ಬಿಜೆಪಿ ಹೈಕಮಾಂಡ್ 33 ಹಾಲಿ ಸಂಸದರಿಗೆ ಟಿಕೆಟ್ ನಿರಾಕರಿಸಿದ. ಶನಿವಾರ ಪ್ರಕಟಿಸಿದ 195 ಅಭ್ಯರ್ಥಿಗಳ ಪಟ್ಟಿಯಲ್ಲಿ 33 ಕ್ಷೇತ್ರಗಳಲ್ಲಿ ಹಾಲಿ ಸಂಸದರನ್ನು ಕಡೆಗಣಿಸಿ ಹೊಸಬರಿಗೆ, ವಲಸಿಗರಿಗೆ ಮಣೆ ಹಾಕಿದೆ.
ಅಸ್ಸಾಂನ ಐವರು ಹಾಲಿ ಸಂಸದರು.. ಛತ್ತೀಸ್ಘಡದ ನಾಲ್ವರು ಹಾಲಿ ಸಂಸದರು, ದೆಹಲಿಯ ನಾಲ್ವರು ಹಾಲಿ ಸಂಸದರು.. ಗುಜರಾತ್ನ ಐವರು ಹಾಲಿ ಸಂಸದರು… ಜಾರ್ಖಂಡ್ನ ಇಬ್ಬರು ಹಾಲಿ ಸಂಸದರು ಮತ್ತು. ಗುಜರಾತ್ನಲ್ಲಿ ಏಳು ಹಾಲಿ ಸಂಸದರು ಸೇರಿ ಹಲವು ರಾಜ್ಯಗಳಲ್ಲಿ ಕೆಲವು ಹಾಲಿ ಸಂಸದರಿಗೆ ಬಿಜೆಪಿ ಹೈಕಮಾಂಡ್ ಟಿಕೆಟ್ ನಿರಾಕರಿಸಿದೆ.
ದೆಹಲಿಯಲ್ಲಿ ಸಚಿವೆ ಮೀನಾಕ್ಷಿ ಲೇಖಿ, ಕೇಂದ್ರದ ಮಾಜಿ ಮಂತ್ರಿ ಹರ್ಷವರ್ಧನ್, ರಮೇಶ್ ಬಿಧೂರಿ, ಪರ್ವೇಶ್ ವರ್ಮಾಗೆ ಬಿಜೆಪಿ ಟಿಕೆಟ್ ನೀಡಿಲ್ಲ.
ಮಧ್ಯಪ್ರದೇಶದ ಭೋಪಾಲ್ ಸಂಸದೆ, ಪ್ರಖರ ಹಿಂದುತ್ವವಾದಿ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಅವರನ್ನು ಬಿಜೆಪಿ ನಿರ್ಲಕ್ಷ್ಯ ಮಾಡಿದೆ.
ಜಾರ್ಖಂಡ್ನಲ್ಲಿ ಕೇಂದ್ರದ ಮಾಜಿ ಮಂತ್ರಿ ಯಶವಂತ ಸಿನ್ಹಾ ಅವರ ಪುತ್ರ ಜಯಂತ್ ಸಿನ್ಹಾಗೆ ಟಿಕೆಟ್ ಘೋಷಣೆ ಆಗಿಲ್ಲ, ಟಿಕೆಟ್ ಸಿಗಲ್ಲ ಎಂಬ ಸುಳಿವರಿತೇ ಜಯಂತ್ ಸಿನ್ಹಾ ತಮಗೆ ಟಿಕೆಟ್ ಬೇಡ ಎಂದು ಬಹಿರಂಗವಾಗಿ ಹೈಕಮಾಂಡ್ಗೆ ಮನವಿ ಮಾಡಿದ್ದರು.
ಜಾರ್ಖಂಡ್ನ ಮೂರು ಬಾರಿಯ ಸಂಸದ ಸುದರ್ಶನ್ ಭಗತ್ ಸ್ಥಾನದಲ್ಲಿ ಬಿಜೆಪಿ ಹೊಸಬರನ್ನು ಕಣಕ್ಕೆ ಇಳಿಸುತ್ತಿದೆ.
ಈ ಬೆಳವಣಿಗೆ ರಾಜ್ಯ ಬಿಜೆಪಿಯ ಕೆಲವು ಸಂಸದರಿಗೆ ಆತಂಕ ತಂದೊಡ್ಡಿದೆ. ವಯಸ್ಸು, ಕಾರ್ಯದಕ್ಷತೆಯ ಆಧಾರದ ಮೇಲೆ ಕೆಲವರಿಗೆ ಟಿಕೆಟ್ ನೀಡದಿರಲು ಬಿಜೆಪಿ ಹೈಕಮಾಂಡ್ ತೀರ್ಮಾನಿಸಿದೆ. ಕನಿಷ್ಠ ಏಳರಿಂದ ಎಂಟು ಸಂಸದರಿಗೆ ಈ ಬಾರಿ ಟಿಕೆಟ್ ಸಿಗುವುದು ಅನುಮಾನ ಎನ್ನಲಾಗುತ್ತಿದೆ.