ಇನ್ಮುಂದೆ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟವಾಗಿ ಬಿರಿಯಾನಿ ಹಾಗೂ ಎಗ್ರೈಸ್ ಕೊಡಲಾಗುತ್ತೆ.. ಮಕ್ಕಳು ಇನ್ಮೇಲೆ ಶಾಲೆಯನ್ನೂ ಬಿರಿಯಾನಿ ಟೇಸ್ಟ್ ಮಾಡ್ಬೋದು, ಎಗ್ ರೈಸ್ ತಿನ್ನಬಹುದು. ಈ ಹೊಸ ನಿಯಮ ನಮ್ಮಲ್ಲಿ ಅಲ್ಲ, ಪಕ್ಕದ ಕೇರಳದಲ್ಲಿ..
ಕೇರಳ ಸರ್ಕಾರವು ರಾಜ್ಯದ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಊಟದಲ್ಲಿ ಪೌಷ್ಟಿಕತೆಯನ್ನು ಹೆಚ್ಚಿಸುವ ಉದ್ದೇಶದಿಂದ ಹೊಸ ಮೆನು ಸಿದ್ಧಪಡಿಸಿದೆ. ಈ ಹೊಸ ಮೆನುವಿನಲ್ಲಿ ಮೈಕ್ರೋಗ್ರೀನ್ಸ್, ಫ್ರೈಡ್ ರೈಸ್ ಮತ್ತು ಬಿರಿಯಾನಿಯಂತಹ ಆಹಾರಗಳನ್ನು ಸೇರಿಸಲಾಗಿದೆ. ತಜ್ಞರ ಸಮಿತಿಯ ವೈಜ್ಞಾನಿಕ ವಿಮರ್ಶೆಯ ಶಿಫಾರಸುಗಳ ಆಧಾರದ ಮೇಲೆ ಇದನ್ನು ಜಾರಿಗೆ ತರಲಾಗಿದೆ.
ಮೈಕ್ರೋಗ್ರೀನ್ಸ್: ಪೌಷ್ಟಿಕತೆಯಿಂದ ಕೂಡಿದ ಸಸ್ಯದ ಆಹಾರವನ್ನು ತಿಂಗಳಿಗೆ ಕನಿಷ್ಠ ಎರಡು ಬಾರಿ ಸಾಂಪ್ರದಾಯಿಕ ತರಕಾರಿಗಳ ಬದಲಿಗೆ ಬಳಸಲಾಗುವುದು.
ಫ್ರೈಡ್ ರೈಸ್ ಮತ್ತು ಬಿರಿಯಾನಿ: ಶಾಲೆಯಲ್ಲಿ ಒಂದು ದಿನ ವೆಜಿಟೇಬಲ್ ಫ್ರೈಡ್ ರೈಸ್, ಲೆಮನ್ ರೈಸ್ ಅಥವಾ ವೆಜಿಟೇಬಲ್ ಬಿರಿಯಾನಿಯನ್ನು ತಯಾರಿಸಿ ನೀಡಲಾಗುತ್ತದೆ.
ಪಪ್ಪು, ಕಾಳುಗಳು: ಹೆಸರು ಕಾಳು, ಹಸಿರು ಬಟಾಣಿಯಂತಹ ಕಾಳುಗಳನ್ನು ಪ್ರೋಟೀನ್ ಅಂಶವನ್ನು ಹೆಚ್ಚಿಸಲು ಆಗಾಗ್ಗೆ ಬಳಸಲಾಗುವುದು.
ಚಟ್ನಿ : ಪುದಿನ, ಶುಂಠಿ, ನೆಲ್ಲಿಕಾಯಿ, ಮತ್ತು ಕಚ್ಚಾ ಮಾವಿನಿಂದ ತಯಾರಿಸಿದ ವಿಶೇಷ ಚಟ್ನಿಯನ್ನು ಲೆಮನ್ ರೈಸ್, ವೆಜಿಟೇಬಲ್ ರೈಸ್ ಅಥವಾ ಬಿರಿಯಾನಿಯೊಂದಿಗೆ ಸರ್ವ್ ಮಾಡಲಾಗುವುದು, ಇದು ರುಚಿಯ ಜೊತೆಗೆ ಆರೋಗ್ಯ ಪ್ರಯೋಜನಗಳನ್ನೂ ನೀಡುತ್ತದೆ
ಸಾಂಪ್ರದಾಯಿಕ ಧಾನ್ಯಗಳು: ರಾಗಿ ಬಾಲ್ಸ್, ರಾಗಿ ಕೊಝುಕಟ್ಟ, ಕ್ಯಾರಟ್ ಪಾಯಸಂ, ಮತ್ತು ಇತರ ಧಾನ್ಯಗಳಿಂದ ತಯಾರಿಸಿದ ಪಾಯಸಂನಂತಹ ಖಾದ್ಯಗಳನ್ನು ಸೇರಿಸಲಾಗಿದೆ.
ಈ ಹೊಸ ಮೆನುವು ವಿದ್ಯಾರ್ಥಿಗಳಿಗೆ ಸಮತೋಲಿತ ಆಹಾರವನ್ನು ಒದಗಿಸುವ ಗುರಿಯನ್ನು ಹೊಂದಿದೆ. ಮೈಕ್ರೋಗ್ರೀನ್ಸ್ನಂತಹ ಸೂಪರ್ಫುಡ್ಗಳು ವಿಟಮಿನ್ಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿದ್ದು, ವಿದ್ಯಾರ್ಥಿಗಳ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತವೆ.