ್ತಿದ್ದೀವಿ ಎಂದಿದ್ದಾರೆ. ಮುಂದಿನ ದಿನಗಳಲ್ಲಿ ಸಮ್ಮಿಶ್ರ ಸರ್ಕಾರವನ್ನು ಮರಳು ತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ ಎಂದಿದ್ದಾರೆ. ಅಲ್ದೇ ಸಿಎಂ ಯಾರು ಆಗ್ಬೇಕು ಅನ್ನೋದಕ್ಕಿಂತ ಕಾರ್ಯಕರ್ತರು ಮೊದಲು ಒಟ್ಟಿಗೆ ಕೆಲಸ ಮಾಡಿ ಅಂತಲೂ ಕರೆ ನೀಡಿದ್ದಾರೆ.
ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿಯವರ ಈ ಹೇಳಿಕೆ ರಾಜಕೀಯ ಪಡಸಾಲೆಯಲ್ಲಿ ಭಾರೀ ಕುತೂಹಲ ಮೂಡಿಸಿದೆ. ಒಂದು ಕಡೆ ಸಿದ್ದರಾಮಯ್ಯರನ್ನ ಕೆಳಗಿಳಿಸಬೇಕು ಅನ್ನೋ ಹೊತ್ತಿಲ್ಲೇ ತೂರಿಬಂದ ಈ ಹೇಳಿಕೆ, ಕಾಂಗ್ರೆಸ್ಗೆ ಶಾಕ್ ಕೊಟ್ಟಿರೋದಂತೂ ಸತ್ಯ.